Home> Lifestyle
Advertisement

ಪಿಂಪಲ್ಸ್ ರಹಿತ, ಕಲೆ ಮುಕ್ತ ತ್ವಚೆ ನಿಮ್ಮದಾಗಬೇಕೇ? ನಿತ್ಯ ಈ ಡ್ರಿಂಕ್ಸ್ ಸೇವಿಸಿ

ಮೊಡವೆಗಳು ಮುಖದ ಸೌಂದರ್ಯದ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತವೆ. ಮಾತ್ರವಲ್ಲ, ಮೊಡವೆಗಳು ಮತ್ತು ಅದರಿಂದ ಉಂಟಾಗುವ ಕಲೆಗಳು ಜನರ ಆತ್ಮವಿಶ್ವಾಸವನ್ನು ಕೂಡ ಕುಗ್ಗಿಸುತ್ತವೆ. 

ಪಿಂಪಲ್ಸ್ ರಹಿತ, ಕಲೆ ಮುಕ್ತ ತ್ವಚೆ ನಿಮ್ಮದಾಗಬೇಕೇ? ನಿತ್ಯ ಈ ಡ್ರಿಂಕ್ಸ್ ಸೇವಿಸಿ

ಬೆಂಗಳೂರು: ಹದಿಹರೆಯದ ವಯಸ್ಸಿನಲ್ಲಿ ಮೊಡವೆ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಆದರೆ, ಅದರಿಂದ ಉಂಟಾಗುವ ಕಲೆಗಳು ಮುಖದ ಅಂದವನ್ನು ಕೆಡಿಸುತ್ತವೆ. ಇದರಿಂದ ಮುಕ್ತಿ ಪಡೆಯಲು ಜನರು ಇನ್ನಿಲ್ಲದ ಪ್ರಯತ್ನ ಮಾಡುತ್ತಾರೆ. ಆದಾಗ್ಯೂ, ಕೆಲವರಿಗೆ ನಿರೀಕ್ಷಿತ ಫಲಿತಾಂಶ ಲಭ್ಯವಾಗುವುದಿಲ್ಲ. ನೀವೂ ಕೂಡ ಅಂತಹವರಲ್ಲಿ ಒಬ್ಬರಾಗಿದ್ದರೆ, ಪಿಂಪಲ್ಸ್ ರಹಿತ, ಕಲೆ ಮುಕ್ತ ತ್ವಚೆಯನ್ನು ಪಡೆಯಲು ಸಹಾಯಕವಾಗುವ ಕೆಲವು ಆಂಟಿ ಪಿಂಪಲ್ಸ್ ಡ್ರಿಂಕ್ಸ್ ಬಗ್ಗೆ ಇಲ್ಲಿದೆ ಮಾಹಿತಿ.

ಏನಿದು ಆಂಟಿ ಪಿಂಪಲ್ಸ್ ಡ್ರಿಂಕ್ಸ್? 

ಮುಖದಲ್ಲಿ ಕಾಣಿಸಿಕೊಳ್ಳುವ ಮೊಡವೆಗಳು ಮುಖದ ಸೌಂದರ್ಯದ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತವೆ. ಮಾತ್ರವಲ್ಲ, ಮೊಡವೆಗಳು ಮತ್ತು ಅದರಿಂದ ಉಂಟಾಗುವ ಕಲೆಗಳು ಜನರ ಆತ್ಮವಿಶ್ವಾಸವನ್ನು ಕೂಡ ಕುಗ್ಗಿಸುತ್ತವೆ. ಇದನ್ನು ತಪ್ಪಿಸಲು ಕೆಲವು ಆಂಟಿ ಪಿಂಪಲ್ಸ್ ಡ್ರಿಂಕ್ಸ್ ನಿಮಗೆ ಸಹಾಯಕವಾಗಬಹುದು. ಇವುಗಳನ್ನು ಮಾಂತ್ರಿಕ ಪಾನೀಯಗಳೆಂದು ಕೂಡ ಕರೆಯುತ್ತಾರೆ. ನಿಯಮಿತವಾಗಿ ಈ ಆಂಟಿ ಪಿಂಪಲ್ಸ್ ಡ್ರಿಂಕ್ಸ್ ಸೇವಿಸುವುದರಿಂದ ಮೊಡವೆ ಸಮಸ್ಯೆಗಳು ಮಾಯವಾಗುವುದರ ಜೊತೆಗೆ ಸುಂದರ, ಕಾಂತಿಯುತ ತ್ವಚೆಯೂ ನಿಮ್ಮದಾಗುತ್ತದೆ.

ಇದನ್ನೂ ಓದಿ- ಮೊಡವೆಗಳ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ

ಮೊಡವೆಗಳಿಂದ ರಕ್ಷಣೆಗಾಗಿ ತಪ್ಪದೇ ಟ್ರೈ ಮಾಡಿ ಈ ಆಂಟಿ ಪಿಂಪಲ್ಸ್ ಡ್ರಿಂಕ್ಸ್:
* ನಿಂಬೆ ಮಿಶ್ರಿತ ಗ್ರೀನ್ ಟೀ:

ಗ್ರೀನ್ ಟೀ ಆರೋಗ್ಯಕ್ಕೆ ಒಳ್ಳೆಯದು ಎಂದು ನಿಮಗೆ ತಿಳಿದೇ ಇದೆ. ನಿಂಬೆಹಣ್ಣು ಕೂಡ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ. ತಜ್ಞರ ಪ್ರಕಾರ, ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ನಿಂಬೆ ಮತ್ತು ಗ್ರೀನ್ ಟೀ ಎರಡನ್ನೂ ಬೆರೆಸಿ ಕುಡಿಯುವುದರಿಂದ ಮೊಡವೆಗಳು ಬೇಗನೆ ಮಾಯವಾಗುತ್ತವೆ. ಮಾತ್ರವಲ್ಲ,  ಗ್ರೀನ್ ಟೀಯಲ್ಲಿರುವ ಆಕ್ಸಿಡೆಂಟ್‌ಗಳು ಮತ್ತು ನಿಂಬೆಯಲ್ಲಿರುವ ವಿಟಮಿನ್ ಸಿ ಚರ್ಮವನ್ನು ಶುದ್ಧೀಕರಿಸುತ್ತದೆ.

* ನೆಲ್ಲಿಕಾಯಿ, ಶುಂಠಿ ಪಾನೀಯ:
ವಿಟಮಿನ್ ಸಿ, ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿರುವ ನೆಲ್ಲಿಕಾಯಿಯನ್ನು ಕೂದಲ ಬೆಳವಣಿಗೆಗೆ ಹೆಚ್ಚಾಗಿ ಬಳಸಲಾಗುತ್ತದೆ. ಆದರೆ, ಇದರಲ್ಲಿರುವ ಗುಣಗಳು ಮೊಡವೆಗಳನ್ನು ಉಂಟುಮಾಡುವ ಸೂಕ್ಷ್ಮಜೀವಿಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇನ್ನು ಶುಂಠಿ ಕಲೆ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ, ನೆಲ್ಲಿಕಾಯಿ, ಶುಂಠಿ ಪಾನೀಯ ಸೇವನೆಯಿಂದಲೂ ಪಿಂಪಲ್ಸ್ ರಹಿತ, ಕಲೆ ಮುಕ್ತ ತ್ವಚೆ ನಿಮ್ಮದಾಗಿಸಬಹುದು.

ಇದನ್ನೂ ಓದಿ- Skin Care Mistakes: ಮೊಡವೆಗಳಿಂದ ಮುಕ್ತಿ ಬೇಕೆಂದರೆ ಇಂದೇ ನಿಮ್ಮ ಈ ಅಭ್ಯಾಸ ಬದಲಿಸಿ

* ಹನಿ ಮಿಶ್ರಿತ ಬೇವಿನ ಜ್ಯೂಸ್:
ಬೇವಿನ ಪ್ರತಿ ಭಾಗವೂ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಎಂದು ನಿಮಗೆ ತಿಳಿದೇಇದೆ. ಬೇವಿನ ಎಲೆಗಳಿಂದ ಬ್ಯಾಕ್ಟೀರಿಯಾ ವಿರೋಧಿ ಪಾನೀಯವನ್ನು ತಯಾರಿಸಬಹುದು. ಈ ಪಾನೀಯ ಸೇವನೆಯಿನ ಉತ್ತಮ ಆರೋಗ್ಯದ ಜೊತೆಗೆ ಮೊಡವೆಗಳನ್ನು ನೈಸರ್ಗಿಕವಾಗಿ ನಿರ್ಮೂಲನೆ ಮಾಡಬಹುದು. ನಿಮಗೆ ಬೇವಿನ ರಸವನ್ನು ಕುಡಿಯಲು ಕಷ್ಟವಾದರೆ ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಕುಡಿಯಿರಿ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Read More