Home> Lifestyle
Advertisement

Dussehra 2022: ಜೀವನದಲ್ಲಿನ ಕಷ್ಟ-ಕಾರ್ಪಣ್ಯಗಳಿಂದ ಮುಕ್ತಿ ಹೊಂದಬೇಕೆ? ನಾಳೆ ತಪ್ಪದೆ ಈ ಕೆಲಸ ಮಾಡಿ

Dussehra 2022: ಹಿಂದೂ ಧರ್ಮ ಶಾಸ್ತ್ರದಲ್ಲಿ ದಸರಾ ಅಥವಾ ವಿಜಯದಶಮಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ಹಬ್ಬವನ್ನು ಅಸತ್ಯದ ಮೇಲೆ ಸತ್ಯದ ವಿಜಯದ ಸಂಕೇತದ ರೂಪದಲ್ಲಿ ಆಚರಿಸಲಾಗುತ್ತದೆ. ಈ ದಿನ ಶ್ರೀರಾಮನು ರಾವಣನನ್ನು ಸಂಹರಿಸಿದ್ದು ಮತ್ತೊಂದು ಐತಿಹ್ಯ.
 

Dussehra 2022: ಜೀವನದಲ್ಲಿನ ಕಷ್ಟ-ಕಾರ್ಪಣ್ಯಗಳಿಂದ ಮುಕ್ತಿ ಹೊಂದಬೇಕೆ? ನಾಳೆ ತಪ್ಪದೆ ಈ ಕೆಲಸ ಮಾಡಿ

Dussehra 2022: ಹಿಂದೂ ಧರ್ಮಶಾಸ್ತ್ರಗಳಲ್ಲಿ ದಸರಾ ಅಥವಾ ವಿಜಯ ದಶಮಿ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ. ಈ ಹಬ್ಬವನ್ನು ಅಸತ್ಯದ ಮೇಲೆ ಸತ್ಯದ ವಿಜಯದ ಸಂಕೇತದ ರೂಪದಲ್ಲಿ ಆಚರಿಸಲಾಗುತ್ತದೆ. ಈ ದಿನ ಶ್ರೀರಾಮ ರಾವಣನನ್ನು ಸಂಹರಿಸಿದ ಎಂಬುದು ಮತ್ತೊಂದು ಐತಿಹ್ಯ. ದಸರಾ ದಿನದಂದು ಶ್ರೀರಾಮನ ಪೂಜೆಯನ್ನು ವಿಧಿ-ವಿಧಾನದ ಮೂಲಕ ನೆರವೇರಿಸಲಾಗುತ್ತದೆ. ದಸರಾ ದಿನದಂದು ಹವನ ಮಾಡುವುದನ್ನು ಸಹ ಅತ್ಯಂತ ಶ್ರೇಯಸ್ಕರ ಎಂದು ಪರಿಗಣಿಸಲಾಗುತ್ತದೆ. ಹವನವನ್ನು ಮಾಡುವುದರಿಂದ ಮನೆಯಲ್ಲಿ ಕಷ್ಟಕಾರ್ಪಣ್ಯಗಳು ನಿವಾರಣೆಯಾಗಿ, ಸುಖ-ಸಮೃದ್ಧಿ ಹೆಚ್ಚಾಗುತ್ತದೆ. 

ಇದನ್ನೂ ಓದಿ-Astro: ಯಾವುದೇ ಕೆಲಸವನ್ನು ಪೂರ್ಣಗೊಳಿಸಲು ತುಂಬಾ ಲೇಟ್ ಮಾಡುತ್ತಾರೆ ಈ 5 ರಾಶಿಗಳ ಜನ

ಹವನ ಮಾಡುವ ವಿಧಾನ...
ದಸರಾ ದಿನದಂದು ಬೆಳಗ್ಗೆ ಬೇಗ ಏಳಬೇಕು. ಸ್ನಾನ ಇತ್ಯಾದಿಗಳಿಂದ ನಿವೃತ್ತರಾದ ಬಳಿಕ, ಶುಭ್ರವಾದ ಬಟ್ಟೆಗಳನ್ನು ಧರಿಸಿ. ಶಾಸ್ತ್ರಗಳ ಪ್ರಕಾರ ಹವನದ ಸಮಯದಲ್ಲಿ ದಂಪತಿಗಳು ಒಟ್ಟಿಗೆ ಕುಳಿತುಕೊಳ್ಳಬೇಕು. ಸ್ವಚ್ಛವಾದ ಸ್ಥಳದಲ್ಲಿ ಹವನ ಕುಂಡವನ್ನು ನಿರ್ಮಿಸಿ. ಮಾವಿನ ಮರದ ಕಾಷ್ಠ ಮತ್ತು ಕರ್ಪೂರದ ಸಹಾಯದಿಂದ ಹವನ ಕುಂಡದಲ್ಲಿ ಅಗ್ನಿಯನ್ನು ಪ್ರತಿಷ್ಠಾಪಿಸಿ. ಹವನ ಕುಂಡದಲ್ಲಿರುವ ಎಲ್ಲಾ ದೇವ-ದೇವತೆಗಳ ಹೆಸರಿನಲ್ಲಿ ಆಹುತಿ ನೀಡಿ.  ಧಾರ್ಮಿಕ ನಂಬಿಕೆಗಳ ಪ್ರಕಾರ, ನೀವು ಕನಿಷ್ಠ ಪಕ್ಷ ಅಂದರೆ 108 ಆಹುತಿಗಳನ್ನು ನೀಡಬೇಕು. ಆದರೆ, ಅದಕ್ಕಿಂತ ಹೆಚ್ಚಿನ ಆಹುತಿಗಳನ್ನು ಕೂಡ ನೀವು ನೀಡಬಹುದು.  ಹವನ ಮುಗಿದ ನಂತರ, ಆರತಿ ಮಾಡಿ ಮತ್ತು ದೇವರಿಗೆ ನೈವೇದ್ಯ ಅರ್ಪಿಸಿ. ಈ ದಿನ ಕನ್ಯಾ ಪೂಜೆಗೆ ವಿಶೇಷ ಮಹತ್ವವಿದೆ. ಹವನದ ನಂತರ ನೀವು ಕನ್ಯಾ ಪೂಜೆಯನ್ನು ಸಹ ನೀವು ಕೈಗೊಳ್ಳಬಹುದು. 

ಇದನ್ನೂ ಓದಿ-ಸೂರ್ಯನಂತೆ ಹೊಳೆಯುವುದು 5 ರಾಶಿಯವರ ಅದೃಷ್ಟ ! 30 ದಿನಗಳಲ್ಲಿ ಪ್ರಾಪ್ತಿಯಾಗುವುದು ನಿರೀಕ್ಷೆಗೂ ಮೀರಿದ ಯಶಸ್ಸು

ಹವನ ಮಾಡಲು ಬೇಕಾಗುವ ಸಾಮಗ್ರಿಗಳು
ಮಾವಿನ ಮರದ ಕಟ್ಟಿಗೆಗಳು, ಬಿಲ್ವ, ಬೇವು, ಮುತ್ತುಗ ಸಸ್ಯ. ಕಲಿಗಂಜ, ದೇವದಾರ್ ಗಿಡದ ಬೇರುಗಳು, ಅಶ್ವತ್ಥ ಮರದ ತೊಗಟೆ, ಎಲೆ ಮತ್ತು ಕಾಂಡ, ಪ್ಲಮ್, ಮಾವಿನ ಎಲೆ ಮತ್ತು ಕಂಡ, ಶ್ರೀಗಂಧದ ಕಟ್ಟಿಗೆ, ಎಳ್ಳು, ಕರ್ಪೂರ, ಲವಂಗ, ಅಕ್ಕಿ, ಬ್ರಾಹ್ಮಿ, ಅಶ್ವಗಂಧದ ಬೇರು, ತುಪ್ಪ, ಸಕ್ಕರೆ, ಬಾರ್ಲಿ, ಗುಗ್ಗುಳ, ಸುಗಂಧ ದ್ರವ್ಯ, ಏಲಕ್ಕಿ, ಹಸುವಿನ ಸಗಣೆಯಿಂದ ತಯಾರಿಸಲಾಗಿರುವ ಕುಳ್ಳು, ತೆಂಗಿನಕಾಯಿ, ಕೆಂಪು ವಸ್ತ್ರ, ವೀಳ್ಯದೆಲೆ, ಬತ್ತಾಸು, ಪೂರಿ ಹಾಗೂ ಪಾಯಸ ಇತ್ಯಾದಿಗಳು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More