Home> Lifestyle
Advertisement

ಮೊಡವೆಗಳ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ

Skin Care Tips: ಮೊಡವೆಗಳನ್ನು ಸೌಂದರ್ಯದ ಶತ್ರು ಎಂದು ಪರಿಗಣಿಸಲಾಗುತ್ತದೆ. ಯುವಕ-ಯುವತಿಯರಲ್ಲಿ ಮೊಡವೆ ಬಂತೆಂದರೆ ಒಂದು ರೀತಿಯ ಟೆನ್ಶನ್ ಶುರು ಆಗುತ್ತೆ.  ಆದರೆ, ಮೊಡವೆಗಳನ್ನು ಕಂಡ ಕ್ಷಣ ಗಾಬರಿಗೊಳ್ಳುವ ಅವಶ್ಯಕತೆ ಇಲ್ಲ.  

ಮೊಡವೆಗಳ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ

Skin Care Tips: ಯೌವನದಲ್ಲಿ ಯುವಕ-ಯುವತಿಯರಲ್ಲಿ ಮೊಡವೆ ಮೂಡುವುದು ಸಾಮಾನ್ಯ. ಇದಕ್ಕೆ ನಮ್ಮ ಆಹಾರ ಪದ್ಧತಿ, ಜೀವನಶೈಲಿ ಸೇರಿದಂತೆ ಹಲವು ಅಂಶಗಳು ಕಾರಣವಿರಬಹುದು. ಮೊಡವೆಗಳನ್ನು ಸೌಂದರ್ಯದ ಶತ್ರು ಎಂದು ಪರಿಗಣಿಸಲಾಗುತ್ತದೆ.  ಮೊಡವೆಗಳು ಮುಖದ ಸೌಂದರ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಇದು ಮುಖದ ಮೇಲೆ ಕಪ್ಪು ಕಲೆಗಳನ್ನು ಬಿಡುತ್ತದೆ. ಸಾಮಾನ್ಯವಾಗಿ, ಮೊಡವೆ ಬಂತೆಂದರೆ ಒಂದು ರೀತಿಯ ಟೆನ್ಶನ್ ಶುರು ಆಗುತ್ತೆ.  ಈ ಸಂದರ್ಭದಲ್ಲಿ ಮಾಡುವ ಕೆಲವು ತಪ್ಪುಗಳು ತ್ವಚೆಗೆ ಹಾನಿಕಾರಕ ಎಂದು ಸಾಬೀತು ಪಡಿಸಬಹುದು.  ಹಾಗಾಗಿ ಅಂತಹ ವಿಷಯಗಳ ಬಗ್ಗೆ ಕಾಳಜಿ ಅಗತ್ಯವಿದೆ.

ಮೊಡವೆ ಇದ್ದಾಗ ಈ ತಪ್ಪುಗಳನ್ನು ಮಾಡದಿರಲು ಪ್ರಯತ್ನಿಸಿ:

* ಮೊಡವೆಗಳನ್ನು ಪದೇ ಪದೇ ಸ್ಪರ್ಶಿಸುವುದು:
ಮೊಡವೆಗಳು ಉಂಟಾದಾಗ ಜನರು ಸಾಮಾನ್ಯವಾಗಿ ಪದೇ ಪದೇ ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ ಅವುಗಳನ್ನು ಮುಟ್ಟುತ್ತಿರುತ್ತಾರೆ. ಆದರೆ ಹೀಗೆ ಮಾಡುವುದರಿಂದ ನಿಮಗೆ ಹಾನಿಕಾರಕ. ಏಕೆಂದರೆ ಆಗಾಗ್ಗೆ ನಮ್ಮ ಕೈಗಳು ಕೊಳಕಾಗಿರುತ್ತವೆ ಮತ್ತು ಈ ರೀತಿ ಮಾಡುವುದರಿಂದ ಕೈಯ ಕೊಳೆ ಮೊಡವೆಗಳಿಗೆ ತಾಗಿ ತ್ವಚೆ ಹಾಳಾಗುತ್ತದೆ. ಹೆಚ್ಚು ಮುಟ್ಟಿದಾಗ ಮೊಡವೆಗಳು ಒಡೆಯಬಹುದು. ಇನ್ನೂ ಕೆಲವರು ಮೊಡವೆಗಳನ್ನು ಚಿವುಟಿ ಪಸ್ ತೆಗೆಯುತ್ತಾರೆ.  ಇದೂ ಸಹ ತ್ವಚೆಗೆ ಒಳ್ಳೆಯದಲ್ಲ. ಮೊಡವೆಗಳು ಒಡೆದು ಒಣಗಿದ ನಂತರ ಕಲೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. 

ಇದನ್ನೂ ಓದಿ- Protein Deficiency:ದೇಹದಲ್ಲಿ ಪ್ರೋಟೀನ್ ಕೊರತೆಯ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

* ಆಗಾಗ್ಗೆ ಮುಖ ತೊಳೆಯುವುದು:
ಅನೇಕ ಬಾರಿ ಜನರು ಮೊಡವೆಗಳನ್ನು ತೊಡೆದುಹಾಕಲು ಮತ್ತೆ ಮತ್ತೆ ಮುಖವನ್ನು ತೊಳೆಯುತ್ತಾರೆ. ಆದರೆ ಹಾಗೆ ಮಾಡುವುದರಿಂದ ಚರ್ಮವು ಶುಷ್ಕ ಮತ್ತು ನಿರ್ಜೀವವಾಗುತ್ತದೆ. ಚರ್ಮದ ತೇವಾಂಶದ ನಷ್ಟದಿಂದಾಗಿ, ಮುಖವು ವಿಚಿತ್ರವಾಗಿ ಕಾಣಲು ಪ್ರಾರಂಭಿಸುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಇಂತಹ ತಪ್ಪು ಮಾಡಬೇಡಿ ದಿನಕ್ಕೆ 2 ಬಾರಿ ಫೇಸ್ ವಾಶ್ ಮಾಡಿದರೆ ಸಾಕು.

ಇದನ್ನೂ ಓದಿ- Papaya Seeds: ಪರಂಗಿ ಮಾತ್ರವಲ್ಲ ಅದರ ಬೀಜಗಳೂ ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ

* ತಪ್ಪಾದ ಫೇಸ್ ವಾಶ್:
ಫೇಸ್ ವಾಶ್ ಮುಖವನ್ನು ಸ್ವಚ್ಛಗೊಳಿಸುತ್ತದೆ ಮತ್ತು ಮೊಡವೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ, ಆದರೆ ಅನೇಕ ಬಾರಿ ನಾವು ಸರಿಯಾದ ಫೇಸ್ ವಾಶ್ ಅನ್ನು ಆಯ್ಕೆ ಮಾಡುವುದಿಲ್ಲ. ಇದಕ್ಕಾಗಿ ನಾವು ತ್ವಚೆ ತಜ್ಞರ ಸಲಹೆಯನ್ನು ತೆಗೆದುಕೊಳ್ಳಬೇಕು. ಇದರಿಂದ ನಿಮ್ಮ ಸ್ಕಿನ್ ಸಾಮಾನ್ಯವಾಗಿದೆಯೇ, ಶುಷ್ಕವಾಗಿದೆಯೇ, ಎಣ್ಣೆಯುಕ್ತವಾಗಿದೆಯೇ, ಮಿಶ್ರಿತವಾಗಿದೆಯೇ ಅಥವಾ ಸೂಕ್ಷ್ಮವಾಗಿದೆಯೇ ಎಂಬುದನ್ನು ತಿಳಿದುಕೊಳ್ಳಬಹುದು. ಚರ್ಮದ ಪ್ರಕಾರವನ್ನು ತಿಳಿದ ನಂತರ, ಅದರ ಪ್ರಕಾರ ಸರಿಯಾದ ಫೇಸ್ ವಾಶ್ ಅನ್ನು ಖರೀದಿಸಿ, ಇಲ್ಲದಿದ್ದರೆ, ತಪ್ಪಾದ ಫೇಸ್ ವಾಶ್ ಕೂಡ ತ್ವಚೆಗೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More