Home> Lifestyle
Advertisement

ಜೀವನದಲ್ಲಿ ಕೆಟ್ಟ ಸಮಯ ನಡೆಯುತ್ತಿದ್ದಾಗ ಈ ವಿಚಾರಗಳು ನೆನಪಿರಲಿ, ಜಯ ಸಿಕ್ಕೇ ಸಿಗುತ್ತದೆ.!

ಯಶಸ್ಸನ್ನು ಪಡೆಯಲು, ವ್ಯಕ್ತಿಯೂ ತನ್ನ ಜೀವನದಲ್ಲಿ ಕೆಲವು ಗುಣಗಳನ್ನು ಹೊಂದಿರುವುದು ಅವಶ್ಯಕ. ಇದರೊಂದಿಗೆ ಚಾಣಕ್ಯನೀತಿಯಲ್ಲಿ ಹೇಳಿರುವ ಈ ವಿಷಯಗಳನ್ನು ಅಳವಡಿಸಿಕೊಂಡರೆ ಕಷ್ಟ-ಸಂಕಟಗಳಿಂದ ಪಾರಾಗುವುದಲ್ಲದೆ, ಶೀಘ್ರದಲ್ಲಿ ಯಶಸ್ಸು ಕೂಡ ಸಿಗುತ್ತದೆ.

ಜೀವನದಲ್ಲಿ ಕೆಟ್ಟ ಸಮಯ ನಡೆಯುತ್ತಿದ್ದಾಗ ಈ ವಿಚಾರಗಳು ನೆನಪಿರಲಿ, ಜಯ ಸಿಕ್ಕೇ ಸಿಗುತ್ತದೆ.!

ನವದೆಹಲಿ : ಜೀವನದಲ್ಲಿ ಏರಿಳಿತಗಳು ಸಹಜ. ಆದರೆ ಕೆಲವೊಮ್ಮೆ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ನಾವೇ ಕಾರಣರಾಗಿರುತ್ತೇವೆ (Chanakya Niti) . ನಮ್ಮ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳು ನಮಗೆ ಜೀವನದಲ್ಲಿ ಯಶಸ್ಸು ಅಥವಾ ವೈಫಲ್ಯವನ್ನು ನೀಡುತ್ತವೆ. ನಮ್ಮ ಜೀವನಕ್ಕೆ ಕೆಟ್ಟ ಕಾಲ ಕಾಲಿಡುವುದನ್ನು ಹೇಗೆ ತಪ್ಪಿಸಬಹುದು ಎನ್ನುವುದನ್ನು ಮಹಾನ್ ವಿದ್ವಾಂಸ ಆಚಾರ್ಯ ಚಾಣಕ್ಯರು ತಿಳಿಸಿದ್ದಾರೆ (Chanakya Niti for Success). ಜೀವನದಲ್ಲಿ ಕೆಲವೊಂದು ವಿಚಾರಗಳಿಂದ ದೂರ ಉಳಿಯುವಂತೆ ಅವರು ಸಲಹೆ ನೀಡಿದ್ದಾರೆ. 

ಈ ವಸ್ತುಗಳು ನಿಮ್ಮನ್ನು ಕೆಟ್ಟ ಸಮಯದಿಂದ ರಕ್ಷಿಸುತ್ತವೆ :
ಮೂರ್ಖ ವ್ಯಕ್ತಿಯಿಂದ ದೂರ ಇರುವುದು :

 ಚಾಣಕ್ಯ ನೀತಿಯಲ್ಲಿ ಯಾವಾಗಲೂ ಮೂರ್ಖರಿಂದ ದೂರವಿರಿ ಎಂದು ಹೇಳಲಾಗಿದೆ (Chanakya Niti). ಮೂರ್ಖನಿಗೆ ಜ್ಞಾನವನ್ನು ಕೊಡುವುದು ಮತ್ತು ಅವನಿಂದ ಜ್ಞಾನವನ್ನು ಪಡೆಯುವುದು ಎರಡೂ ನಿಮ್ಮನ್ನು ತೊಂದರೆಗೆ ಸಿಲುಕಿಸುವ ಕೆಲಸ ಮಾಡುತ್ತದೆ. ಅವರು ನಿಮ್ಮ ಸಮಯವನ್ನು ವ್ಯರ್ಥ ಮಾಡುತ್ತಾರೆ ಮಾತ್ರವಲ್ಲ ಅನಗತ್ಯ ತೊಂದರೆಗಳಲ್ಲಿ ನಿಮ್ಮನ್ನು ಸಿಲುಕಿಸುತ್ತಾರೆ (Chanakya Niti For Success). 
 
ಇದನ್ನೂ ಓದಿ :  Surya Grahan: ಶನಿಚಾರಿ ಅಮವಾಸ್ಯೆಯಂದು ವರ್ಷದ ಮೊದಲ ಸೂರ್ಯಗ್ರಹಣ! ಈ ರಾಶಿಯ ಜನರಿಗೆ ಅದೃಷ್ಟ

ಬಡವರಿಗೆ ದಾನ ಮಾಡಿ: 
ನಿಮ್ಮ ಆದಾಯದ ಒಂದು ಭಾಗವನ್ನು ಬಡವರಿಗೆ ದಾನ ಮಾಡಿ. ಆಚಾರ್ಯ ಚಾಣಕ್ಯರ ಪ್ರಕಾರ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಿಂದ ಪುಣ್ಯ ಬರುತ್ತದೆ. ಮಾತ್ರವಲ್ಲ, ಸಮಾಜದ ಕಡೆಗೆ ನಿಮ್ಮ ಜವಾಬ್ದಾರಿಯನ್ನು ಪೂರೈಸುವ ಮೂಲಕ ನಿಮ್ಮ ಮನಸ್ಸಿಗೂ ಶಾಂತಿ ಸಿಗುತ್ತದೆ (Chanakya Niti for life).  

ನಮ್ರತೆ: 
ಒಬ್ಬ ವ್ಯಕ್ತಿಯ ವಾಣಿ ಮಧುರವಾಗಿದ್ದರೆ,  ಅವನು ಅನೇಕ ಸಮಸ್ಯೆಗಳಿಂದ ಪಾರಾಗುವುದು ಸಾಧ್ಯವಾಗುತ್ತದೆ. ಆದರೆ ಕೋಪ, ದುಡುಕಿನ ಸ್ವಭಾವವು ವ್ಯಕ್ತಿಯನ್ನು ಅನೇಕ ಜಗಳಗಳಲ್ಲಿ ಸಿಲುಕಿಸುತ್ತದೆ. ಅವನ ಇಮೇಜ್ ಅನ್ನು ಹಾಳು ಮಾಡುತ್ತದೆ. ವಿನಮ್ರ ವ್ಯಕ್ತಿಯು ತ್ವರಿತವಾಗಿ ಪ್ರಗತಿ ಹೊಂದುತ್ತಾನೆ.  

ಇದನ್ನೂ ಓದಿ :  April 2022 ರಲ್ಲಿ ನಿರ್ಮಾಣಗೊಳ್ಳಲಿದೆ ಈ ದುರ್ಲಭ ಸಂಯೋಗ, 9 ಗ್ರಹಗಳ ರಾಶಿ ಬದಲಾವಣೆ, ಪ್ರಭಾವ ಹೇಗಿರಲಿದೆ?

ದೇವರ ಆರಾಧನೆ: 
ಜೀವನದಲ್ಲಿ ಯಾವುದೇ ಸಮಯದಲ್ಲಿ, ಯಾವಾಗಲೂ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿ. ದೇವರು ಸಾಕಷ್ಟು ದುಃಖವನ್ನು ನೀಡಿದ ನಂತರ ತನ್ನ ಕೃಪಾ ದೃಷ್ಟಿಯನ್ನು ಕೂಡಾ ಹಾರಿಸುತ್ತಾನೆ. ದೇವರ ಮೇಲಿನ ಭಕ್ತಿಯು ನಿಮಗೆ  ಜೀವನದಲ್ಲಿ ಎದುರಾಗುವ ಕೆಟ್ಟ ಸಮಯವನ್ನು ಎದುರಿಸಲು ಧೈರ್ಯವನ್ನು ನೀಡುತ್ತದೆ. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More