Home> Lifestyle
Advertisement

Fathers day 2023 : ಕಂಗಳಲ್ಲಿಯೆ ಪ್ರೀತಿಯ ಅಡಗಿಸಿಟ್ಟು ಜವಾಬ್ದಾರಿಯ ಸರಪಳಿಯಲ್ಲಿ ಬಂಧಿಯಾದ ಜೀವವೇ ʼಅಪ್ಪʼ

Fathers day : ಅಪ್ಪ, ಮನೆ ಎಂಬ ಪಾಠಶಾಲೆಯ ಗುರು. ಆತ ಮಕ್ಕಳ ಬಾಲ್ಯದಲ್ಲಿ ಶಿಸ್ತು ಸಂಸ್ಕಾರಗಳನ್ನು ಕಲಿಸುವ ಪ್ರಭಾವಶಾಲಿ ಶಕ್ತಿ. ತೊದಲು ನುಡಿಯುವಾಗ, ಭಾಷೆ ಕಲಿಯುವಾಗ, ಎಡವಿ ಬಿದ್ದಾಗ ಹೀಗೆ ಮಗುವಿನ ಬೆಳವಣಿಗೆಯ ಪ್ರತಿ ಹಂತದಲ್ಲಿಯೂ ಸೂಪರ್‌ ಸ್ಟಾರ್‌ ಅಪ್ಪ. 
 

Fathers day 2023 : ಕಂಗಳಲ್ಲಿಯೆ ಪ್ರೀತಿಯ ಅಡಗಿಸಿಟ್ಟು ಜವಾಬ್ದಾರಿಯ ಸರಪಳಿಯಲ್ಲಿ ಬಂಧಿಯಾದ ಜೀವವೇ ʼಅಪ್ಪʼ

Father : ಪ್ರತಿ ಮಗುವಿಗೂ ತಂದೆ ಎಂದರೆ ಪಂಚಪ್ರಾಣ. ಜೀವನದ ಮೊದಲ ಹಿರೋ, ಬೆಸ್ಟ್‌ ಫ್ರೆಂಡ್‌. ಮಗು ಯಾರು ಎಷ್ಟೇ ಬೈದರೂ ತಲೆಕೆಡಿಸಿಕೊಳ್ಳುವುದಿಲ್ಲ ಆದರೆ ಅಪ್ಪನ ಒಂದೇ ಬೈಗುಳಕ್ಕೆ ಮೌನವಾಗುತ್ತದೆ. ಸ್ವತಃ ಅಪ್ಪನೆ ಬಂದು ಸಮಾಧಾನ ಮಾಡುವವವರೆಗೂ ಕೋಪ ತಣ್ಣಗಾಗುವುದೇ ಇಲ್ಲ.  

ಇನ್ನು ತಂದೆಯ ಪ್ರಮುಖ ಗುಣವೆಂದರೆ ಅವನು ಯಾವಾಗಲೂ ತಾಳ್ಮೆಯಿಂದ ಇರುತ್ತಾನೆ ಮತ್ತು ಎಂದಿಗೂ ತನ್ನ ಕೋಪವನ್ನು ಕಳೆದುಕೊಳ್ಳುವುದಿಲ್ಲ. ಪ್ರತಿ ಹೆಜ್ಜೆಯಲ್ಲೂ, ಸಂದರ್ಭದಲ್ಲೂ ಶಾಂತವಾಗಿ ಯೋಚಿಸಿ ಮುನ್ನಡೆಯುತ್ತಾರೆ. ಮತ್ತು ಅತ್ಯಂತ ಗಂಭಿರವಾದ ವಿಷಯಗಳಲ್ಲಿಯೂ ಸಹ ತಾಳ್ಮೆಯನ್ನು ಕಾಪಾಡಿಕೊಳ್ಳುವ ವ್ಯಕ್ತಿತ್ವ ಅಪ್ಪ.

ಇದನ್ನೂ ಓದಿ-Relationship: ಒಂದು ಆರೋಗ್ಯಕರ ಸಂಬಂಧದಲ್ಲಿ ನಿಮ್ಮ ಸಂಘರ್ಷವನ್ನು ಎತ್ತಿ ತೋರಿಸುತ್ತವೆ ಈ ಸಂಕೇತಗಳು!

ತಂದೆಯ ಬಗ್ಗೆ ಕೆಲವು ಸಾಲುಗಳು ಇಲ್ಲಿವೆ :
ಮುಂದೆ ಎಷ್ಟೇ ಕೋಪ ತೋರಿಸಿದರು, ಮನಸಲ್ಲಿ ಬೆಟ್ಟದಷ್ಟು ಪ್ರೀತಿ ಹೊಂದಿರುವ ಜೀವ ʼಅಪ್ಪʼ 
ಕಂಗಳಲ್ಲಿಯೆ ಪ್ರೀತಿಯ ಅಡಗಿಸಿಟ್ಟು ಜವಾಬ್ದಾರಿಯ ಸರಪಳಿಯಲ್ಲಿ ಬಂಧಿಯಾದ ಜೀವವೇ ʼಅಪ್ಪʼ 
ಬಿದ್ದಾಗ ಕೈ ಹಿಡಿದು, ಅತ್ತಾಗ ಕಣ್ಣೀರು ಒರೆಸಿ, ದಾರಿ ಕಾಣದಿದ್ದಾಗ ಕೈ ಹಿಡಿದು ಮುನ್ನಡೆಸಿದ ಅದ್ಭುತ ಶಕ್ತಿ ಅಪ್ಪ
ಅಪ್ಪ ಎಂದರೆ ಆಕಾಶ, ಮುಗಿಲೆತ್ತರದ ನಂಬಿಕೆ 
ಬೇಡಿದ್ದನ್ನೆಲ್ಲಾ ಕೊಡುವವನು ದೇವರಾದರೇ, ಬೇಡದೇ ಬಯಸಿದ್ದನ್ನೆಲಾ ಕೊಡುವವನು ತಂದೆ

ಸಾಮಾನ್ಯವಾಗಿ, ಜನರು ತಾಯಿಯ ಪ್ರೀತಿ ಮತ್ತು ವಾತ್ಸಲ್ಯದ ಬಗ್ಗೆ ಮಾತನಾಡುತ್ತಾರೆ. ಆದರೆ ತಂದೆಯ ಜವಾಬ್ದಾರಿಯ ಬಗ್ಗೆ ಯಾರು ಮಾತನಾಡುವುದಿಲ್ಲ. ಇನ್ನೂ ಸಿನಿಮಾಗಳಲ್ಲಿಯೂ ಸಹ ತಾಯಿಯ ಪ್ರೀತಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಜೀವ ಕೊಡುವವಳು ತಾಯಿಯಾದರೆ ಜೀವನ ಕೊಡುವನು ತಂದೆಯಾಗಿರುತ್ತಾನೆ. 

ಇದನ್ನೂ ಓದಿ-2 ದಿನಗಳಲ್ಲಿ ಆಷಾಢ ಅಮಾವಾಸ್ಯೆ..! ಈ ಪರಿಹಾರ ಮಾಡಿದ್ರೆ ನಿಮ್ಮ ದೋಷ ನಾಶ ಖಂಡಿತ

ಮನೆಯಲ್ಲಿ ಮಕ್ಕಳಿಗೆ ಯಾವುದೇ ಕೊರತೆಯಾದರೂ ಆ ತಂದೆ ಎಂಬ ಜೀವ ಸಹಿಸುವುದಿಲ್ಲ. ಪ್ರೀತಿಯ ವಿಚಾರದಲ್ಲಿ ನೋಡಿದರೆ ತಂದೆ ತಾಯಿ ನಮ್ಮ ಎರಡು ಕಣ್ಣುಗಳು. ಅಪ್ಪನ ಹೆಗಲೇರಿ ಕಲಿತ ಪಾಠಗಳೆಲ್ಲವೂ ಜೀವನದಲ್ಲಿ ಅನುಭವವಾಗುತ್ತಿವೆ. ತಾವು ಕೊರಗಿಯಾದರೂ ನಮ್ಮನ್ನು ಖುಷಿಯಾಗಿಡಲು ಪ್ರಯತ್ನಿಸುವ ಸ್ತಾರ್ಥವೇ ಇಲ್ಲದ ಜೀವ ಅಪ್ಪ. 

ಏನೇ ಆಗಲಿ ಜೀವನದಲ್ಲಿ ನಮ್ಮ ಮೇಲಿನ ಹಿಡಿತವನ್ನು ಕಳೆದುಕೊಳ್ಳಬಾರದು. ಎಲ್ಲವನ್ನು ಸಂಯಮ ಚಾತುರ್ಯದಿಂದ ಎದುರಿಸಬೇಕು ಎಂದು ಕಲಿಸಿಕೊಡುವ ತಾಳ್ಮೆಯ ಕಣಜ ತಂದೆ. ಶಿಸ್ತಿಗೆ ಇನ್ನೊಂದು ಹೆಸರೇ ಅಪ್ಪ. ಭವಿಷ್ಯದ ಯೋಚನೆ ಮಾಡಿ ಜೀವನದ ಮೌಲ್ಯಗಳು ಮತ್ತು ಶಿಷ್ಟಾಚಾರವನ್ನು ಕಲಿಸಿಕೊಟ್ಟ ಮಹಾಗುರು ತದೆ. ಏನು ಹೇಳಿದರೂ ಕಡಿಮೆಯೇ ಆ ಅದ್ಭುತ ವ್ಯಕ್ತಿದ ಬಗ್ಗೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More