Home> Lifestyle
Advertisement

Chanakya Niti: ಇಂತಹ ಮಡದಿಯರು ತಮ್ಮ ಪತಿಯ ಮಲಗಿರುವ ಭಾಗ್ಯವನ್ನು ಬಡಿದೆಬ್ಬಿಸುತ್ತಾರೆ

Chanakya Niti In Kannada: ಪತಿ-ಪತ್ನಿ ಸಂಬಂಧ ಜೀವನದ ಪ್ರಮುಖ ಸಂಬಂಧಗಳಲ್ಲಿ ಒಂದು. ಚಾಣಕ್ಯ ನೀತಿಯ ಪ್ರಕಾರ ಪತಿ-ಪತ್ನಿಯ ನಡುವಿನ ಸಂಬಂಧ ಅವರಿಬ್ಬರ ಭಾಗ್ಯದ ಜೊತೆಗೂ ಕೂಡ ಕನೆಕ್ಷನ್ ಹೊಂದಿರುತ್ತದೆ ಎನ್ನಲಾಗುತ್ತದೆ. ಏಕೆಂದರೆ ವಿಶ್ವಾಸಾರ್ಹ, ಪ್ರಾಮಾಣಿಕ ಹಾಗೂ ಎಲ್ಲ ಸಂದರ್ಭಗಳಲ್ಲೂ ಸಾಥ್ ನೀಡುವ ಬಾಳಸಂಗಾತಿ ತನ್ನ ಪತಿಯ ಭಾಗ್ಯವನ್ನು ಬೆಳಗುತ್ತಾರೆ ಎನ್ನಲಾಗುತ್ತದೆ. 
 

Chanakya Niti: ಇಂತಹ ಮಡದಿಯರು ತಮ್ಮ ಪತಿಯ ಮಲಗಿರುವ ಭಾಗ್ಯವನ್ನು ಬಡಿದೆಬ್ಬಿಸುತ್ತಾರೆ

Chanakya Niti for Married Couple: ಪತಿ-ಪತ್ನಿಯರ ನಡುವೆ ಪ್ರೀತಿ, ಗೌರವ ಇದ್ದಾಗ ಮಾತ್ರ ಕುಟುಂಬ ಸುಖಮಯವಾಗಿರುತ್ತದೆ. ಈ ಸಂಬಂಧವನ್ನು ಕಾಪಾಡಿಕೊಳ್ಳಲು, ನಂಬಿಕೆ ಮತ್ತು ಪರಸ್ಪರರ ಬೇಷರತ್ತಾದ ಬೆಂಬಲ ಬಹಳ ಅಗತ್ಯ. ಆದರೆ ಕುಟುಂಬವನ್ನು ಸಂತೋಷ, ಸುಸಂಸ್ಕೃತ ಮತ್ತು ಸಮೃದ್ಧವಾಗಿಸಲು ಮಹಿಳೆಯರ ಕೊಡುಗೆ ದೊಡ್ಡ ಪಾತ್ರವಹಿಸುತ್ತದೆ. ಮನೆಯ ಹೆಂಗಸರಲ್ಲಿ ಕೆಲವು ವಿಶೇಷ ಗುಣಗಳಿದ್ದರೆ ಆ ಮನೆ ಸ್ವರ್ಗದಂತಾಗುತ್ತದೆ. ಹೀಗಾಗಿ ಪತ್ನಿಯನ್ನು ಲಕ್ಷ್ಮಿಯ ರೂಪ ಎನ್ನಲಾಗುತ್ತದೆ. ಚಾಣಕ್ಯ ನೀತಿಯಲ್ಲಿ, ಮಹಿಳೆಯರ ಅಂತಹ ಕೆಲ ಗುಣಗಳ ಕುರಿತು ಉಲ್ಲೆಖಿಸಲಾಗಿದ್ದು, ಅವು ಆ ಮಹಿಳೆಯ ಮಲಗಿರುವ ಭಾಗ್ಯವನ್ನು ಬಡಿದೆಬ್ಬಿಸುತ್ತವೆ ಎನ್ನಲಾಗಿದೆ.

ಇಂತಹ ಪತ್ನಿ ತನ್ನ ಪತಿಯ ಭಾಗ್ಯವನ್ನೇ ಬೆಳಗುತ್ತಾಳೆ

ಸುಸಂಸ್ಕೃತ ಮತ್ತು ವಿದ್ಯಾವಂತ ಮಹಿಳೆ: ಮಹಿಳೆ ವಿದ್ಯಾವಂತ, ಸುಸಂಸ್ಕೃತಿಯಾಗಿದ್ದರೆ, ಇಡೀ ಕುಟುಂಬದ ಅಂದ ಹೆಚ್ಚಾಗುತ್ತದೆ. ಇಂತಹ ಕುಟುಂಬದ ಹೊಸ ತಲೆಮಾರಿನವರು ಕೂಡ ಸುಸಂಸ್ಕೃತರು ಮತ್ತು ಉತ್ತಮ ನಡವಳಿಕೆಯನ್ನು ಹೊಂದಿರುತ್ತಾರೆ. ಸುಸಂಸ್ಕೃತ ಮಹಿಳೆ ಮಾತ್ರ ತನ್ನ ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ನೀಡಬಲ್ಲಳು. ಮಹಿಳೆ ಧಾರ್ಮಿಕವಾಗಿದ್ದರೆ, ಅದು ಇಡೀ ಕುಟುಂಬಕ್ಕೆ ಉತ್ತಮ ಎನ್ನಲಾಗುತ್ತದೆ. ಅಂದರೆ, ಧರ್ಮನಿಷ್ಠ ಮಹಿಳೆ ಇಡೀ ಕುಟುಂಬಕ್ಕೆ ಅದೃಷ್ಟವನ್ನು ತರುತ್ತಾಳೆ.

ಶಾಂತ ಸ್ವಭಾವದ ಮಹಿಳೆ: ಹಾಗೆ ನೋಡಿದರೆ ಪ್ರತಿಯೊಬ್ಬ ವ್ಯಕ್ತಿಯು ಕೋಪ ಹಾಗೂ ಜಗಳದಿಂದ ದೂರವಿರಬೇಕು. ಆದರೆ ವಿಶೇಷವಾಗಿ ಪತ್ನಿ ಶಾಂತ ಸ್ವಭಾವದವಳಾಗಿದ್ದರೆ, ಮನೆಯಲ್ಲಿ ಯಾವಾಗಲೂ ಸಂತೋಷ ಮತ್ತು ಶಾಂತಿ ಇರುತ್ತದೆ. ಶಾಂತ ಮತ್ತು ಹರ್ಷಚಿತ್ತದಿಂದ ಸ್ವಭಾವದ ಮಹಿಳೆ ಮನೆಯನ್ನು ಸಕಾರಾತ್ಮಕತೆಯಿಂದ ತುಂಬುತ್ತಾಳೆ. ಅವಳು ಎಲ್ಲರಿಗೂ ಪ್ರೀತಿ ಮತ್ತು ಗೌರವವನ್ನು ನೀಡುತ್ತಾಳೆ. ಇಂತಹ ಮಹಿಳೆಯನ್ನು ಮದುವೆಯಾಗುವ ವ್ಯಕ್ತಿ ತುಂಬಾ ಅದೃಷ್ಟಶಾಲಿ ಎನ್ನಲಾಗುತ್ತದೆ.

ಇದನ್ನೂ ಓದಿ-Shravan Maas 2022: ಭೋಲೆನಾಥನ ಆಶೀರ್ವಾದದಿಂದ ಈ ಜನರಿಗೆ ಅಪಾರ ಹಣ & ಯಶಸ್ಸು ಸಿಗಲಿದೆ

ತಾಳ್ಮೆ ಹೊಂದಿರುವ ಮತ್ತು ಬುದ್ಧಿವಂತ ಮಹಿಳೆ: ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ಸಮಯಗಳು ಬರುತ್ತಲೇ ಇರುತ್ತವೆ, ಆದರೆ ಅಂತಹ ಪರಿಸ್ಥಿತಿಗಳಲ್ಲಿ ಪತ್ನಿ ತಾಳ್ಮೆವಹಿಸುವುಳಾಗಿದ್ದರೆ ಮತ್ತು ಬುದ್ಧಿವಂತಳಾಗಿದ್ದರೆ, ಅವಳು ತನ್ನ ಪತಿಗೆ ಕಷ್ಟಗಳಲ್ಲಿ ಕೇವಲ ಬೆಂಬಲ ಮಾತ್ರ ನೀಡುವುದಲ್ಲದೆ. ಅವನನ್ನು ಪ್ರೋತ್ಸಾಹಿಸುವ ಮೂಲಕ, ಅವನನ್ನು ತೊಂದರೆಗಳಿಂದ ಹೊರತರುವಲ್ಲಿ ಯಶಸ್ವಿಯಾಗುತ್ತಾಳೆ.

ಇದನ್ನೂ ಓದಿ-Mangal Gochar: ಇನ್ನು 2 ದಿನದಲ್ಲಿ ಇವರ ಭವಿಷ್ಯ ಉಲ್ಟಾಪಲ್ಟಾ, ‘ಮಂಗಳ’ ಕೃಪೆಯಿಂದ ಕೈತುಂಬಾ ಹಣ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More