Home> Lifestyle
Advertisement

ಈ ಮೂರು ರಾಶಿಯವರ ಜೀವನದಲ್ಲಿ ಹಣದ ಹೊಳೆಯನ್ನೇ ಹರಿಸಲಿದ್ದಾನೆ ಬುಧ


Budh Transit July 2022: ಜುಲೈ 2022 ರಲ್ಲಿ, ಬುಧ ಗ್ರಹವು ರಾಶಿಚಕ್ರವನ್ನು 3 ಬಾರಿ ಬದಲಾಯಿಸಲಿದೆ. ಒಂದೇ ತಿಂಗಳಲ್ಲಿ ಮೂರು ಬಾರಿ ಬುಧ ಸಂಕ್ರಮಣವು ಎಲ್ಲಾ 12 ರಾಶಿಚಕ್ರಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.

ಈ ಮೂರು ರಾಶಿಯವರ ಜೀವನದಲ್ಲಿ ಹಣದ ಹೊಳೆಯನ್ನೇ ಹರಿಸಲಿದ್ದಾನೆ ಬುಧ

ಬೆಂಗಳೂರು : Budh Transit July 2022: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ಗ್ರಹವು ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುತ್ತದೆ. ಪ್ರತಿ ಗ್ರಹದ ರಾಶಿ ಪರಿವರ್ತನೆ ಸಮಯ ವಿಭಿನ್ನವಾಗಿರುತ್ತದೆ. ಬುಧ ಗ್ರಹವು ಬುದ್ಧಿಮತ್ತೆ, ತರ್ಕ, ಹಣ, ವ್ಯವಹಾರದ ಅಂಶವಾಗಿದೆ.  27 ದಿನಗಳಲ್ಲಿ ಬುಧ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಆದರೆ ಈ ಸಮಯವು ವಿಶೇಷ ಸಂದರ್ಭಗಳಲ್ಲಿ ಹೆಚ್ಚುತ್ತದೆ. ಜುಲೈ 2022 ರಲ್ಲಿ, ಬುಧ ಗ್ರಹವು ರಾಶಿಚಕ್ರವನ್ನು 3 ಬಾರಿ ಬದಲಾಯಿಸಲಿದೆ. ಒಂದೇ ತಿಂಗಳಲ್ಲಿ ಮೂರು ಬಾರಿ ಬುಧ ಸಂಕ್ರಮಣವು ಎಲ್ಲಾ 12 ರಾಶಿಚಕ್ರಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಆದರೆ ಇದು 4 ರಾಶಿಯ ಜನರ ಮೇಲೆ ಬಹಳ ಶುಭ ಪರಿಣಾಮವನ್ನು ಬೀರುತ್ತದೆ.   

ಈ ತಿಂಗಳಲ್ಲಿ ಮೂರು ಬಾರಿ ಬುಧ ಸಂಕ್ರಮಣ :
ಬುಧ ಗ್ರಹ ಜುಲೈ 2 ರಂದು ರಾಶಿಚಕ್ರವನ್ನು ಬದಲಾಯಿಸಿದ್ದು, ಪ್ರಸ್ತುತ ಮಿಥುನ ರಾಶಿಯಲ್ಲಿದೆ. ಜುಲೈ 17 ರಂದು ಬುಧ ಕರ್ಕಾಟಕ ರಾಶಿಯನ್ನು ಪ್ರವೇಶಿಸುತ್ತಾನೆ ಮತ್ತು ಜುಲೈ 31 ರಂದು ಕರ್ಕ ರಾಶಿಯನ್ನು ತೊರೆದು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. 

ಇದನ್ನೂ ಓದಿ : Tips For Married Men: ರಾತ್ರಿ ಮಲಗುವ ಮುನ್ನ ಈ ಕೆಲಸ ಮಾಡುವ ಪುರುಷರ ವೈವಾಹಿಕ ಜೀವನ ಬಂಬಾಟಾಗಿರುತ್ತದೆ

ವೃಷಭ ರಾಶಿ :  ಜುಲೈನಲ್ಲಿ ಮೂರು ಬಾರಿ ನಡೆಯುವ ಬುಧ ಸಂಕ್ರಮಣವು ವೃಷಭ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. ಈ ರಾಶಿಯವರು ಹೊಸ ಉದ್ಯೋಗವನ್ನು ಪಡೆಯುತ್ತಾರೆ. ಇವರ ಆದಾಯ ಹೆಚ್ಚಾಗಲಿದೆ. ಅವರು ತಮ್ಮ ಬುದ್ಧಿವಂತಿಕೆಯಿಂದ ಪ್ರತಿಯೊಂದು ಸಂದರ್ಭವನ್ನೂ ಚೆನ್ನಾಗಿ ನಿಭಾಯಿಸುತ್ತಾರೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. 

ಸಿಂಹ ರಾಶಿ : ಬುಧ ರಾಶಿಯ ಬದಲಾವಣೆಯು,  ಸಿಂಹ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. ಈ ರಾಶಿಯವರ ಆದಾಯ ಹೆಚ್ಚಲಿದೆ. ಹೊಸ ಉದ್ಯೋಗಾವಕಾಶ ದೊರೆಯಲಿದೆ. ಅನಿರೀಕ್ಷಿತ ಮೂಲಗಳಿಂದ  ಹಣ ಬರಲಿದೆ. ಸಂಬಂಧಗಳು ಉತ್ತಮವಾಗಿರುತ್ತವೆ. ವ್ಯಾಪಾರಸ್ಥರು ಉತ್ತಮ ಸಾಧನೆ ಮಾಡುವರು. 

ಇದನ್ನೂ ಓದಿ : ಶ್ರಾವಣ ಮಾಸದಲ್ಲಿ ಮಾಡುವ ಈ ಕೆಲಸಗಳಿಂದ ದೂರವಾಗಲಿದೆ ಎಲ್ಲಾ ಕಷ್ಟ

ಕನ್ಯಾ ರಾಶಿ : ಬುಧ ಸಂಚಾರವು ಕನ್ಯಾ ರಾಶಿಯವರ ಪಾಲಿಗೆ ಸಂತೋಷವನ್ನು ಹೊತ್ತು ತರಲಿದೆ.  ವೇತನ ಹೆಚ್ಚಳವಾಗಲಿದೆ. ವ್ಯಾಪಾರಿಗಳಿಗೆ ಲಾಭ ಹೆಚ್ಚಾಗಲಿದೆ. ಉದ್ಯೋಗ ಬದಲಾಯಿಸಲು ಇಚ್ಛಿಸುವವರು ಹೊಸ ಉದ್ಯೋಗ ಪಡೆಯಬಹುದು. 

ಮಕರ ರಾಶಿ : ಮಕರ ರಾಶಿಯವರು ಬುಧ ಸಂಕ್ರಮಣದಿಂದ ಲಾಭವನ್ನು ಪಡೆಯುತ್ತಾರೆ. ವೃತ್ತಿ ಮತ್ತು ವ್ಯವಹಾರದಲ್ಲಿ ಲಾಭವನ್ನು ಪಡೆಯುತ್ತಾರೆ. ಹಣಕಾಸಿನ ಪ್ರಯೋಜನವಾಗಲಿದೆ. ಜನರು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. 

 

 ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More