Home> Lifestyle
Advertisement

Astrology: ಯಾವ ರಾಶಿಯ ಸಂಗಾತಿ ನಮಗೆ ಬೆಸ್ಟ್ ಸಂಗಾತಿ? ಬಹುತೇಕ ಜನರಿಗೆ ಇದರ ಉತ್ತರ ತಿಳಿದಿಲ್ಲ

Astrology - ಪ್ರತಿಯೊಂದು ರಾಶಿಗಳ (Zodiac Signs) ಗುಣಗಳ ಆಧಾರದ ಮೇಲೆ ನಿಮ್ಮ ಬಾಳಸಂಗಾತಿ (Best Zodiac Partner) ಸಂಬಂಧದಲ್ಲಿ ನಿಮ್ಮಿಂದ ಏನನ್ನು ಬಯಸುತ್ತಾರೆ ಎಂಬುದನ್ನು ತಿಳಿಯಬಹುದು. ಹಾಗಾದರೆ ಬನ್ನಿ ಯಾವ ರಾಶಿಯ ಸಂಗಾತಿಗಳು ಆದರ್ಶ ದಂಪತಿಗೆ (Model Couple) ಉದಾಹರಣೆಯಾಗಿರುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. 

Astrology: ಯಾವ ರಾಶಿಯ ಸಂಗಾತಿ ನಮಗೆ ಬೆಸ್ಟ್ ಸಂಗಾತಿ? ಬಹುತೇಕ ಜನರಿಗೆ ಇದರ ಉತ್ತರ ತಿಳಿದಿಲ್ಲ

ನವದೆಹಲಿ: Astrology - ಮದುವೆ ಅನ್ನೋದು ಸ್ವರ್ಗದಲ್ಲಿಯೇ ನಡೆದಿರುತ್ತದೆ (Marriages Are Made In Haven) ಎಂದು ಹಿರಿಯರು ಹೇಳುವುದನ್ನು ನೀವೂ ಕೂಡ ಕೇಳಿರಬಹುದು. ಜೋಡಿಗಳು ಒಟ್ಟಾಗಿ ಬಾಳಲೆಂದೇ ಹುಟ್ಟಿಕೊಂಡಿದ್ದು, ಯಾವುದಾದರೊಂದು ರೂಪದಲ್ಲಿ ಅವರ ಪರಸ್ಪರ ಭೇಟಿ ನಡೆದೇ ನಡೆಯುತ್ತದೆ.  ಒಂದು ಜೋಡಿಯ ನಡುವಿನ ಸಾಮರಸ್ಯತೆ ಆ ಜೋಡಿಯ ರಾಶಿಗಳು, ಅವುಗಳಿಂದ ಕೂಡುವ ಗುಣ-ಅವಗುಣಗಳು ಹಾಗೂ ವ್ಯಕ್ತಿತ್ವದ (Personality) ಮೇಲೆ ಆಧರಿಸಿರುತ್ತದೆ. ಜೋತಿಷ್ಯಶಾಸ್ತ್ರದ (Astrology) ಪ್ರಕಾರ, ಯುವಕ-ಯುವತಿಯರ ರಾಶಿಯನ್ನು (Zodiac Signs) ಹೋಲಿಸಿ ಅವರ ಮುಂದಿನ ಜೀವನದ ಕುರಿತು ಸ್ವಲ್ಪರ ಮಟ್ಟಿಗೆ ಅಂದಾಜು ವ್ಯಕ್ತಪಡಿಸಬಹುದು. ಹಾಗಾದರೆ ಬನ್ನಿ ಯಾವ ರಾಶಿಗಳ ಸಂಗಾತಿಗಳು  (Marriage Predictions) ಉತ್ತಮ ಉದಾಹರಣೆಯಾಗಿ ಮೆರೆಯುತ್ತಾರೆ ಎಂಬುದನ್ನು ಇಂದು ತಿಳಿದುಕೊಳ್ಳೋಣ.

>> ತುಲಾ ಹಾಗೂ ಸಿಂಹ ರಾಶಿಗಳ ಕನೆಕ್ಷನ್ - ಈ ಎರಡೂ ರಾಶಿಗಳ ಜನರ ಸ್ವಭಾವ ಪರಸ್ಪರ ತುಂಬಾ ಹೋಲುತ್ತದೆ. ಈ ಇಬ್ಬರ ಮನಸ್ಸು ಕೂಡ ತುಂಬಾ ನೀಳವಾಗಿರುವ ಕಾರಣ ಇವರು ಪರಸ್ಪರ ಏನನ್ನು ಮುಚ್ಚುಮರೆ ಮಾಡುವುದಿಲ್ಲ. ಇವರು ಪರಸ್ಪರ ತುಂಬಾ ಅರ್ಥಮಾಡಿಕೊಳ್ಳುವರಾಗಿರುತ್ತಾರೆ. ಈ ಎರಡೂ ರಾಶಿಯ ಜನರು ತಮ್ಮ ವೈವಾಹಿಕ ಜೀವನವನ್ನು ಸುಖಮಯಗೊಳಿಸಲು ಪ್ರಯತ್ನಿಸುತ್ತಾರೆ. ಸ್ವಭಾವದಿಂದ ತುಂಬಾ ರೋಮಾಂಟಿಕ್ ಆಗಿರುವ ಕಾರಣ ಇವರ ಮಧ್ಯೆ ಗಾಢ ಪ್ರೀತಿ ಇರುತ್ತದೆ. ಕೆಲವರು ಈ ಜೋಡಿಯನ್ನು ನೋಡಿ ಉರಿದು ಬೀಳುತ್ತಾರೆ ಎಂದೂ ಕೂಡ ಹೇಳಲಾಗುತ್ತದೆ.

>> ಸಿಂಹ ಹಾಗೂ ಧನು ರಾಶಿಯ ಸಪೋರ್ಟಿವ್ ಕನೆಕ್ಷನ್ (Supportive Connection) - ಸಿಂಹ ಹಾಗೂ ಧನು ರಾಶಿಯ ಜಾತಕದವರು (Astrology) ತುಂಬಾ ಆತ್ಮವಿಶ್ವಾಸಿಗಳು, ನಿರ್ಭಯ ಹಾಗೂ ಸಪೋರ್ಟಿವ್ ಸ್ವಭಾವದವರಾಗಿರುತ್ತಾರೆ. ಧನು ರಾಶಿಯ ಜನರು ಸಿಂಹ ರಾಶಿಯ ಜನರೆಡೆಗೆ ಆಕರ್ಷಿತರಾಗುತ್ತಾರೆ ಎನ್ನಲಾಗುತ್ತದೆ. ಸಂಗಾತಿಯಾಗಿ ಇವರು ಪರ್ಫೆಕ್ಟ್ ಕಪಲ್ ಉದಾಹರಣೆಯನ್ನು ಮುಂದಿಡುತ್ತಾರೆ. ಈ ಇಬ್ಬರೂ ಕೂಡ ಜೀವನದಲ್ಲಿ ಪರಸ್ಪರ ಸಪೋರ್ಟ್ ಮಾಡುತ್ತಾರೆ. ಅವಶ್ಯಕತೆ ಬಿದ್ದರೆ ಇವರು ಪರಸ್ಪರ ಧೈರ್ಯ ಕೂಡ ತುಂಬುತ್ತಾರೆ ಮತ್ತು ತುಂಬಾ ಪ್ರಾಮಾಣಿಕವಾಗಿ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ.

ಇದನ್ನೂ ಓದಿ-Oil Lamp : ಮನೆಯಲ್ಲಿ ಹಚ್ಚಿದ ದೀಪವನ್ನ ಬಾಯಿಯಿಂದ, ಕೈಯಿಂದ ಆರಿಸಬಾರದು ಯಾಕೆ? ಇಲ್ಲಿ ಓದಿ

>> ಸಿಂಹ ಹಾಗೂ ಕುಂಭ ಬೆಸ್ಟ್ ಕನೆಕ್ಷನ್ (Best Connection) - ಸಿಂಹ ಹಾಗೂ ಕುಂಭ ರಾಶಿಯ ಜೋಡಿ ಜಗತ್ತಿನಲ್ಲಿ ಬೆಸ್ಟ್ ಜೋಡಿ ಎಂದೇ ಹೇಳಲಾಗುತ್ತದೆ. ಈ ಇಬ್ಬರು ಪರಸ್ಪರರ ಪ್ರತಿ ಸಮರ್ಪಿತರಾಗಿರುತ್ತಾರೆ. ಸಂಪೂರ್ಣ ಪ್ರಾಮಾಣಿಕವಾಗಿ ಇವರು ತಮ್ಮ ಸಂಬಂಧವನ್ನು ನಿಭಾಯಿಸುತ್ತಾರೆ. ಈ ಇಬ್ಬರು ಪರಸ್ಪರ ತುಂಬಾ ಉತ್ಸಾಹಿಗಳಾಗಿರುತ್ತಾರೆ. ಇದೇ ಉತ್ಸಾಹ ಈ ಇಬ್ಬರ ಸಂಬಂಧದಲ್ಲಿ ಹಾಟ್ ನೆಸ್ ತುಂಬುತ್ತದೆ.

>> ಮೇಷ ಹಾಗೂ ಕುಂಭ ರಾಶಿಗಳ ರೊಮ್ಯಾಂಟಿಕ್ ಕನೆಕ್ಷನ್ (Romantic Connection) - ಈ ರಾಶಿ ಚಕ್ರದ ಜನರು ತುಂಬಾ ರೋಮಾಂಚಕರಾಗಿರುತ್ತಾರೆ. ಹೀಗಾಗಿ ಇವರನ್ನು ಬೆಸ್ಟ್ ರೊಮ್ಯಾಂಟಿಕ್ ಕಪಲ್ ಎಂದೂ ಕೂಡ ಕರೆಯಲಾಗುತ್ತದೆ. ಇವರು ನಿರ್ಭಯ, ಸಾಹಸಿಗಳು ಹಾಗೂ ಅಡ್ವೆಂಚರ್ ಪ್ರಿಯರಾಗಿರುತ್ತಾರೆ. ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಅವುಗಳ ಕುರಿತು ಅರಿಯುವ ಕುತೂಹಲ ಇವರಿಗಿರುತ್ತದೆ.  ಪ್ರತಿ ಬಾರಿ ಇವರು ಏನಾದರು ಡಿಫರೆಂಟ್ ಮಾಡಲು ಪ್ರಯತ್ನಿಸುತ್ತಾರೆ. ಈ ಇಬ್ಬರಲ್ಲಿಯೂ ಕೂಡ ಅಗಾಧ ಪ್ರೀತಿ ಇರುವ ಕಾರಣ ಇವರು ಪರಸ್ಪರ ದೂರವನ್ನು ಸಹಿಸುವುದಿಲ್ಲ. 

ಇದನ್ನೂ ಓದಿ-Vastu Tips: ಫ್ಯಾಮಿಲಿ ಫೋಟೋಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು, ಬೆಡ್ ರೂಂನಲ್ಲಿ ಎಂತಹ ಫೋಟೋ ಇರಬೇಕು? ಇಲ್ಲಿದೆ ವಾಸ್ತು ಟಿಪ್ಸ್

>> ಕುಂಭ ಹಾಗೂ ಮಿಥುನ ರಾಶಿಗಳ ಲವ್ ಅಟ್ ಫಸ್ಟ್ ಸೈಟ್ (Love At First Site) - ಈ ರಾಶಿ ಚಕ್ರದ ಜನರು ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬೀಳುತ್ತಾರೆ ಎನ್ನಲಾಗುತ್ತದೆ. ಮೊದಲ ನೋಟದಲ್ಲಿಯೇ ಇವರು ಪರಸ್ಪರರ ಆಕರ್ಷಣೆಗೆ ಒಳಗಾಗುತ್ತಾರೆ. ಇವರ ವಿಶೇಷತೆ ಎಂದರೆ, ಇವರ ಮೊದಲ ನೋಟದ ಆಕರ್ಷಣೆ ಎಂದಿಗೂ ಮುಗಿಯುವುದೇ ಇಲ್ಲ ಎನ್ನಲಾಗುತ್ತದೆ. ಹೀಗಿರುವಾಗ ಜೀವನ ಪೂರ್ತಿ ಈ ಇಬ್ಬರು ಪರಸ್ಪರ ಪ್ರಾಮಾಣಿಕತೆಯಿಂದ ಸಂಬಂಧ ನಿಭಾಯಿಸುತ್ತಾರೆ ಮತ್ತು ಸಮಾಜದಲ್ಲಿ ತಾವೇ ಬೆಸ್ಟ್ ಕಪಲ್ ಎಂದು ನಿರೂಪಿಸುತ್ತಾರೆ. 

>> ಕನ್ಯಾ ಹಾಗೂ ಮಕರ ರಾಶಿಗಳದ್ದು ಆದರ್ಶ ಜೋಡಿ (Model Couple) - ಈ ಎರಡು ಜಾತಕದ ಜನರಲ್ಲಿ ಸಮರ್ಪಣೆಯ ಭಾವನೆ ಇರುತ್ತದೆ. ಹೀಗಿರುವಾಗ ಇವರು ತಮ್ಮ ಸಂಗಾತಿಯ ಪ್ರತಿ ತುಂಬಾ ಪ್ರಾಮಾಣಿಕವಾಗಿ ಸಂಬಂಧ ನಿಭಾಯಿಸುತ್ತಾರೆ ಮತ್ತು ಸಮಾಜದಲ್ಲಿ ಓರ್ವ ಆದರ್ಶ ದಂಪತಿಯ ಜೋಡಿ ಎಂದು ಮೆರೆಯುತ್ತಾರೆ. ಇವರ ಮದುವೆಯ ನಂತರದ ಜೀವನ ತುಂಬಾ ಶಾಂತಿ ಹಾಗೂ ಸುಖದಿಂದ ಕಳೆಯುತ್ತದೆ.

ಇದನ್ನೂ ಓದಿ-Vastu Tips : ಸಂತೋಷ ಮತ್ತು ಸಮೃದ್ಧಿ ಹೆಚ್ಚಿಸಲು ಈ ಸಸ್ಯಗಳನ್ನು ಮನೆಯಲ್ಲಿ ನೆಡಿ!

(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದುಸ್ತಾನ್ ಕನ್ನಡ ಈ ಮಾಹಿತಿಯನ್ನು ದೃಢಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More