Home> Lifestyle
Advertisement

ಮಕ್ಕಳನ್ನು ಆರೋಗ್ಯಕರ ಆಹಾರ ಸೇವಿಸುವಂತೆ ಮಾಡುವುದು ಹೇಗೆ..?

ಇತ್ತೀಚಿನ ದಿನಗಳಲ್ಲಿ ಬೇಕರಿ, ಫುಡ್ಸ್ ಮತ್ತು ಸ್ನ್ಯಾಕ್ಸ್ ಗಳ ಮೇಲೆ ಹೆಚ್ಚಿನ ಆಕರ್ಷಣೆ ಆದರೆ ಅದ್ಯಾವುದು ಒಳ್ಳೆಯ ಪೋಷಕಂಶಗಳನ್ನು ದೇಹಕ್ಕೆ ನೀಡುವುದಿಲ್ಲ. ಆದರೆ ಮಕ್ಕಳು ಇಂದಿನ ದಿನಗಳಲ್ಲಿ ನೋಡುವ ಕಾರ್ಟೂನ್ ಗಳಿಂದ ಕಲಿಯುವುದು ಇವುಗಳನ್ನೇ !! ಅದಕ್ಕಾಗಿ ಮಕ್ಕಳು ಸರಿಯಾದ ಆಹಾರ ಸೇವಿಸುವಂತೆ ಈ ಕೆಲವು ಉಪಾಯಗಳನ್ನು ಬಳಸಬಹುದಾಗಿದೆ. 

ಮಕ್ಕಳನ್ನು ಆರೋಗ್ಯಕರ ಆಹಾರ ಸೇವಿಸುವಂತೆ ಮಾಡುವುದು ಹೇಗೆ..?

ಮಕ್ಕಳು ಆರೋಗ್ಯಕರ ಆಹಾರವನ್ನು ಸೇವಿಸದಿದ್ದರೆ, ಅವರು ಬೇಗನೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಕೆಲವು ಆರೋಗ್ಯ ಸಮಸ್ಯೆಗಳು ಬರುತ್ತಲೇ ಇರುತ್ತವೆ. ಅದಕ್ಕೇ ಅವರ ಆಹಾರದಲ್ಲಿ ಖಂಡಿತ ಆರೋಗ್ಯಕರ ಆಹಾರ ಇರಬೇಕು.

ಮಕ್ಕಳಿಗೆ ತಿಂಡಿ ಸಮಯದಲ್ಲಿ ಬಿಸ್ಕೆಟ್ ಮತ್ತು ಚಾಕಲೇಟ್‌ಗಳ ಹೊರತಾಗಿ ಬೀಜಗಳು ಮತ್ತು ಹಣ್ಣುಗಳನ್ನು ನೀಡಬೇಕು. ಆರೋಗ್ಯಕರ ಆಹಾರವನ್ನು ಸಾಮಾನ್ಯವಾಗಿ ಸೇವಿಸಿದರೆ ಮಕ್ಕಳು ಹೆಚ್ಚು ಆಸಕ್ತಿ ತೋರಿಸುವುದಿಲ್ಲ. ಆದರೆ ಅದರಲ್ಲಿರುವ ಪೌಷ್ಟಿಕಾಂಶದ ಮೌಲ್ಯಗಳು ಮತ್ತು ಅದನ್ನು ತಿನ್ನುವ ಪ್ರಯೋಜನಗಳ ಬಗ್ಗೆ ಅವರಿಗೆ ಹೇಳಬೇಕು. 

ವಿಭಿನ್ನ ರೀತಿಯ ಅಡುಗೆಯನ್ನು ತಯಾರಿಸಿ : ಮಕ್ಕಳಿಗೆ ಆಹಾರವನ್ನು ನೋಡಿದ ತಕ್ಷಣವೇ ತಿನ್ನುವ ಆಸೆಯಾಗುವ ಹಾಗೆ, ತರಕಾರಿ ಮತ್ತು ಹಣ್ಣುಗಳನ್ನು ವಿಭಿನ್ನ ಕತ್ತರಿಸಿ ಮಕ್ಕಳಿಗೆ ಇಷ್ಟವಾಗುವ ಮಾಡುವುದು ಇದೆಲ್ಲವೂ ಒಂದು ರೀತಿಯ ಉಪಾಯಗಳು. ಮೋಜಿನ ಆಕಾರಗಳಾಗಿ ರೂಪಿಸಲು ಕುಕೀ ಕಟ್ಟರ್‌ಗಳನ್ನು ಬಳಸುವುದು ಉತ್ತಮ. 

ಇದನ್ನು  ಓದಿ : ಖಾಸಗಿ ವೀಡಿಯೋ ಬ್ಲಾಕ್ ಮೇಲ್: ಮಾನಕ್ಕೆ ಹೆದರಿ ವಿಷ ಸೇವಿಸಿದ ಕುಟುಂಬ

ಆಹಾರ ತಯಾರಿಸುವಾಗ ಮಕ್ಕಳನ್ನು ಒಟ್ಟಿಗೆ ಸೇರಿಸಿಕೊಳ್ಳಿ : ನೀವು ಊಟ ತಾಯಾರಿಸುವಾಗ ಮಕ್ಕಳು ನಿಮ್ಮೊಟ್ಟಿಗೆ ಸೇರಿ ಅಡುಗೆ ತಯಾರಿಸಿದರೆ ಅವರು ತಿನ್ನುವ ಸಾಧ್ಯತೆ ಹೆಚ್ಚು ಮತ್ತು ಅವರೇ ತಯಾರಿಸಿದ್ದಲ್ಲಿ ಇನ್ನು ಹೆಚ್ಚು ಇಷ್ಟ ಪಟ್ಟು ತಿನ್ನುವ ಅವಕಾಶಗಳು ಇರುತ್ತವೆ. 

ಆರೋಗ್ಯಕರ ತಿಂಡಿಗಳು : ಸಕ್ಕರೆಯ ತಿಂಡಿಗಳ ಬದಲಿಗೆ ಹಣ್ಣುಗಳು, ಬೀಜಗಳು ಮತ್ತು ಮೊಸರು ಮುಂತಾದ ಆರೋಗ್ಯಕರ ತಿಂಡಿಗಳನ್ನು ತಿನ್ನುವುದನ್ನು ಅಭ್ಯಾಸ ಮಾಡಿಸಿ. 

ನೀವು ಮಕ್ಕಳೊಟ್ಟಿಗೆ ತಿನ್ನಿ : ಆರೋಗ್ಯಕರ ಆಹಾರವನ್ನು ನೀವೇ ಸೇವಿಸಿ ಅವರಿಗೆ ತೋರಿಸುವುದರಿಂದ ಅವರು ಹೆಚ್ಚಿನ ಆಸಕ್ತಿಯನ್ನು ತೋರಿಸಿ ಅವರು ಅದೇ ರೀತಿಯ ಆಹಾರವನ್ನು ತಿನ್ನಲು ಇಷ್ಟ ಪಡುತ್ತಾರೆ. ಮತ್ತು ಆಗ ಮಕ್ಕಳು ನಿಮ್ಮನ್ನು ನೋಡಿ ತಿನ್ನವುದರ ಜೊತೆಗೆ ಅವರು ಅದನ್ನೇ ಮುಂದುವರಿಸುವ ಸಾಧ್ಯತೆ ಇರುತ್ತದೆ. 

ಸಮತೋಲಿತ ಆಹಾರ : ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಪ್ರೋಟೀನ್‌ಗಳ ಮಿಶ್ರಣದ ಆದಷ್ಟು ತಯಾರಿಸಲು ಪ್ರಯತ್ನಿಸಿ ಮತ್ತು ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ತಯಾರಿಸಿ. 

ಮಕ್ಕಲಿಗೆ ಉತ್ತೇಜನ ನೀಡಿ : ಮಕ್ಕಳು ಆರೋಗ್ಯಕರ ಆಹಾರವನ್ನು ಆರಿಸಿದಾಗ ನೀವು ಧನಾತ್ಮಕವಾಗಿ ಪ್ರೋತ್ಸಾಹಿಸಿ ಮತ್ತು ಅದನ್ನೇ ಮುಂದುವರಿಸುವಂತೆ ನೋಡಿಕೊಳ್ಳಿ ಮತ್ತು ಅವರು ಆರಿಸಿರುವ ಆಹಾರವನ್ನೇ ತಿನ್ನುವಂತೆ ಉತ್ತೇಜನ ನೀಡಿ. 

ಇದನ್ನು  ಓದಿ : ತಮ್ಮ ಸಮಾಧಿಯ ಜಾಗವನ್ನು ತಾವೇ ಆಯ್ಕೆ ಮಾಡಿಕೊಂಡಿದ್ದರು ರಾಮೋಜಿ ರಾವ್! ಅದು ಎಲ್ಲಿದೆ, ಯಾಕೆ ಆ ಜಾಗ ಗೊತ್ತಾ? 

ಆರೋಗ್ಯಕರ ಅಭ್ಯಾಸಗಳು : ಆರೋಗ್ಯಕರ ಆಹಾರದ ಪ್ರಯೋಜನಗಳ ಬಗ್ಗೆ ಮತ್ತು ಅದು ಅವರ ದೇಹ ಮತ್ತು ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಮಕ್ಕಳಿಗೆ ಕಲಿಸಿ.

ನೀರು  : ಸಕ್ಕರೆ ಪಾನೀಯಗಳ ಬದಲಿಗೆ ನೀರನ್ನು ಹೆಚ್ಚಾಗಿ ಕುಡಿಯುವಂತೆ ಪ್ರೋತ್ಸಾಹಿಸಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More