Home> Lifestyle
Advertisement

Bad Luck Indications: ಜೀವನದಲ್ಲಿ ಮುಂಬರುವ ಬಿಕ್ಕಟ್ಟಿನ ಕುರಿತು ಸಂಕೇತಗಳನ್ನು ನೀಡುತ್ತವೆ ಈ ಘಟನೆಗಳು

Bad Luck Indications: ಜೀವನ ಅಂದ ಮೇಲೆ ಒಳ್ಳೆಯ ಹಾಗೂ ಕೆಟ್ಟ ದಿನಗಳು ಎದುರಾಗುತ್ತಲೇ ಇರುತ್ತವೆ. ಆದರೆ, ನಮ್ಮ ಸುತ್ತಮುತ್ತಲು ನಡೆಯುವ ಕೆಲ ಘಟನಾವಳಿಗಳು ನಮಗೆ ಆ ಒಳ್ಳೆಯ ಹಾಗೂ ಕೆಟ್ಟ ಸಂಗತಿಗಳ ಮುನ್ಸೂಚನೆಯನ್ನು ನೀಡುತ್ತವೆ. ಆ ಘಟನೆಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.
 

Bad Luck Indications: ಜೀವನದಲ್ಲಿ ಮುಂಬರುವ ಬಿಕ್ಕಟ್ಟಿನ ಕುರಿತು ಸಂಕೇತಗಳನ್ನು ನೀಡುತ್ತವೆ ಈ ಘಟನೆಗಳು

Bad Luck Indications: ಜೀವನ ಅಂದ ಮೇಲೆ ಒಳ್ಳೆಯ ಹಾಗೂ ಕೆಟ್ಟ ದಿನಗಳು ಎದುರಾಗುತ್ತಲೇ ಇರುತ್ತವೆ. ಆದರೆ, ನಮ್ಮ ಸುತ್ತಮುತ್ತಲು ನಡೆಯುವ ಕೆಲ ಘಟನಾವಳಿಗಳು ನಮಗೆ ಆ ಒಳ್ಳೆಯ ಹಾಗೂ ಕೆಟ್ಟ ಸಂಗತಿಗಳ ಮುನ್ಸೂಚನೆಯನ್ನು ನೀಡುತ್ತವೆ. ನಿಮ್ಮ ಜೀವನದಲ್ಲಿಯೂ ಕೂಡ ಇಂತಹ ಮುನ್ಸೂಚನೆಗಳು ದೊರೆತರೆ ತಕ್ಷಣ ಎಚ್ಚೆತ್ತುಕೊಳ್ಳಿ ಮತ್ತು ಮುಂದಾಗುವ ಭಾರಿ ನಷ್ಟದಿಂದ ಪಾರಾಗಿ. ಈ ಘಟನೆಗಳನ್ನು ಅಪ್ಪಿತಪ್ಪಿಯೂ ಕೂಡ ನಿರ್ಲಕ್ಷಿಸಬೇಡಿ.

ಜೋತಿಷ್ಯ ಪಂಡಿತರ ಪ್ರಕಾರ, ನಮಗೆ ಏನಾದರೂ ಅಹಿತಕರವಾದಾಗ, ಪ್ರಕೃತಿಯು ನಮಗೆ ಸಂಕೇತವನ್ನು ನೀಡುತ್ತದೆ. ನಾವು ದೈನಂದಿನ ಜೀವನದಿಂದ ಈ ಸಂಕೇತಗಳನ್ನು ಪಡೆಯುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಅವರ ಬಗ್ಗೆ ಸ್ವಲ್ಪ ಗಮನ ಹರಿಸಿದರೆ, ಎಚ್ಚರದಿಂದ ನೀವು ಯಾವುದೇ ಅಹಿತಕರ ಘಟನೆಯನ್ನು ದೃಢವಾಗಿ ಎದುರಿಸಬಹುದು.

1, ಮನೆಯ ಮೇಲ್ಛಾವಣಿಯ ಮೇಲೆ ಸತ್ತ ಪಕ್ಷಿ ಕಾಣುವುದು ಒಂದು ಅಶುಭ ಸಂಕೇತ. ಇದರಿಂದ ಮನೆಯಲ್ಲಿರುವ ಮಕ್ಕಳಿಗೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. 

2. ಮನೆಯಂಗಳದಲ್ಲಿ ನೆಡಲಾದ ತುಳಸಿ ಇದ್ದಕ್ಕಿದ್ದಂತೆ ಒಣಗಿದರೆ ತಕ್ಷಣ ಎಚ್ಚೆತ್ತುಕೊಳ್ಳಿ. ಯಾವುದೋ ಒಂದು ದುರಾದೃಷ್ಟ ಭವಿಷ್ಯದಲ್ಲಿ ಕಾದಿದೆ ಎಂಬುದರ ಸಂಕೇತ ಅದು. ಅದರಲ್ಲಿಯೂ ವಿಶೇಷವಾಗಿ ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆ ಇರುತ್ತದೆ.

3. ಆಕಸ್ಮಿಕವಾಗಿ ನೆಲದ ಮೇಲೆ ಎಣ್ಣೆ ಅಥವಾ ಹಾಲು ಬೀಳುವುದು ಒಂದು ಅಶುಭ ಸಂಕೇತ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ನಷ್ಟ ಉಂಟಾಗುವ ಸೂಚಕ ಅದು. ಇದರಂತೆಯೇ ಉಪ್ಪು ಬೀಳುವುದು ಕೂಡ ಒಂದು ಒಳ್ಳೆಯ ಸಂಕೇತವಲ್ಲ.

ಇದನ್ನೂ ಓದಿ-Mars Transit 2022: ವೃಷಭ ರಾಶಿಯಲ್ಲಿ ಭಾರಿ ಹಲ್ ಚಲ್ ಸೃಷ್ಟಿಸಿದ ಮಂಗಳ, ಯಾರಿಗೆ ಲಾಭ?

4. ಮನೆಯಲ್ಲಿನ ಗಡಿಯಾರ ಪದೇ ಪದೇ ನಿಂತುಹೋಗುತ್ತಿದ್ದರೆ, ಅದು ಒಳ್ಳೆಯ ಸಂಕೇತವೆಂದು ಪರಿಗಣಿಸಲಾಗುವುದಿಲ್ಲ. ಇದರಿಂದ ನಿಮ್ಮ ಅದೃಷ್ಟ ದುರಾದೃಷ್ಟವಾಗಿ  ತಿರುಗಲು ಸಮಯ ಬೇಕಾಗುವುದಿಲ್ಲ.

5. ಇದ್ದಕ್ಕಿದ್ದಂತೆ ರಾತ್ರಿ ಎಚ್ಚರವಾಗುವುದು ಕೂಡ ಒಂದು ಶುಭ ಸಂಕೇತವಲ್ಲ. ವಾಸ್ತು ದೋಷ ಹೊಂದಿರುವ ಮನೆಯಲ್ಲಿನ ನಕಾರಾತ್ಮಕತೆಯ ಸಂಕೇತವಿದು.

ಇದನ್ನೂ ಓದಿ-Chanakya Niti: ಶ್ರೀಮಂತರಲ್ಲ, ನಿಮ್ಮನ್ನು ಬಡವರನ್ನಾಗಿಸುತ್ತದೆ ಈ ರೀತಿಯ ಹಣ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More