Home> Lifestyle
Advertisement

Astro Tips: ಜಾತಕದಲ್ಲಿ ಈ ಗ್ರಹದ ದುರ್ಬಲ ಸ್ಥಾನ ಕೆಲಸ ಕಾರ್ಯಗಳಲ್ಲಿ ವಿಘ್ನಕ್ಕೆ ಕಾರಣ, ಈ ನಾಲ್ಕು ಉಪಾಯ ಅನುಸರಿಸಿ

Astro Tips: ಜೀವನದಲ್ಲಿ ಹಲವು ಬಾರಿ ವ್ಯಕ್ತಿಗಳಿಗೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಗಳಲ್ಲಿ ಕೈಗೂಡಿ ಬರುವ ಕೆಲಸಗಳಲ್ಲಿಯೂ ಕೂಡ ಯಶಸ್ಸು ಲಭಿಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜೋತಿಷ್ಯ ಶಾಸ್ತ್ರದಲ್ಲಿ ಕೆಲ ಪರಿಹಾರಗಳನ್ನು ಸೂಚಿಸಲಾಗಿದೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
 

Astro Tips: ಜಾತಕದಲ್ಲಿ ಈ ಗ್ರಹದ ದುರ್ಬಲ ಸ್ಥಾನ ಕೆಲಸ ಕಾರ್ಯಗಳಲ್ಲಿ ವಿಘ್ನಕ್ಕೆ ಕಾರಣ, ಈ ನಾಲ್ಕು ಉಪಾಯ ಅನುಸರಿಸಿ

Success Mantra: ಹಿಂದೂ ಧರ್ಮದಲ್ಲಿ, ಪ್ರತಿ ದಿನವೂ ಒಂದಲ್ಲ ಒಂದು ದೇವತೆಗೆ ಸಮರ್ಪಿಸಲಾಗಿದೆ. ಭಾನುವಾರ ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯನ ಪೂಜೆ ಮತ್ತು ಉಪಾಯಗಳಿಗೆ ಸಮರ್ಪಿಸಲಾಗಿದೆ. ಈ ದಿನ, ಜಾತಕದಲ್ಲಿ ಸೂರ್ಯನ ಸ್ಥಾನವನ್ನು ಬಲಪಡಿಸಲು ಅನೇಕ ಉಪಾಯಗಳನ್ನು ಸೂಚಿಸಲಾಗಿದೆ. ಜ್ಯೋತಿಷ್ಯದಲ್ಲಿ, ಭಾನುವಾರವನ್ನು ವೃತ್ತಿಜೀವನದ ಅಭಿವೃದ್ಧಿಯ ದಿನವೆಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಸೂರ್ಯನ ಸ್ಥಾನವು ನೀಚ ಅಥವಾ ದುರ್ಬಲವಾಗಿದ್ದರೆ, ವ್ಯಕ್ತಿಯು ಒತ್ತಡ ಮತ್ತು ಸಂಕಷ್ಟ ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ವ್ಯಕ್ತಿಯು ಮಾಡುವ ಕೆಲಸವೂ ಕ್ಷೀಣಿಸಲು ಪ್ರಾರಂಭಿಸುತ್ತದೆ.

ದುರ್ಬಲ ಸೂರ್ಯನಿಂದ ವ್ಯಕ್ತಿಯ ವೃತ್ತಿ ಜೀವನದಲ್ಲಿ ಬೆಳವಣಿಗೆ ನಿಂತು ಹೋಗುತ್ತದೆ ಮತ್ತು ಅಧಿಕಾರಿಗಳ ಜೊತೆಗಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ವೃತ್ತಿಜೀವನದಲ್ಲಿ ನೀವು ಬೆಳವಣಿಗೆಯನ್ನು ಬಯಸಿದರೆ, ಭಾನುವಾರದಂದು ಕೆಲವು ಸುಲಭವಾದ ಉಪಾಯಗಳನ್ನು ಅನುಸರಿಸಬಹುದು. ಇದರಿಂದ ಜಾತಕದಲ್ಲಿ ಸೂರ್ಯನ ಸ್ಥಾನಕ್ಕೆ ಬಲ ಸಿಗುತ್ತದೆ ಮತ್ತು ಹದಗೆಟ್ಟ ನಿಮ್ಮ ಕೆಲಸಗಳು ಮತ್ತೆ ಪ್ರಾರಂಭವಾಗುತ್ತವೆ.

ಭಾನುವಾರ ಈ ಉಪಾಯಗಳು ಜೀವನದಲ್ಲಿನ ಸಂಕಷ್ಟ ನಿವಾರಿಸುತ್ತವೆ.
>> ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಭಾನುವಾರದಂದು ಎರಡು ಬಾರಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದರಿಂದ ಸೂರ್ಯನ ಸ್ಥಾನಕ್ಕೆ ಬಲ ಸಿಗುತ್ತದೆ. ವಾಸ್ತವದಲ್ಲಿ, ಸೂರ್ಯನ ಶಕ್ತಿಯು ಎಲ್ಲಾ ಗ್ರಹಗಳ ಮೇಲೆ ಪ್ರಭಾವ ಬೀರುತ್ತದೆ. ಭಾನುವಾರದಂದು ಉದಯಿಸುವ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಬೇಕು ಮತ್ತು ಸೂರ್ಯಾಸ್ತದ ಸಮಯದಲ್ಲಿ ಅರ್ಘ್ಯವನ್ನು ಅರ್ಪಿಸುವುದು ವ್ಯಕ್ತಿಯ ಜೀವನದಲ್ಲಿ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ವ್ಯಕ್ತಿಯ ಪರದಾಟವನ್ನು ಕಡಿಮೆ ಮಾಡುತ್ತದೆ.

>> ಭಾನುವಾರದಂದು ಉಪ್ಪನ್ನು ತ್ಯಜಿಸುವುದು ಮತ್ತು ಉಪವಾಸ ಮಾಡುವುದು ವ್ಯಕ್ತಿಯ ಮಾನಸಿಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತದೆ ಎಂದು ಹೇಳಲಾಗುತ್ತದೆ. ಸಂಕಷ್ಟ ಮತ್ತು ಸವಾಲುಗಳನ್ನು ಎದುರಿಸಲು ವ್ಯಕ್ತಿಗೆ ಸಹಾಯ ಮಾಡುತ್ತದೆ.

>> ಶಾಸ್ತ್ರಗಳಲ್ಲಿ ಸೂರ್ಯನನ್ನು ತಂದೆ-ತಾಯಿ ಮತ್ತು ಪೂರ್ವಜರಂತೆ ಪರಿಗಣಿಸಲಾಗುತ್ತದೆ. ಅಂದರೆ, ಅನಾದಿಕಾಲದಿಂದ ಆತ ನಿಮ್ಮ ಅಜ್ಜಿ-ತಾತ ಮುತ್ತಾತ ಹಾಗೂ ಪೂರ್ವಜರನ್ನು ನೋಡಿದ್ದಾನೆ ಎಂದರ್ಥ. ಇಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಹಿರಿಯರಿಗೆ ಅರ್ಘ್ಯವನ್ನು ಅರ್ಪಿಸಿದರೆ, ಅದು ಸೂರ್ಯನಿಗೆ ಬಲವನ್ನು ನೀಡುತ್ತದೆ ಮತ್ತು ನಿಮಗೆ ಪೂರ್ವಜರ ಆಶೀರ್ವಾದವನ್ನು ಲಭಿಸುತ್ತದೆ.

ಇದನ್ನೂ ಓದಿ-Betel Nut Benefits: ಕಂಕಣ ಬಲ ಕೂಡಿ ಬರಲು, ವೃತ್ತಿಜೀವನದಲ್ಲಿನ ಯಶಸ್ಸಿಗಾಗಿ ಅಡಿಕೆಯ ಈ ಉಪಾಯಗಳನ್ನು ಮಾಡಿ ನೋಡಿ

>> ಸೂರ್ಯನನ್ನು ಸ್ಥಾನವನ್ನು ಬಲಪಡಿಸಲು, ವಯಸ್ಸಾದವರಿಗೆ ಹಳದಿ ಅಥವಾ ಕೆಂಪು ಬಣ್ಣದ ಬಟ್ಟೆಗಳನ್ನು ದಾನ ಮಾಡಿ. ಹೀಗೆ ಮಾಡುವುದರಿಂದ ನೀವು ಜೀವನದಲ್ಲಿ ಶಾಂತಿಯನ್ನು ಅನುಭವಿಸುವಿರಿ. ಅಲ್ಲದೆ, ವ್ಯಕ್ತಿಯ ಕಷ್ಟಗಳು ಕಡಿಮೆಯಾಗುತ್ತವೆ.

ಇದನ್ನೂ ಓದಿ-Vastu Tips: ನಿಮ್ಮ ಆದಾಯ ಹೆಚ್ಚಿಸಲು ಈ ವಸ್ತುವನ್ನು ಮನೆಗೆ ತನ್ನಿ, ಹಣದ ಮಳೆಯಾಗುತ್ತದೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More