Home> Lifestyle
Advertisement

Dosa Recipe: 10 ನಿಮಿಷದಲ್ಲಿ ಬೇಳೆ, ಅಕ್ಕಿ ನೆನೆಸದೆ ಗರಿಗರಿಯಾದ ದೋಸೆ ರೆಡಿ ! ಈ ಸ್ಟೆಪ್ಸ್‌ ಫಾಲೋ ಮಾಡಿ

Crispy Dosa Recipe: ಶಾಲಾ - ಕಾಲೇಜುಗಳು ಶುರುವಾಗಿವೆ. ಬೆಳಿಗ್ಗೆ ತ್ವರಿತವಾಗಿ ಮತ್ತು ರುಚಿಕರವಾದ ಉಪಹಾರವನ್ನು ಮಾಡುವುದು ಸವಾಲಿನ ಕೆಲಸ. ಅದಕ್ಕಾಗಿ ಇಂದು ನಾವು 3 ಬಗೆಯ ದೋಸೆ ಮಾಡುವ ವಿಧಾನಗಳನ್ನು ನಿಮಗಾಗಿ ತಂದಿದ್ದೇವೆ. 
 

Dosa Recipe: 10 ನಿಮಿಷದಲ್ಲಿ ಬೇಳೆ, ಅಕ್ಕಿ ನೆನೆಸದೆ ಗರಿಗರಿಯಾದ ದೋಸೆ ರೆಡಿ ! ಈ ಸ್ಟೆಪ್ಸ್‌ ಫಾಲೋ ಮಾಡಿ

Crispy Dosa In 10 Minutes: ಎಲ್ಲಾ ವಯಸ್ಸಿನ ಜನರು ದೋಸೆ ತಿನ್ನಲು ಇಷ್ಟಪಡುತ್ತಾರೆ. ಮಕ್ಕಳಾಗಲಿ, ದೊಡ್ಡವರಾಗಲಿ ಎಲ್ಲರೂ ಇದನ್ನು ಬಹಳ ಉತ್ಸಾಹದಿಂದ ತಿನ್ನುತ್ತಾರೆ. ದೋಸೆ ಮಾಡಲು, ಉದ್ದು ಮತ್ತು ಅಕ್ಕಿಯನ್ನು ಗಂಟೆ ನೆನೆಸಿ, ರುಬ್ಬಿ ರಾತ್ರಿಯಿಡೀ ಹುಳಿ ಬರಲು ಇಡಬೇಕು. ಇದು ಅವಶ್ಯಕವಾಗಿ ಮಾಡಲೇಬೇಕಾದ ವಿಧಾನ. ಆದರೆ ನೀವು ಅವಸರದಲ್ಲಿದ್ದರೆ ಮತ್ತು ಬೆಳಗಿನ ಉಪಾಹಾರಕ್ಕಾಗಿ ನಿಮ್ಮ ಮನೆಯಲ್ಲಿ ಯಾರಾದರೂ ದೋಸೆಗೆ ಬೇಡಿಕೆಯಿಟ್ಟರೆ ನೀವು ಗೊಂದಲಕ್ಕೊಳಗಾಗುವಿರಿ. ಅದಕ್ಕಾಗಿಯೇ ಇಂದು ದಿಢೀರ್‌ ದೋಸೆಯನ್ನು ಹೇಗೆ ತಯಾರಿಸಬಹುದು ಎಂದು ನಾವು ತಿಳಿಸುತ್ತೇವೆ. 

ಮಸಾಲೆ ದೋಸೆ ಮಾಡುವ ವಿಧಾನ: ಒಂದು ಕಪ್ ರವೆಯನ್ನು ಮಿಕ್ಸಿ ಗ್ರೈಂಡರ್‌ನಲ್ಲಿ ತೆಗೆದುಕೊಳ್ಳಿ. ಈಗ ಅದಕ್ಕೆ 2 ರಿಂದ 3 ಚಮಚ ಮೈದಾ ಹಾಕಿ. ಈಗ ಅದಕ್ಕೆ ಒಂದು ಚಮಚ ಕಡಲೆ ಹಿಟ್ಟು ಸೇರಿಸಿ. ಒಂದು ಚಮಚ ಉಪ್ಪು ಮತ್ತು ಒಂದು ಚಮಚ ಸಕ್ಕರೆ ಸೇರಿಸಿ. ಈಗ ಅದನ್ನು ಚೆನ್ನಾಗಿ ರುಬ್ಬಿಕೊಳ್ಳಿ. ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಅದಕ್ಕೆ ಅರ್ಧ ಕಪ್ ಮೊಸರು ಸೇರಿಸಿ. ಈಗ ಅದಕ್ಕೆ ಒಂದು ಲೋಟ ನೀರು ಸೇರಿಸಿ. 10 ನಿಮಿಷಗಳ ಕಾಲ ಮುಚ್ಚಿಡಿ. ಬಳಿಕ ಅರ್ಧ ಟೀ ಚಮಚ ಅಡಿಗೆ ಸೋಡಾ ಹಾಕಿ. ಈಗ ಚೆನ್ನಾಗಿ ಮಿಶ್ರಣ ಮಾಡಿ. ಪ್ಯಾನ್ ಅನ್ನು ಗ್ಯಾಸ್ ಮೇಲೆ ಇಡಿ, ಚೆನ್ನಾಘಿ ಕಾಯಲು ಬಿಡಿ. ಈಗ ನೀರು ಚಿಮುಕಿಸಿ ದೋಸೆ ಹುಯ್ಯಿರಿ. ಎಣ್ಣೆ ಹಾಕಿ ಮತ್ತು ಅದು ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಲು ಬಿಡಿ. ಆಲೂಗೆಡ್ಡೆ ಪಲ್ಯದೊಂದಿಗೆ, ಗರಿಗರಿಯಾದ ದೋಸೆಯನ್ನು ಪ್ಲೇಟ್‌ನಲ್ಲಿ ಬಡಿಸಿ.

ಇದನ್ನೂ ಓದಿ : ಪೂಜೆ, ಉಪವಾಸದ ವೇಳೆ ಈರುಳ್ಳಿ - ಬೆಳ್ಳುಳ್ಳಿ ಏಕೆ ತಿನ್ನಬಾರದು? ಇದರ ಹಿಂದಿನ ಧಾರ್ಮಿಕ ನಂಬಿಕೆಗಳೇನು ಗೊತ್ತಾ?

ರವಾ ದೋಸೆ ಮಾಡುವ ವಿಧಾನ: 1/2 ಕಪ್ ರವಾ, 1/4 ಕಪ್ ಮೈದಾ, 1/2 ಕಪ್ ಅಕ್ಕಿ ಹಿಟ್ಟು, 1/3 ಕಪ್ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ 1 ಕಪ್ ನೀರನ್ನು ನಿಧಾನವಾಗಿ ಸೇರಿಸಿ ಮತ್ತು ಹಿಟ್ಟು ಸಿದ್ಧವಾಗಿದೆ. ಈಗ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಸ್ವಲ್ಪ ಜೀರಿಗೆ, ಕತ್ತರಿಸಿದ ಈರುಳ್ಳಿ, ಕತ್ತರಿಸಿದ ಶುಂಠಿ ಹಾಕಿ ಮಿಶ್ರಣ ಮಾಡಿ. ಒಂದು ಕಪ್ ಗೆ 3 ಕಪ್ ನೀರು ಸೇರಿಸಿ. 4 ರಿಂದ 5 ನಿಮಿಷಗಳ ನಂತರ, ತವಾ ಮೇಲೆ ಹಾಕಿ ದೋಸೆ ಮಾಡಿ. ಗರಿಗರಿಯಾದ ರವಾ ದೋಸೆ ಸವಿಯಲು ಸಿದ್ಧ.

ಖಾಲಿ ದೋಸೆ ಮಾಡುವ ವಿಧಾನ: ಮಿಕ್ಸರ್‌ ಗ್ರೈಂಡರ್‌ನಲ್ಲಿ ಒಂದು ಕಪ್ ರವೆ ತೆಗೆದುಕೊಂಡು ಅದಕ್ಕೆ ಒಂದು ಚಮಚ ಸಕ್ಕರೆ ಮತ್ತು ಒಂದು ಚಮಚ ಉಪ್ಪು ಸೇರಿಸಿ. ಈಗ ಅದನ್ನು ಚೆನ್ನಾಗಿ ರುಬ್ಬಿಕೊಳ್ಳಿ. ಈಗ ಅದನ್ನು ಒಂದು ಬಟ್ಟಲಿನಲ್ಲಿ ಹಾಕಿ ಮತ್ತು ಅದಕ್ಕೆ ಒಂದು ಕಪ್ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ನಿಧಾನವಾಗಿ ಮಿಶ್ರಣ ಮಾಡುವಾಗ ಅರ್ಧ ಕಪ್ ನೀರು ಸೇರಿಸಿ ಮತ್ತು ಮಿಶ್ರಣ ಮಾಡಿ. 15 ನಿಮಿಷಗಳ ಕಾಲ ಮುಚ್ಚಿಡಿ. ನಂತರ ಒಂದು ಬಟ್ಟಲಿನಲ್ಲಿ ಸ್ವಲ್ಪ ನೀರು ತೆಗೆದುಕೊಂಡು ಅದರಲ್ಲಿ ಒಂದು ಸ್ಯಾಚೆಟ್ ಇನೋ (ENO) ಮಿಶ್ರಣ ಮಾಡಿ, ದೋಸೆ ಹಿಟ್ಟಿಗೆ ಸೇರಿಸಿ. ಅದರಲ್ಲಿ ಯಾವುದೇ ಗಂಟು ಇರಬಾರದು ಎಂಬುದನ್ನು ನೆನಪಿನಲ್ಲಿಡಿ. ಈಗ ದೋಸೆ ಹಂಚನ್ನು ಬಿಸಿ ಮಾಡಿ. ದೋಸೆ ಹಿಟ್ಟನ್ನು ಒಂದು ಲೋಟದೊಂದಿಗೆ ಸುರಿಯಿರಿ ಮತ್ತು ಅದನ್ನು ಹರಡಿ. ಈಗ ಅದನ್ನು ಮಧ್ಯಮ ಉರಿಯಲ್ಲಿ ಬೇಯಲು ಬಿಡಿ. ಅದನ್ನು ಮುಚ್ಚಿ ಮತ್ತು 2 ನಿಮಿಷ ಬೇಯಿಸಿ. ನಂತರ ಸರ್ವ್‌ ಮಾಡಿ. 

ಇದನ್ನೂ ಓದಿ : ಫುಡ್‌ ಅಡ್ಡಾ: ಬಿಸಿಲಿರಲಿ, ಮಳೆಯಿರಲಿ ಒಮ್ಮೆ ಬೂಂದಿ ಕಡಿ ಮಾಡಿ ನೋಡಿ.. ಬಾಯಿ ಚಪ್ಪರಿಸಿ ತಿನ್ನುವರು!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More