Home> Lifestyle
Advertisement

Chaitra Navratri 2022: ನವರಾತ್ರಿ ವೇಳೆ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ

ಚೈತ್ರ ನವರಾತ್ರಿ ಏಪ್ರಿಲ್ 2ರಿಂದ ಪ್ರಾರಂಭವಾಗಿ ಏಪ್ರಿಲ್ 11ರವರೆಗೆ ಇರುತ್ತದೆ. ನವರಾತ್ರಿಯಲ್ಲಿ ತಾಯಿ ದುರ್ಗೆಯ 9 ರೂಪಗಳನ್ನು ಪೂಜಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನವರಾತ್ರಿಯ 9 ದಿನಗಳಲ್ಲಿ ಕೆಲವು ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬಾರದು.

Chaitra Navratri 2022: ನವರಾತ್ರಿ ವೇಳೆ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ

ನವದೆಹಲಿ: ಶಕ್ತಿ ಪೂಜೆಯ ಹಬ್ಬವಾದ ನವರಾತ್ರಿಯನ್ನು ದೇಶದಲ್ಲಿ ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ. ನವರಾತ್ರಿಯ 9 ದಿನಗಳಲ್ಲಿ ತಾಯಿ ದುರ್ಗೆಯ 9 ರೂಪಗಳನ್ನು ಪೂಜಿಸಲಾಗುತ್ತದೆ. ಒಂದು ವರ್ಷದಲ್ಲಿ 4 ನವರಾತ್ರಿಗಳಿವೆ. ಇದರಲ್ಲಿ ಚೈತ್ರ ಮತ್ತು ಶಾರದೀಯ ನವರಾತ್ರಿಯ ವಿಶೇಷ ಮಹತ್ವವನ್ನು ಹೇಳಲಾಗಿದೆ. ಈ ವರ್ಷ ಚೈತ್ರ ನವರಾತ್ರಿಯು(Chaitra Navratri 2022) 2ನೇ ಏಪ್ರಿಲ್ 2022ರಿಂದ ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 11ರವರೆಗೆ ಇರುತ್ತದೆ.

ನವರಾತ್ರಿಯಲ್ಲಿ ತಾಯಿ(Worshiping Maa Durga)ಯನ್ನು ಪೂಜಿಸುವುದರಿಂದ ವಿಶೇಷ ಪುಣ್ಯ ಲಭಿಸುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಅಲ್ಲದೆ ನವರಾತ್ರಿಯಲ್ಲಿ ಕೆಲವು ಕ್ರಿಯೆಗಳನ್ನು ತಪ್ಪಿಸಬೇಕು ಎಂದು ನಂಬಲಾಗಿದೆ. ನವರಾತ್ರಿಯಲ್ಲಿ ಯಾರಾದರೂ ಅಪ್ಪಿ-ತಪ್ಪಿ ಈ ಕೆಲಸಗಳನ್ನು ಮಾಡಿದರೆ ಅವರ ಜೀವನದಲ್ಲಿ ಬಡತನವು ನೆಲೆಸುತ್ತದೆ ಎಂದು ಹೇಳಲಾಗಿದೆ. ಇದರೊಂದಿಗೆ ಹಲವು ರೀತಿಯ ತೊಂದರೆಗಳನ್ನೂ ಎದುರಿಸಬೇಕಾಗುತ್ತದೆ. ನವರಾತ್ರಿಯಲ್ಲಿ ಯಾವ ಯಾವ ಕೆಲಸಗಳನ್ನು ಮಾಡಬಾರದು ಎಂಬುದರ ಬಗ್ಗೆ ತಿಳಿದುಕೊಳ್ಳಿರಿ.

ಮಾಂಸಾಹಾರಿ ಆಹಾರ

ನವರಾತ್ರಿಯ ಸಮಯದಲ್ಲಿ ದೇವಿ(Durga Devi)ಯ 9 ವಿವಿಧ ರೂಪಗಳನ್ನು ಪೂಜಿಸಲಾಗುತ್ತದೆ. ಈ ದಿನಗಳಲ್ಲಿ ತಾಯಿ ದುರ್ಗೆಯ ಭಕ್ತರು ಉಪವಾಸವನ್ನು ಇಟ್ಟುಕೊಂಡು ದೇವಿಯನ್ನು ಪೂಜಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನವರಾತ್ರಿಯಲ್ಲಿ ಮಾಂಸಾಹಾರವನ್ನು ತ್ಯಜಿಸಬೇಕು.

ಇದನ್ನೂ ಓದಿ: Vastu Tips: ದುಂದುವೆಚ್ಚದಿಂದ ನೀವೂ ತೊದರೆಗೀಡಾಗಿದ್ದೀರಾ? ಈ ಉಪಾಯ ಅನುಸರಿಸಿ ನೋಡಿ

ಬೆಳ್ಳುಳ್ಳಿ-ಈರುಳ್ಳಿ ಬಳಕೆ

ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ತಾಮಸಿಕ ಆಹಾರ(Tamasika Food)ವೆಂದು ಪರಿಗಣಿಸಲಾಗುತ್ತದೆ. ತಾಮಸಿಕ ಆಹಾರವು ಮನಸ್ಸಿನ ಏಕಾಗ್ರತೆಗೆ ಭಂಗ ತರುತ್ತದೆ. ಇದು ಮಾನಸಿಕ ಆಯಾಸವನ್ನೂ ಉಂಟುಮಾಡುತ್ತದೆ. ನವರಾತ್ರಿಯಲ್ಲಿ ತಾಮಸಿಕ ಆಹಾರವನ್ನು ಸೇವಿಸದಿರಲು ಇದೇ ಕಾರಣ.

ಕೂದಲು ಕತ್ತರಿಸುವುದು

ನವರಾತ್ರಿಯ 9 ದಿನಗಳಲ್ಲಿ ಕ್ಷೌರಿಕರಿಂದ ಕೂದಲುಗಳನ್ನು ಕತ್ತರಿಸಿಕೊಳ್ಳಬಾರದು. ಏಕೆಂದರೆ ನವರಾತ್ರಿಯ ಸಮಯದಲ್ಲಿ ಮಾಡಿಸಿಕೊಳ್ಳುವ ಕ್ಷೌರವು ಭವಿಷ್ಯದಲ್ಲಿ ಯಶಸ್ಸಿನ ಸಾಧ್ಯತೆಗಳ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನವರಾತ್ರಿಯ 9 ದಿನಗಳಲ್ಲಿ ಕೂದಲು ಕತ್ತರಿಸುವುದನ್ನು ತಪ್ಪಿಸಬೇಕು.

ಉಗುರು ಕಚ್ಚುವುದು

ಶಾಸ್ತ್ರಗಳ ಪ್ರಕಾರ ನವರಾತ್ರಿಯ 9 ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವುದನ್ನು ನಿಷೇಧಿಸಲಾಗಿದೆ. ನವರಾತ್ರಿ(Navratri)ಯ ದಿನಗಳಲ್ಲಿ ಉಗುರುಗಳನ್ನು ಕತ್ತರಿಸಬಾರದೆಂದು ನವರಾತ್ರಿ ಪ್ರಾರಂಭವಾಗುವ ಮೊದಲು ಅನೇಕ ಜನರು ತಮ್ಮ ಉಗುರುಗಳನ್ನು ಕತ್ತರಿಸುತ್ತಾರೆ. ನವರಾತ್ರಿಯ 9 ದಿನಗಳಲ್ಲಿ ಉಗುರು ಕಚ್ಚುವುದರಿಂದ ತಾಯಿ ಕೋಪಗೊಳ್ಳುತ್ತಾಳೆ ಮತ್ತು ಆಕೆಯ ಕೋಪವನ್ನು ಎದುರಿಸಬೇಕಾಗುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: Zodiac Signs : ಈ 3 ರಾಶಿಯವರು ತುಂಬಾ ಅಂಜುಬುರುಕರಂತೆ, ನಿಮ್ಮ ರಾಶಿ ಇದೆಯಾ ನೋಡಿ

ಮದ್ಯದ ದುರ್ಬಳಕೆ

ಧಾರ್ಮಿಕ ನಂಬಿಕೆಗಳ ಪ್ರಕಾರ ಯಾವುದೇ ಪವಿತ್ರ ಹಬ್ಬದ ಸಮಯದಲ್ಲಿ ಮದ್ಯ ಸೇವಿಸಬಾರದು. ಭಗವತಿ ದುರ್ಗೆಯ ಆರಾಧನೆಗೆ ಚೈತ್ರ ಮಾಸವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನವರಾತ್ರಿಯಲ್ಲಿ ಮದ್ಯಪಾನ ಮಾಡಬಾರದು.

ಚರ್ಮದ ವಸ್ತುಗಳನ್ನು ಧರಿಸಬಾರದು

ನವರಾತ್ರಿ(Navratri 2022)ಯಲ್ಲಿ ಚರ್ಮದ ಬೆಲ್ಟ್, ಶೂ, ಜಾಕೆಟ್ ಇತ್ಯಾದಿಗಳನ್ನು ಧರಿಸುವುದನ್ನು ತಪ್ಪಿಸಬೇಕು. ವಾಸ್ತವವಾಗಿ ಚರ್ಮವು ಪ್ರಾಣಿಗಳ ಚರ್ಮದಿಂದ ಮಾಡಲ್ಪಟ್ಟಿದೆ ಮತ್ತು ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನವರಾತ್ರಿಯಲ್ಲಿ ಚರ್ಮದ ವಸ್ತುಗಳ ಬಳಕೆಯನ್ನು ತಪ್ಪಿಸಬೇಕು.

ಕೆಟ್ಟ ಪದ ಬಳಸಬಾರದು

ನವರಾತ್ರಿಯ ಸಮಯದಲ್ಲಿ ನಿಂದನೀಯ ಮಾತುಗಳಿಂದ ದೂರವಿರಬೇಕು. ನವರಾತ್ರಿಯಲ್ಲಿ ದುರ್ಗಾ ಮಾತೆ(Durga Devi)ಯ ಭಕ್ತಿ ಮತ್ತು ಆರಾಧನೆಗೆ ಸಮಯ ಮೀಸಲಿಡಬೇಕು. ಆದ್ದರಿಂದ ಈ ಸಮಯದಲ್ಲಿ ಯಾರನ್ನೂ ನಿಂದಿಸುವ ಪದಗಳನ್ನು ಬಳಸಬಾರದು.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More