Home> Lifestyle
Advertisement

Astrology: ಪ್ರೀತಿ ಎಂದರೆ ಹೆದರುವ ಈ ರಾಶಿಯವರು ಸಹಿಸಲ್ಲ ದಾಂಪತ್ಯ ದ್ರೋಹ

Astrology: ಕೆಲವು ರಾಶಿಯವರು  (Zodiac Sign) ಪ್ರೀತಿ (Love) ಮಾಡಲು ತುಂಬಾ ಹೆದರುತ್ತಾರೆ. ಏಕೆಂದರೆ ಅವರ ಸಂಗಾತಿಯ (Partner) ದ್ರೋಹವನ್ನು ಸಹಿಸುವುದು ಅವರಿಗೆ ತುಂಬಾ ಕಷ್ಟ ಎಂದು ಹೇಳಲಾಗುತ್ತದೆ.

Astrology: ಪ್ರೀತಿ ಎಂದರೆ ಹೆದರುವ ಈ ರಾಶಿಯವರು ಸಹಿಸಲ್ಲ ದಾಂಪತ್ಯ ದ್ರೋಹ

Astrology: ಪ್ರೀತಿ  (Love) ಮಾಡಿದ ನಂತರ ಜಗತ್ತು ತುಂಬಾ ಸುಂದರವಾಗಿ ಕಾಣಲು ಆರಂಭವಾಗುತ್ತದೆ ಎಂದು ಹೇಳಲಾಗುತ್ತದೆ. ನಿಜವಾದ ಪ್ರೀತಿಯ ಸಂಗಾತಿ  (Partner) ಸಿಕ್ಕರೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಇರುತ್ತದೆ ಜೀವನ. ಆದರೆ ಕೆಲವು ಜನರು ಪ್ರೀತಿಯ ಹೆಸರು ಕೇಳಿದರೆ ಹೆದರುತ್ತಾರೆ. ಪ್ರೀತಿಯಲ್ಲಿ ಬೀಳುವುದನ್ನು ತಪ್ಪಿಸಲು ಈ ಜನರು ತಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಒಂದೊಮ್ಮೆ ಯಾರಾದರೂ ಅವರನ್ನು ಪ್ರೀತಿಸಿದರೂ, ಅವರು ಅವರನ್ನು ನಿರ್ಲಕ್ಷಿಸುತ್ತಾರಂತೆ. ಇದರ ಹಿಂದಿನ ಕಾರಣವೆಂದರೆ ಅವರು ಯಾರ ದ್ರೋಹವನ್ನು (Cheating) ಸಹಿಸಲು ಸಾಧ್ಯವಾಗುವುದಿಲ್ಲ. ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಚಕ್ರದ ಜನರು ನಿಜವಾದ ಪ್ರೀತಿಯನ್ನು ಮಾತ್ರ ನಂಬುತ್ತಾರೆ. 

ಈ ರಾಶಿಯ ಜನರು ಪ್ರೀತಿಗೆ ಏಕೆ ಹೆದರುತ್ತಾರೆ?

ಮೇಷ ರಾಶಿ (Aries): ಮೇಷ ರಾಶಿಯ ಜನರು ತಮ್ಮ ಆಪ್ತರ ಬಗ್ಗೆ ಬಹಳ ಸ್ವಾಮ್ಯ ಹೊಂದಿದ್ದಾರೆ ಮತ್ತು ಅವರು ಯಾವಾಗಲೂ ಅವರೊಂದಿಗೆ ಸಂಪರ್ಕ ಹೊಂದಲು ಇಷ್ಟಪಡುತ್ತಾರೆ. ತಮ್ಮ ಸಂಗಾತಿ (Life Partner) ತಮಗೆ ಮೋಸ ಮಾಡುವುದನ್ನು ಅವರು ಸಹಿಸಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವರು ಸಂಬಂಧವನ್ನು ಕೊನೆಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಹೇಳಲಾಗುತ್ತದೆ.  

ಇದನ್ನೂ ಓದಿ- Navratri 2021: ನವರಾತ್ರಿಯಲ್ಲಿ ಇವುಗಳಲ್ಲಿ ಒಂದನ್ನು ಮನೆಗೆ ತನ್ನಿ, ನಿಮ್ಮ ಅದೃಷ್ಟ ಬದಲಾಗುತ್ತದೆ

ಸಿಂಹ ರಾಶಿ  (Leo): ಸಿಂಹ ರಾಶಿಚಕ್ರದ ಜನರು ಬಹಳ ವಿರಳವಾಗಿ ಪ್ರೀತಿಸುತ್ತಾರೆ. ಅವರು ಮೇಲ್ನೋಟಕ್ಕೆ ಎಷ್ಟೇ ಧೈರ್ಯವಂತರಾಗಿ ಕಂಡರೂ ಒಳಗೊಳಗೇ ತಮ್ಮ ಸಂಗಾತಿಯ ಬಗ್ಗೆ ತುಂಬಾ ಹೆದರುತ್ತಾರೆ. ಅವರು ಯಾರನ್ನಾದರೂ ಪ್ರೀತಿಸಿದಾಗ (Love Life) ಅವರನ್ನು ಕಣ್ಮುಚ್ಚಿ ನಂಬುತ್ತಾರೆ. ಆದರೆ ಪ್ರೀತಿಸಿದ ವ್ಯಕ್ತಿ ತಮಗೆ ಮೋಸ ಮಾಡುತ್ತಿದ್ದಾರೆ ಎಂದು ತಿಳಿದರೆ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ತಯಾರಾಗುತ್ತಾರೆ. 

ಕನ್ಯಾ ರಾಶಿ  (Virgo): ಕನ್ಯಾ ರಾಶಿಚಕ್ರದ ಜನರು ತಮ್ಮ ಸಂಗಾತಿಯ ಬಗ್ಗೆ ತುಂಬಾ ಪ್ರಾಮಾಣಿಕರಾಗಿರುತ್ತಾರೆ ಮತ್ತು ಅವರಿಂದಲೂ ಅದನ್ನೇ ನಿರೀಕ್ಷಿಸುತ್ತಾರೆ. ಆದರೆ ಸಂಗಾತಿ ಮೋಸ ಮಾಡಿದರೆ, ಆತನಿಂದ ದೂರವಿರುವುದು ಉತ್ತಮ ಎಂದು  ಭಾವಿಸಿ ಅವರಿಂದ ದೂರವಾಗುತ್ತಾರೆ.

ಇದನ್ನೂ ಓದಿ- Astrology : ಈ 3 ರಾಶಿಯವರು ತುಂಬಾ ನಿಗೂಢರು : ಇವರು ಹುಟ್ಟಿನಿಂದಲೇ ಅದೃಷ್ಟವಂತರಂತೆ

ಧನು  ರಾಶಿ (Sagittarius): ಧನು ರಾಶಿಯ ಜನರು ತಮ್ಮ ಸಂಗಾತಿಯ ವಂಚನೆಯನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ. ಅನೇಕ ಬಾರಿ ಅಂತಹ ಜನರು ತಮ್ಮ ಸಂಗಾತಿಯ ದಾಂಪತ್ಯ ದ್ರೋಹದಿಂದಾಗಿ ತುಂಬಾ ನಿರಾಶೆಗೊಳ್ಳುತ್ತಾರೆ. ಆದರೂ, ಅವರು ತಮ್ಮ ಸಂಗಾತಿಯಿಂದ ಶಾಶ್ವತವಾಗಿ ದೂರವಿರಲು ಆಯ್ಕೆ ಮಾಡುತ್ತಾರೆ. 

(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More