Home> Lifestyle
Advertisement

Good And Bad Indications Of Crow: ಶುಭ ಹಾಗೂ ಅಶುಭಗಳ ಕುರಿತು ತುಂಬಾ ಮಹತ್ವದ ಸಂಕೇತಗಳನ್ನು ನೀಡುತ್ತದೆ ಯಮದೂತ ಕಾಗೆ

Good And Bad Indications Of Crow: ಪಿತೃ ಪಕ್ಷದಲ್ಲಿ ಕಾಗೆಗೆ ಆಹಾರ ನೀಡುವುದಕ್ಕೆ ತುಂಬಾ ಮಹತ್ವ ನೀಡಲಾಗಿದೆ. ಈ ರೀತಿ ಮಾಡದೆ ಹೋದಲ್ಲಿ ಶ್ರಾದ್ಧ ವಿಧಿ ಪೂರ್ಣಗೊಳ್ಳುವುದೇ ಇಲ್ಲ. ಶಾಸ್ತ್ರಗಳಲ್ಲಿ ಕಾಗೆಯನ್ನು ಯಮನ ದೂತ ಎಂದು ಭಾವಿಸಲಾಗಿದೆ. ಹೀಗಾಗಿ ಕಾಗೆಗೆ ಸಂಬಂಧಿಸಿದ ಸಂಕೇತಗಳು ಕೂಡ ತುಂಬಾ ವಿಶೇಷವಾಗಿವೆ.
 

Good And Bad Indications Of Crow: ಶುಭ ಹಾಗೂ ಅಶುಭಗಳ ಕುರಿತು ತುಂಬಾ ಮಹತ್ವದ ಸಂಕೇತಗಳನ್ನು ನೀಡುತ್ತದೆ ಯಮದೂತ ಕಾಗೆ

Good And Bad Indications Of Crow - ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಸಸ್ಯಗಳು, ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಕಾಗೆಯ ಬಗ್ಗೆ ಹೇಳುವುದಾದರೆ, ಈ ಕಪ್ಪು ಬಣ್ಣದ ಹಕ್ಕಿಯನ್ನು ಯಮನ ದೂತ ಎಂದು ಪರಿಗಣಿಸಲಾಗಿದೆ. ಕಾಗೆಗಳು ಮುಂದೆ ನಡೆಯುವ ಘಟನೆಗಳ ಬಗ್ಗೆ ಪೂರ್ವ ಮಾಹಿತಿ ನೀಡುತ್ತವೆ ಎಂದು ನಂಬಲಾಗಿದೆ. ಹಾಗಾಗಿ ಕಾಗೆಗೆ ಸಂಬಂಧಿಸಿದ ಅಪಶಕುನದ ಸಕೆತವನ್ನು ಎಂದಿಗೂ ನಿರ್ಲಕ್ಷಿಸಬಾರದು. ಶಕುನ ಶಾಸ್ತ್ರದಲ್ಲಿ ಕಾಗೆ ನೀಡುವ ಸಂಕೇತಗಳು ಮತ್ತು ಅವುಗಳಿಂದ ಬರುವ ಶುಭ ಮತ್ತು ಅಶುಭ ಫಲಿತಾಂಶಗಳನ್ನು ವಿವರವಾಗಿ ವಿವರಿಸಲಾಗಿದೆ.

ಕಾಗೆಯಿಂದ ಸಿಗುವ ಶುಭ ಮತ್ತು ಅಶುಭ ಸಂಕೇತಗಳು

>> ಮುಂಜಾನೆ, ಒಬ್ಬ ವ್ಯಕ್ತಿಯು ಮನೆ, ಬಾಲ್ಕನಿ ಅಥವಾ ಟೆರೇಸ್ಗೆ ಕಾಗೆ ಬಂದರೆ, ಅತಿಥಿಗಳು ಮನೆಗೆ ಆಗಮಿಸುತ್ತಾನೆ ಎಂದು ನಂಬಲಾಗಿದೆ. ಇದನ್ನು ಒಳ್ಳೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

>> ಶಕುನ್ ಶಾಸ್ತ್ರದ ಪ್ರಕಾರ, ಕಾಗೆಯು ಮಧ್ಯಾಹ್ನ ಉತ್ತರ ದಿಕ್ಕಿನಲ್ಲಿ ಕೂಗಿಕೊಳ್ಳುವುದು ಒಳ್ಳೆಯ ಸಂಕೇತವಾಗಿದೆ. ಹಾಗೆಯೇ ಪೂರ್ವ ದಿಕ್ಕಿನಿಂದ ಬರುವ ಕಾಗೆಯ ಸದ್ದು ಕೂಡ ಶುಭ ಸೂಚಕವಾಗಿದೆ. ಆದರೆ, ದಕ್ಷಿಣದಿಂದ ಬರುವ ಕಾಗೆಯ ಸದ್ದು ಅಶುಭ ಸೂಚಕ. ಇದು ಮನೆಯ ಸದಸ್ಯರಿಗೆ ದೊಡ್ಡ ಅನಾರೋಗ್ಯದ ಸಂಕೇತ ನೀಡುತ್ತದೆ. ಅಥವಾ ಇದು ಮನೆಯ ಯಾವುದಾದರೊಂದು ಸದಸ್ಯನ ದೊಡ್ಡ ಅಪಘಾತದ ಅಶುಭ ಸಂಕೇತವಾಗಿರಬಹುದು.

>> ಕಾಗೆಗಳ ಹಿಂಡು ಮನೆಯ ಮೇಲ್ಛಾವಣಿಯ ಮೇಲೆ ಕುಳಿತು ಕೂಗಿಕೊಳ್ಳುವುದು ಒಳ್ಳೆಯ ಸಂಕೇತವಲ್ಲ. ಇದು ಮುಂಬರುವ ಬಿಕ್ಕಟ್ಟಿನ ಸಂಕೇತವಾಗಿರಬಹುದು. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಇಷ್ಟ ದೇವನನ್ನು ಆರಾಧಿಸಿ. ದೇವಸ್ಥಾನಕ್ಕೆ ಹೋಗಿ, ಮಂತ್ರಗಳನ್ನು ಪಠಿಸಿ ಮತ್ತು ದೇವರನ್ನು ಪ್ರಾರ್ಥಿಸಿ.

>> ಶಕುನ ಶಾಸ್ತ್ರದಲ್ಲಿ ಕಾಗೆ ನೀರು ಕುಡಿಯುವುದನ್ನು ನೋಡುವುದು ಒಳ್ಳೆಯ ಸಂಕೇತ. ಇದು ಸಂಭವಿಸಿದಾಗ, ವ್ಯಕ್ತಿಯು ಹಣವನ್ನು ಗಳಿಸುತ್ತಾನೆ. ಯಾವುದಾದರೂ ಕೆಲಸಕ್ಕೆ ಹೋಗುವಾಗ ಕಾಗೆ ನೀರು ಕುಡಿಯುತ್ತಿರುವುದು ಕಂಡರೆ ಆ ಕೆಲಸದಲ್ಲಿ ಖಂಡಿತ ಯಶಸ್ಸು ಸಿಗುತ್ತದೆ ಎಂಬುದು ಧಾರ್ಮಿಕ ನಂಬಿಕೆ.

>> ಕಾಗೆ ಕುಕ್ಕಿದರೆ ಅದು ಒಳ್ಳೆಯ ಸಂಕೇತ ಎಂದು ಪರಿಗಣಿಸಲಾಗುವುದಿಲ್ಲ. ಇದು ಹಲವು ರೀತಿಯ ಸಂಕಟದ ಮುನ್ಸೂಚನೆಯಾಗಿದೆ. ಈ ಮುನ್ಸೂಚನೆ ಕಾಯಿಲೆಗಳಿಗೆ ಸಂಬಂಧಿಸಿರಬಹುದು ಅಥವಾ ಹಣದ ನಷ್ಟದ ಸಂಕೇತವೂ ಆಗಿರಬಹುದು.

>> ಕಾಗೆಯು ದೇಹದ ಯಾವುದೇ ಭಾಗವನ್ನು ಸ್ಪರ್ಶಿಸಿ ಹೋದರೆ ಅದು ಶುಭ ಸಂಕೇತ, ಆದರೆ ಅದೇ ಕಾಗಿ ತಲೆಯನ್ನು ಮುಟ್ಟಿ ಹೊಸರೆ ಅದು ತುಂಬಾ ಅಶುಭ. ಇದು ಗಂಭೀರ ಕಾಯಿಲೆ ಅಥವಾ ದೊಡ್ಡ ಸಂಕಟದ ಸಂಕೇತವಾಗಿದೆ.

ಇದನ್ನೂ ಓದಿ-Mangal Gochar 2022: ಶೀಘ್ರ ಮೇಷ ರಾಶಿ ಪ್ರವೇಶಿಸಲಿರುವ ಮಂಗಳ ಈ ರಾಶಿಯವರ ಮೇಲೆ ಹರಿಸಲಿದ್ದಾನೆ ಧನ ಸಂಪತ್ತು

>> ರೊಟ್ಟಿಯ ತುಣುಕನ್ನು ಬಾಯಿಯಲ್ಲಿ ಒತ್ತಿ ಕಾಗೆ ಹಾರುತ್ತಿರುವ ಕಾಗೆ ಕಂಡರೆ  ನಿಮ್ಮ ದೊಡ್ಡ ಆಸೆ ಈಡೇರುತ್ತದೆ ಎಂಬುದಕ್ಕೆ ಇದು ಶುಭ ಸಂಕೇತವಾಗಿದೆ.

ಇದನ್ನೂ ಓದಿ-Ketu gochar: ಮುಂದಿನ ಒಂದು ವರ್ಷದವರೆಗೆ ಈ 4 ರಾಶಿಯವರ ಮೇಲೆ ಕೃಪೆ ತೋರುತ್ತಾನೆ ಕೇತು

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿವೆ. ಜೀ ಕನ್ನಡ ಜ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Read More