Home> Lifestyle
Advertisement

Health Tips: ನೀವೂ ಶೌಚಾಲಯದಲ್ಲಿ ಕುಳಿತು ಮೊಬೈಲ್ ಬಳಸುತ್ತೀರಾ?, ಈ ಕಾಯಿಲೆಗೆ ಬಲಿಯಾಗುತ್ತೀರಿ ಹುಷಾರ್!

ಟಾಯ್ಲೆಟ್‌ನ ಕಮೋಡ್ ಮೇಲೆ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಗುದನಾಳ ಮತ್ತು ಗುದದ್ವಾರದ ಸ್ನಾಯುಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ.

Health Tips: ನೀವೂ ಶೌಚಾಲಯದಲ್ಲಿ ಕುಳಿತು ಮೊಬೈಲ್ ಬಳಸುತ್ತೀರಾ?, ಈ ಕಾಯಿಲೆಗೆ ಬಲಿಯಾಗುತ್ತೀರಿ ಹುಷಾರ್!

ನವದೆಹಲಿ: ಮೊಬೈಲ್ ಫೋನ್ ಇಂದು ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಯಾರೇ ಆಗಲಿ ಇಂದು ಒಂದು ನಿಮಿಷವೂ ಮೊಬೈಲ್‌ನಿಂದ ದೂರವಿರಲು ಇಷ್ಟಪಡುವುದಿಲ್ಲ. ಮೊಬೈಲ್ ಹತ್ತಿರವಿಲ್ಲದಿದ್ದರೆ ಚಡಪಡಿಕೆ ಶುರುವಾಗುತ್ತದೆ. ಕೆಲವರಿಗೆ ಶೌಚಾಲಯದಲ್ಲಿ ಕೂತು ಫೋನ್ ಬಳಸುವ ಅಭ್ಯಾಸವಿರುತ್ತದೆ. ಆದರೆ ಈ ಅಭ್ಯಾಸ ತುಂಬಾ ಅಪಾಯಕಾರಿ. ಇದರಿಂದ ನೀವು ತುಂಬಾ ಅನಾರೋಗ್ಯಕ್ಕೆ ತುತ್ತಾಗಬಹುದು. ಶೌಚಾಲಯದಲ್ಲಿ ಮೊಬೈಲ್(Mobile Use In Toilet) ತೆಗೆದುಕೊಂಡು ಹೋದರೆ ನೀವು ಮಾರಣಾಂತಿಕ ಕಾಯಿಲೆಗೆ ಬಲಿಯಾಗಬಹುದು. ನೀವು ಮತ್ತು ನಿಮ್ಮ ಇಡೀ ಕುಟುಂಬ ಅಪಾಯಕಾರಿ ಬ್ಯಾಕ್ಟೀರಿಯಾಕ್ಕೆ ಗುರಿಯಾಗಬಹುದು.

ಶೌಚಾಲಯದಲ್ಲಿ ಮೊಬೈಲ್ ಬಳಸಿದರೆ ಈ ರೋಗ ಬರುತ್ತೆ

ಟಾಯ್ಲೆಟ್‌ನಲ್ಲಿ ಮೊಬೈಲ್ ಬಳಸುವುದರಿಂದ ಪೈಲ್ಸ್ ಸಮಸ್ಯೆ ಬರಬಹುದು. ವೃದ್ಧರು ಹಾಗೂ ಯುವಕರಲ್ಲಿ ಪೈಲ್ಸ್ ಸಮಸ್ಯೆ ಸಾಮಾನ್ಯವಾಗಿದೆ. ಪೈಲ್ಸ್ ಅನ್ನು ಹೆಮೊರೊಯಿಡ್ಸ್(Haemorrhoids) ಎಂದೂ ಕರೆಯುತ್ತಾರೆ. ನೀವು ಟಾಯ್ಲೆಟ್ ನಲ್ಲಿ ಮೊಬೈಲ್‌ ತೆಗೆದುಕೊಂಡು ಕಮೋಡ್‌ನಲ್ಲಿ ದೀರ್ಘಕಾಲ ಕುಳಿತುಕೊಳ್ಳುತ್ತೀರಿ. ಮೊಬೈಲ್ ನಲ್ಲಿ ಏನೇನೋ ನೋಡುತ್ತಾ ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ನಿಮಗೆ ಮುಂದೆ ಖಂಡಿತ ಸಮಸ್ಯೆ ಎದುರಾಗುತ್ತದೆ. 

ಇದನ್ನೂ ಓದಿ: Winter Weight Loss Tips: ಚಳಿಗಾಲದಲ್ಲಿ ತೂಕ ಇಳಿಸಿಕೊಳ್ಳಲು ಬಯಸುವಿರಾ? ನಿಮ್ಮ ಆಹಾರದಲ್ಲಿರಲಿ ಈ ಡ್ರೈ ಫ್ರೂಟ್ಸ್

ಮೂಲವ್ಯಾಧಿಗೆ ಕಾರಣವೇನು?

ಕೆಲವರು ಟಾಯ್ಲೆಟ್ ನ ಕಮೋಡ್ ಮೇಲೆ ಕುಳಿತು ಮೊಬೈಲ್(Mobile Phone)ನಲ್ಲಿ ಸುದ್ದಿ ಓದುತ್ತಾರೆ. ಸಾಮಾಜಿಕ ಮಾಧ್ಯಮಗಳಲ್ಲಿರುವ ವಿಡಿಯೋಗಳನ್ನು ವೀಕ್ಷಿಸುವುದು ಮತ್ತು ಗೆಳೆಯರೊಂದಿಗೆ ಹೆಚ್ಚು ಹೊತ್ತು ಚಾಟ್ ಮಾಡುವುದು. ಇದು ಇಂದಿನ ಬಹುತೇಕ ಜನರ ಹವ್ಯಾಸವಾಗಿಬಿಟ್ಟಿದೆ. ಟಾಯ್ಲೆಟ್‌ನ ಕಮೋಡ್ ಮೇಲೆ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಗುದನಾಳ ಮತ್ತು ಗುದದ್ವಾರದ ಸ್ನಾಯುಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇದು ಪೈಲ್ಸ್ ಅಪಾಯವನ್ನು ಹೆಚ್ಚಿಸುತ್ತದೆ.

ಫೋನ್‌ನಲ್ಲಿ ಮಾರಣಾಂತಿಕ ಬ್ಯಾಕ್ಟೀರಿಯಾ!

ಟಾಯ್ಲೆಟ್ ನಲ್ಲಿ ಮೊಬೈಲ್ ಕೊಂಡೊಯ್ಯುವುದರಿಂದ ಬ್ಯಾಕ್ಟೀರಿಯಾ(Bacteria)ಗಳ ಸಮಸ್ಯೆಗೆ ಸಿಲುಕಬಹುದು. ಟಾಯ್ಲೆಟ್‌ನಲ್ಲಿರುವ ಬ್ಯಾಕ್ಟೀರಿಯಾಗಳು ನಿಮ್ಮ ಮೊಬೈಲ್‌ಗೆ ಅಂಟಿಕೊಳ್ಳುತ್ತವೆ. ಶೌಚಾಲಯದಿಂದ ಹೊರಗೆ ಬಂದಾಗ ಕೈ ತೊಳೆದರೂ ಮೊಬೈಲ್ ನಲ್ಲಿ ಅಂಟಿಕೊಂಡಿರುವ ಬ್ಯಾಕ್ಟೀರಿಯಾ ಮತ್ತೆ ಕೈಗೆ ಸಿಗುತ್ತದೆ. ನೀವು ಆಹಾರ ಸೇವಿಸುವಾಗ ಈ ಬ್ಯಾಕ್ಟೀರಿಯಾಗಳು ನಿಮ್ಮ ದೇಹ ಪ್ರವೇಶಿಸುತ್ತವೆ. ಈ ಬ್ಯಾಕ್ಟೀರಿಯಾಗಳಿಂದ ನೀವು ಸೋಂಕಿಗೆ ಒಳಗಾಗಬಹುದು. ಹೀಗಾಗಿ ಟಾಯ್ಲೆಟ್ ನಲ್ಲಿ ಮೊಬೈಲ್ ಬಳುಸವ ಮುನ್ನ ಸಾಕಷ್ಟು ಬಾರಿ ಯೋಚಿಸಬೇಕು. ಇಲ್ಲಿದ್ದರೆ ನಿಮಗೆ ಗೊತ್ತಿಲ್ಲದಂತೆ ಮಾರಣಾಂತಿಕ ಕಾಯಿಲೆಗೆ ಬಲಿಯಾಗಬಹುದು.

ಇದನ್ನೂ ಓದಿ: Basil Leaves Benefits : ಚಳಿಗಾಲದ ಈ ಸಮಯದಲ್ಲಿ 6 ತುಳುಸಿ ಎಲೆ ಸೇವಿಸಿ : ಇದರಿಂದ ಆರೋಗ್ಯಕ್ಕಿದೆ ಅದ್ಭುತ ಪ್ರಯೋಜನಗಳು 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More