Home> Lifestyle
Advertisement

Astrology: ಈ 4 ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ ನವೆಂಬರ್ 2021

Astrology: ನವೆಂಬರ್ 2021 ರಲ್ಲಿ, 3 ಪ್ರಮುಖ ಗ್ರಹಗಳು ತಮ್ಮ ಚಲನೆಯನ್ನು ಬದಲಿಸಾಲಿವೆ. ಪ್ರಮುಖ ಗ್ರಹಗಳ ಈ ರಾಶಿ ಪರಿವರ್ತನೆಯು ದ್ವಾದಶ ರಾಶಿಗಳ ಮೇಲೆ ಪರಿಣಾಮವನ್ನು ಉಂಟು ಮಾಡಲಿದೆ. ಎಲ್ಲಾ ರಾಶಿಗಳಿಗೆ ಇದು ಬಹಳ ಮುಖ್ಯವಾಗಿರುತ್ತದೆ, ಆದರೆ ಈ ಸಮಯವು 4 ರಾಶಿಚಕ್ರದ ಜನರಿಗೆ ಬಹಳ ಮಂಗಳಕರವಾಗಿರುತ್ತದೆ. 

Astrology: ಈ 4 ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ ನವೆಂಬರ್ 2021

Astrology: ಪ್ರತಿ ತಿಂಗಳು ಕೆಲವು ಗ್ರಹಗಳು ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುತ್ತವೆ. ಗ್ರಹಗಳ ಈ ರಾಶಿ ಪರಿವರ್ತನೆಯು (Grah Rashi Parivartan)  ದ್ವಾದಶ ರಾಶಿಗಳ ಮೇಲೆ ಪರಿಣಾಮ ಉಂಟು ಮಾಡುತ್ತವೆ. ಹಾಗಾಗಿ ಗ್ರಹಗಳ ರಾಶಿ ಪರಿವರ್ತನೆಯನ್ನು ಬಹಳ ಮುಖ್ಯ ಎಂದು ಪರಿಗಣಿಸಲಾಗಿದೆ. ನವೆಂಬರ್ ತಿಂಗಳಲ್ಲಿ (November 2021) ಕೆಲವು ಪ್ರಮುಖ ಗ್ರಹಗಳು ತಮ್ಮ ರಾಶಿಚಕ್ರವನ್ನು ಬದಲಾಯಿಸುತ್ತಿವೆ. ಇದು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ದೊಡ್ಡ ಪರಿಣಾಮ ಬೀರಲಿದೆ. 

ವಾಸ್ತವವಾಗಿ, ನವೆಂಬರ್ 2021 ರಲ್ಲಿ ಬುಧ (Mercury), ಗುರು (Jupiter) ಮತ್ತು ಸೂರ್ಯ (Sun) ಗ್ರಹಗಳು ರಾಶಿಚಕ್ರ ಚಿಹ್ನೆಗಳನ್ನು ಬದಲಾಯಿಸುತ್ತಿದ್ದಾರೆ. ಈ ಮೂರು ಗ್ರಹಗಳು ಬುದ್ಧಿವಂತಿಕೆ, ಅದೃಷ್ಟ, ಶಕ್ತಿ, ಯಶಸ್ಸಿನ ಅಂಶಗಳು. ಈ ಬದಲಾವಣೆಯು 4 ರಾಶಿಚಕ್ರದ ಜನರಿಗೆ ಬಹಳ ಶುಭಕರವಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ- Lucky Zodiac Sign: ಈ ರಾಶಿಯ ಜನ ಹಣದ ವಿಷಯದಲ್ಲಿ ತುಂಬಾ ಅದೃಷ್ಟವಂತರು, ನೀವು ಸಹ ಭಾಗಿಯಾಗಿದ್ದೀರಾ!

ಮೂರು ಗ್ರಹಗಳ ರಾಶಿ ಪರಿವರ್ತನೆ, ಈ ರಾಶಿಯವರ ವೃತ್ತಿ ಜೀವನದಲ್ಲಿ ಮಹತ್ವದ ಬದಲಾವಣೆ:
ನವೆಂಬರ್ ತಿಂಗಳಿನಲ್ಲಿ ಮೂರು ಪ್ರಮುಖ ಗ್ರಹಗಳ ರಾಶಿ ಪರಿವರ್ತನೆಯಿಂದ (Grah Rashi Parivartan) ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದಾದರೂ, ಈ ಸಮಯವನ್ನು ನಾಲ್ಕು ರಾಶಿಯವರಿಗೆ ಬಹಳ ಶುಭಕರ ಎಂದು ಪರಿಗಣಿಸಲಾಗಿದೆ. ನವೆಂಬರ್ ಮಾಸದಲ್ಲಿ ನಾಲ್ಕು ರಾಶಿಚಕ್ರದವರ ಉದ್ಯೋಗ ಜೀವನದಲ್ಲಿ ಪ್ರಮುಖ ಬದಲಾವಣೆ ಸಂಭವಿಸಲಿದೆ. ಅವರ ವೃತ್ತಿಜೀವನವು (Career) ಹೊಳೆಯುತ್ತದೆ ಎನ್ನಲಾಗಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...

ಕರ್ಕಾಟಕ ರಾಶಿ (Cancer): ಕರ್ಕಾಟಕ ರಾಶಿಯ ಜನರು ನವೆಂಬರ್ ನಲ್ಲಿ ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ (Career) ಸಿಗಲಿದೆ. ಪ್ರವಾಸಕ್ಕೆ ತೆರಳಲು ಉತ್ತಮ ಸಮಯ. ಹಣ ಗಳಿಕೆ ಮತ್ತು ಹೂಡಿಕೆಗಳಿಗೆ ಉತ್ತಮ ಸಮಯವಿರುತ್ತದೆ. 

ವೃಶ್ಚಿಕ ರಾಶಿ (Scorpio): ವೃಶ್ಚಿಕ ರಾಶಿಯವರಿಗೆ ಇದು ತುಂಬಾ ಸಮಾಧಾನದ ಸಮಯವಾಗಿರುತ್ತದೆ. ದೀರ್ಘ ಕಾಲದಿಂದ ನೀವು ಅನುಭವಿಸುತ್ತಿದ್ದ ತೊಂದರೆಗಳು ಕೊನೆಗೊಳ್ಳಲಿವೆ. ಕೆಲಸದ ಸ್ಥಳದಲ್ಲಿ ಸಮಯ ಉತ್ತಮವಾಗಿರುತ್ತದೆ, ನಿಮಗೆ ಗೌರವ ಸಿಗುತ್ತದೆ. ತಿಂಗಳಿಡೀ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. 

ಇದನ್ನೂ ಓದಿ- Karwa Chauth 2021: ಕರ್ವಾ ಚೌತ್‌ನಲ್ಲಿ ವಿಶೇಷ ಸಂಯೋಗ; ಈ ರೀತಿ ವ್ರತಾಚರಣೆಯಿಂದ ಇಷ್ಟಾರ್ಥ ಸಿದ್ಧಿ ಪ್ರಾಪ್ತಿ

ಧನು ರಾಶಿ (Sagittarius): ಧನು ರಾಶಿಯ ಜನರು ತಮ್ಮ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಕಠಿಣ ಪರಿಶ್ರಮ ಪೂರ್ಣ ಫಲ ನೀಡುತ್ತದೆ. ಈ ತಿಂಗಳು ವೃತ್ತಿಜೀವನಕ್ಕೆ ಉತ್ತಮವಾಗಿದೆ. ಆರೋಗ್ಯ, ಕೌಟುಂಬಿಕ ಜೀವನ ಚೆನ್ನಾಗಿರುತ್ತದೆ. ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ.

ಮೀನ ರಾಶಿ (Pisces): ಮೀನ ರಾಶಿಯ ಜನರು ಕೆಲವು ಪ್ರಮುಖ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಹಣ ಸಿಗುತ್ತದೆ. ನೀವು ಬಯಸಿದ ಕೆಲಸವನ್ನು ಪಡೆಯುತ್ತೀರಿ. ಅದೃಷ್ಟ ಒಲವು ತೋರುತ್ತದೆ. ಜೀವನದಲ್ಲಿ ಸಂತೋಷ ಇರುತ್ತದೆ. 

(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More