Home> Lifestyle
Advertisement

Banana Peel Face Pack: ಮುಖದಲ್ಲಿನ ಕಲೆ ನಿವಾರಣೆಗೆ ಬಳಸಿ ಬಾಳೆಹಣ್ಣಿನ ಫೇಸ್ ಪ್ಯಾಕ್

ಪ್ರತಿ ಋತುವಿನಲ್ಲಿ ಬಾಳೆಹಣ್ಣು ಸುಲಭವಾಗಿ ಲಭ್ಯವಿದೆ. ಬಾಳೆಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದರೊಂದಿಗೆ ಬಾಳೆಹಣ್ಣಿನ ಸಿಪ್ಪೆಯನ್ನು ಮುಖಕ್ಕೆ ಫೇಸ್ ಪ್ಯಾಕ್ ಆಗಿ ಬಳಸುವುದರಿಂದ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ.
 

Banana Peel Face Pack: ಮುಖದಲ್ಲಿನ ಕಲೆ ನಿವಾರಣೆಗೆ ಬಳಸಿ ಬಾಳೆಹಣ್ಣಿನ ಫೇಸ್ ಪ್ಯಾಕ್

Banana Peel Face Pack: ಬಾಳೆಹಣ್ಣಿನ ಸಿಪ್ಪೆ ಫೇಸ್ ಪ್ಯಾಕ್ ಮುಖಕ್ಕೆ ಹೊಸ ಹೊಳಪು ನೀಡುತ್ತದೆ. ಇದು ಮುಖದ ಮೇಲಿನ ಕಲೆಯನ್ನು ನಿವಾರಿಸುವುದಲ್ಲದೆ ಮುಖ ಹೊಳೆಯುವಂತೆ ಮಾಡುತ್ತದೆ. ಪ್ರತಿ ಋತುವಿನಲ್ಲಿ ಬಾಳೆಹಣ್ಣು ಸುಲಭವಾಗಿ ಲಭ್ಯವಿರುವುದರಿಂದ ಈ ಫೇಸ್ ಪ್ಯಾಕ್ ಅನ್ನು ವರ್ಷವಿಡೀ ಬಳಸಬಹುದು.

ಬಾಳೆಹಣ್ಣಿನ ಸಿಪ್ಪೆಯ ಗುಣಲಕ್ಷಣಗಳು:

ಬಾಳೆಹಣ್ಣಿನ ಸಿಪ್ಪೆಯಲ್ಲಿ ಅನೇಕ ಪೋಷಕಾಂಶಗಳಿವೆ. ಬಾಳೆಹಣ್ಣಿನಂತೆ (Banana), ಇದು ಕಾರ್ಬೋಹೈಡ್ರೇಟ್ಗಳು, ವಿಟಮಿನ್ ಬಿ 6, ಬಿ 12, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಅನ್ನು ಸಹ ಒಳಗೊಂಡಿದೆ. ನೀವು ಅದರ ಫೇಸ್ ಪ್ಯಾಕ್ (Face Pack) ಅನ್ನು ಅನ್ವಯಿಸಿದರೆ, ಅದು ಚರ್ಮದ ಹಲವು ಸಮಸ್ಯೆಗಳನ್ನು ಸರಿಮಾಡಲು ಸಹಾಯ ಮಾಡುತ್ತದೆ ಮತ್ತು ಚರ್ಮಕ್ಕೆ ಹೊಳಪು ತರಲು ಇದು ಸಹಾಯಕವಾಗಿರುತ್ತದೆ.

ಇದನ್ನೂ ಓದಿ- Banana Benefits : ಪ್ರತಿದಿನ ಬಾಳೆಹಣ್ಣು ತಿನ್ನುವುದರಿಂದ ಅನೇಕ ಪ್ರಯೋಜನಗಳು: ಇಲ್ಲಿವೆ ನೋಡಿ

ಬಾಳೆಹಣ್ಣಿನ ಫೇಸ್ ಪ್ಯಾಕ್ ತಯಾರಿಸಲು ಬೇಕಾಗುವ ಪದಾರ್ಥಗಳು:
>> ಬಾಳೆಹಣ್ಣಿನ ಸಿಪ್ಪೆಗಳು - 1 ಅಥವಾ 2
>> ಮೊಟ್ಟೆಯ ಬಿಳಿ ಭಾಗ - 2 ಟೀಸ್ಪೂನ್
>> ರೋಸ್ ವಾಟರ್ - 1 ಟೀಸ್ಪೂನ್

ಬಾಳೆಹಣ್ಣಿನ ಸಿಪ್ಪೆ ಫೇಸ್ ಪ್ಯಾಕ್ ತಯಾರಿಸುವುದು ಹೇಗೆ?
ಬಾಳೆಹಣ್ಣಿನ ಸಿಪ್ಪೆಯನ್ನು (Banana Peels) ಮಿಕ್ಸರ್ನಲ್ಲಿ ಹಾಕಿ ಮತ್ತು ಅದನ್ನು ರುಬ್ಬಿ ಪೇಸ್ಟ್ ಮಾಡಿ. ಈಗ ಒಂದು ಬಟ್ಟಲಿನಲ್ಲಿ ಪೇಸ್ಟ್ ತೆಗೆಯಿರಿ. ಇದಕ್ಕೆ ಮೊಟ್ಟೆಯ ಬಿಳಿ ಸೇರಿಸಿ. ರೋಸ್ ವಾಟರ್ ನೊಂದಿಗೆ ಮಿಶ್ರಣ ಮಾಡಿ. ಇದನ್ನು ಮುಖದ ಮೇಲೆ ಹಚ್ಚಿ. ಒಣಗಿದಾಗ ತೊಳೆಯಿರಿ.

ಇದನ್ನೂ ಓದಿ- Corona: ಕಿಡ್ನಿಯ ಮೇಲೂ ಪರಿಣಾಮ ಬೀರುತ್ತಿದೆಯೇ ಕರೋನಾ, ಅದನ್ನು ತಡೆಗಟ್ಟುವುದು ಹೇಗೆಂದು ತಿಳಿಯಿರಿ

ಡಾರ್ಕ್ ಸರ್ಕಲ್ ನಿವಾರಣೆಗೆ ಬಾಳೆಹಣ್ಣಿನ ಸಿಪ್ಪೆಯನ್ನು ಹೇಗೆ ಬಳಸುವುದು?
ಬಾಳೆಹಣ್ಣಿನ ಸಿಪ್ಪೆಗಳನ್ನು ತೆಗೆದುಕೊಳ್ಳಿ. ಅವುಗಳನ್ನು ತೆಳುವಾಗಿ ಕತ್ತರಿಸಿ ಕಣ್ಣುಗಳ ಕೆಳಗೆ ಇರಿಸಿ. ಸ್ವಲ್ಪ ಸಮಯದ ನಂತರ ಅದನ್ನು ತೆಗೆದುಹಾಕಿ. ವಾರಕ್ಕೆ ಮೂರು ಬಾರಿ ಈ ರೀತಿ ಮಾಡುವುದರಿಂದ ಡಾರ್ಕ್ ಸರ್ಕಲ್ ನಿವಾರಣೆಯಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More