Home> Lifestyle
Advertisement

ಸೂರ್ಯಾಸ್ತದ ನಂತರ ಈ ವಸ್ತುಗಳನ್ನು ದಾನ ನೀಡಲೇ ಬಾರದಂತೆ

ಹಿಂದೂ ಧರ್ಮ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ  ಸಾಮಾನ್ಯವಾಗಿ ಎಲ್ಲಾ ಉಪವಾಸ ಮತ್ತು ವಿಶೇಷ ಸಂದರ್ಭಗಳಲ್ಲಿ ದಾನ ನೀಡುವುದಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ದಾನ ನೀಡದೆ ಹೋದರೆ ದೇವರಿಗೆ ಸಲ್ಲಿಸುವ ಯಾವ ಪೂಜೆಯೂ ಪರಿಪೂರ್ಣವಾಗುವುದಿಲ್ಲವಂತೆ. 

ಸೂರ್ಯಾಸ್ತದ ನಂತರ ಈ ವಸ್ತುಗಳನ್ನು ದಾನ ನೀಡಲೇ ಬಾರದಂತೆ

ನವದೆಹಲಿ : ಹಿಂದೂ ಧರ್ಮ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಸಾಮಾನ್ಯವಾಗಿ ಎಲ್ಲಾ ಉಪವಾಸ ಮತ್ತು ವಿಶೇಷ ಸಂದರ್ಭಗಳಲ್ಲಿ ದಾನ ನೀಡುವುದಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ದಾನ ನೀಡದೆ ಹೋದರೆ ದೇವರಿಗೆ ಸಲ್ಲಿಸುವ ಯಾವ ಪೂಜೆಯೂ ಪರಿಪೂರ್ಣವಾಗುವುದಿಲ್ಲವಂತೆ. ಶಾಸ್ತ್ರದಲ್ಲಿ ವಿವಿಧ ರೀತಿಯ ದಾನಗಳ ಬಗ್ಗೆ ಉಲ್ಲೇಖಿಸಲಾಗಿದೆ. ಆದರೆ, ಸೂರ್ಯಾಸ್ತದ ನಂತರ, ಕೆಲವು ವಸ್ತುಗಳನ್ನು ದಾನ ಮಾಡುವುದು (Donation after sunset)ಒಳ್ಳೆಯದಲ್ಲ ಎಂದು ಕೂಡಾ ಹೇಳಲಾಗಿದೆ. ಸಂಜೆಯ  ಮೇಲೆ ಈ ವಸ್ತುಗಳನ್ನು ದಾನ ನೀಡಿದರೆ, ಅನಿಷ್ಟವನ್ನು ಆಹ್ವಾನ ನೀಡಿದಂತೆಯೇ ಎಂದು ಹೇಳಲಾಗುತ್ತದೆ.   ಸಂಜೆ ಈ ವಸ್ತುಗಳನ್ನು ದಾನ ಮಾಡುವುದರಿಂದ ಮನೆಗೆ ಬಡತನ ವಕ್ಕರಿಸುತ್ತದೆಯಂತೆ. 

ತಪ್ಪಿಯೂ ಕೂಡಾ ಸಂಜೆಯ ವೇಳೆಗೆ ಈ ವಸ್ತುಗಳನ್ನು ದಾನ ಮಾಡಬೇಡಿ : 

ಅನೇಕರಿಗೆ ಬೇರೆಯವರ ವಸ್ತುಗಳನ್ನು ಕೇಳಿ ಧರಿಸುವ ಅಭ್ಯಾಸವಿರುತ್ತದೆ. ಜ್ಯೋತಿಷ್ಯದ (Astrology) ಪ್ರಕಾರ, ಹೀಗೆ ಮಾಡುವುದು ತಪ್ಪು. ಇನ್ನೊಬ್ಬರ  ಬಟ್ಟೆ, ಚಪ್ಪಲಿ ಅಥವ ಶೂ, ಕೈಗಡಿಯಾರಗಳನ್ನು (Watch) ಧರಿಸಬಾರದು. ಇದರಂದ ಆ ವ್ಯಕ್ತಿಯ ನೆಗೆಟಿವ್ ಎನೆರ್ಜಿ (Negetive energy) ವಸ್ತುಗಳನ್ನು ಧರಿಸಿದವರ ಮೇಲಾಗುತ್ತದೆಯಂತೆ. ಇದು ಅಲರ್ಜಿಯ ಸಮಸ್ಯೆಯನ್ನೂ ಉಂಟುಮಾಡಬಹುದು. ಒಂದು ವೇಳೆ ಬೇರೆಯವರಿಂದ ವಸ್ತುಗಳನ್ನು ತೆಗೆದುಕೊಂಡಿದ್ದರೂ  ಸಂಜೆ ಅವುಗಳನ್ನು ಹಿಂತಿರುಗಿಸಬೇಡಿ. ವಿಶೇಷವಾಗಿ ಸಂಜೆ ಗಡಿಯಾರವನ್ನು ಹಿಂತಿರುಗಿಸಲೇಬಾರದು. ಹಾಗೆಯೇ ನಿಮ್ಮಲ್ಲಿ ಯಾರಾದರೂ ಕೈ ಗಡಿಯಾರ ಕೇಳಿದರೆ,  ಸಂಜೆಯ ನಂತರ ನೀಡಬೇಡಿ.  

ಇದನ್ನೂ ಓದಿ :  Vastu Shastra: ಮನೆಯ ಮೇಲ್ಚಾವಣಿಯಲ್ಲಿ ಈ ವಸ್ತು ಇದ್ದರೆ ಎಂದಿಗೂ ಎದುರಾಗಲ್ಲ ಹಣದ ಸಮಸ್ಯೆ

ಸೂರ್ಯಾಸ್ತದ ನಂತರ ಯಾರಿಗೂ ಸಾಲ ಕೊಡಬೇಡಿ.  ಲಕ್ಷ್ಮಿದೇವಿಯು (Godess Lakshmi) ಸಂಜೆ ಮನೆಗೆ ಪ್ರವೇಶಿಸುತ್ತಾಳೆ ಎನ್ನುವುದು ನಂಬಿಕೆ. ಹಾಗಾಗಿ ಸಾಲ ನೀಡಲು ಇದು ಸೂಕ್ತವಲ್ಲದ ಸಮಯ. ಒಂದೊಮ್ಮೆ ಸಂಜೆ ವೇಳೆ ಸಾಲ ನೀಡಿದರೆ ನಿಮ್ಮ ಮನೆಯಲ್ಲಿ ಬಡತನ ವಕ್ಕರಿಸಿಕೊಳ್ಳಬಹುದು. 

ದಾನದಲ್ಲಿ ಅಥವಾ ಸಾಲದ ರೂಪದಲ್ಲಿ ಸಂಜೆ ಯಾರಿಗೂ ಹುಳಿ ವಸ್ತುಗಳನ್ನು ನೀಡಬಾರದು.  ಮೊಸರು (Curd), ಉಪ್ಪಿನಕಾಯಿ ಇತ್ಯಾದಿ ವಸ್ತುಗಳನ್ನು ಸಂಜೆ ಮೇಲೆ ಮನೆಯಿಂದ ಹೊರಗೆ ಕೊಂಡು ಹೋಗಬಾರದು.

ಸೂರ್ಯ ಮುಳುಗಿದ ನಂತರ ಯಾರಿಗೂ ಉಪ್ಪು (Salt) ಮತ್ತು ಅರಿಶಿನವನ್ನು (Turmeric) ನೀಡಬೇಡಿ. ಇದರಿಂದ ಆರ್ಥಿಕ ನಷ್ಟ ಎದುರಿಸಬೇಕಾದೀತು. 

ಇದನ್ನೂ ಓದಿ:  Vastu Shastra Green Colour Benefits: ಮನೆಯಲ್ಲಿ ಈ ಬಣ್ಣದ ಗಡಿಯಾರವಿರಲಿ, ಬದಲಾವಣೆ ನಿಮಗೆ ತಿಳಿಯಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More