Home> Lifestyle
Advertisement

12 ವರ್ಷಗಳ ನಂತರ ರಾಶಿಗೆ ಪ್ರವೇಶಿಸುತ್ತಿರುವ ಗುರು , ಬೆಳಗಲಿದ್ದಾನೆ ಈ ರಾಶಿಯವರ ಅದೃಷ್ಟ

12 ವರ್ಷಗಳ ನಂತರ, ಗುರುದೇವ ತನ್ನದೇ ರಾಶಿಯಾದ ಮೀನ ರಾಶಿಯನ್ನು ಪ್ರವೇ ಶಿಸಲಿದ್ದಾನೆ.  ಗುರು ಗ್ರಹವು ಏಪ್ರಿಲ್ 13 ರಂದು 11:23ಕ್ಕೆ  ಮೀನ ರಾಶಿಯನ್ನು ಪ್ರವೇಶಿಸಲಿದೆ.  ಗುರುವಿನ ಮೀನ ರಾಶಿ ಪ್ರವೇಶದಿಂದ ಕೆಲವು ರಾಶಿಗಳ ಅದೃಷ್ಟವೇ ಬದಲಾಗಲಿದೆ.

12 ವರ್ಷಗಳ ನಂತರ ರಾಶಿಗೆ ಪ್ರವೇಶಿಸುತ್ತಿರುವ ಗುರು , ಬೆಳಗಲಿದ್ದಾನೆ ಈ ರಾಶಿಯವರ ಅದೃಷ್ಟ

ಬೆಂಗಳೂರು : ಏಪ್ರಿಲ್ ತಿಂಗಳಿನಲ್ಲಿ ಅನೇಕ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿವೆ. ಈ ತಿಂಗಳು ಜ್ಯೋತಿಷ್ಯದ ವಿಷಯದಲ್ಲಿ ಬಹಳ ವಿಶೇಷವಾಗಿರುತ್ತದೆ. ಈ ತಿಂಗಳು, ನವ  ಗ್ರಹಗಳು ರಾಶಿಚಕ್ರವನ್ನು ಬದಲಾಯಿಸಲಿವೆ (planet transit). ಅದರ ನೇರ ಪರಿಣಾಮವು ವ್ಯಕ್ತಿಯ ಜೀವನದ ಮೇಲೆ ಕಂಡುಬರುತ್ತದೆ. ಗ್ರಹಗಳ ಬದಲಾವಣೆಯಿಂದಾಗಿ, ವ್ಯಕ್ತಿಯ ಜೀವನದಲ್ಲಿ ಶುಭ ಮತ್ತು ಅಶುಭ ಪರಿಣಾಮಗಳು ಕಂಡುಬರುತ್ತವೆ. 

12 ವರ್ಷಗಳ ನಂತರ, ಗುರುದೇವ ತನ್ನದೇ ರಾಶಿಯಾದ ಮೀನ ರಾಶಿಯನ್ನು ಪ್ರವೇ ಶಿಸಲಿದ್ದಾನೆ.  ಗುರು ಗ್ರಹವು ಏಪ್ರಿಲ್ 13 ರಂದು 11:23ಕ್ಕೆ  ಮೀನ ರಾಶಿಯನ್ನು ಪ್ರವೇಶಿಸಲಿದೆ.  ಗುರುವಿನ ಮೀನ ರಾಶಿ ಪ್ರವೇಶದಿಂದ ಕೆಲವು ರಾಶಿಗಳ ಅದೃಷ್ಟವೇ ಬದಲಾಗಲಿದೆ. 

ಇದನ್ನೂ ಓದಿ : Budh Gochar: ವೃತ್ತಿ-ವ್ಯವಹಾರದಲ್ಲಿ ಪ್ರಗತಿಶೀಲ ಗ್ರಹ ಸಂಚಾರ, ಇದು ನಿಮಗೆ ಶುಭವೋ ಅಶುಭವೋ ತಿಳಿಯಿರಿ

ಮೇಷ : ಗುರುವು ಮೇಷ ರಾಶಿಯ 12 ನೇ ಮನೆಯಲ್ಲಿ ಸಾಗಲಿದ್ದಾನೆ . ಈ ಅವಧಿಯಲ್ಲಿ ವಿದೇಶ ಪ್ರವಾಸದ ಅವಕಾಶಗಳು ದೊರೆಯುತ್ತವೆ (Guru transit 2022) . ಧರ್ಮ ಕಾರ್ಯಗಳಲ್ಲಿ ಆಸಕ್ತಿ ಇರುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚುತ್ತದೆ. ವ್ಯಾಪಾರದಲ್ಲಿ ಲಾಭವಾಗುವ ಸಾಧ್ಯತೆ ಹೆಚ್ಚಿದೆ.  

ವೃಷಭ : ಗುರುವು ಈ ರಾಶಿಚಕ್ರದ 11 ನೇ ಮನೆಯಲ್ಲಿ ಸಾಗಲಿದ್ದಾನೆ. ಇದು ಆದಾಯದ ಮನೆಯಾಗಿದೆ.  ಹಾಗಾಗಿ ಆದಾಯದ ಮನೆಯಲ್ಲಿ ಗುರುಯಿದ್ದರೆ ಅದನ್ನು ಅದೃಷ್ಟ ಎನ್ನಲಾಗಿದೆ. ಈ ಅವಧಿಯಲ್ಲಿ ಕೆಲವು ದೊಡ್ಡ ಲಾಭವಾಗುವ ಸಾಧ್ಯತೆಯಿದೆ. ರಹಸ್ಯ ಮೂಲಗಳಿಂದ ಹಣಕಾಸಿನ ಲಾಭವಾಗುವ ಅವಕಾಶ ಎದುರಾಗಲಿದೆ (Guru transit effects). ಕೌಟುಂಬಿಕ ವಿಚಾರಗಳಲ್ಲಿ ಮಾಧುರ್ಯವಿರುತ್ತದೆ. ಈ ಸಮಯವು ವಿದ್ಯಾರ್ಥಿಗಳಿಗೂ ಪ್ರಯೋಜನಕಾರಿಯಾಗಿದೆ. 

ಇದನ್ನೂ ಓದಿ : Tulsi Remedies: ಒಣ ತುಳಸಿ ಎಲೆಗಳು ಕೂಡ ಅದೃಷ್ಟ ಬೆಳಗಿಸುತ್ತೆ! ಅದನ್ನು ಈ ರೀತಿ ಬಳಸಿ

ಮಿಥುನ :  ಗುರು ಸಂಕ್ರಮಣ ಈ ರಾಶಿಯವರಿಗೆ ಲಾಭದಾಯಕವಾಗಿರುವಂತೆ ಕಾಣಲಿದೆ.  ಈ ರಾಶಿಯ 10 ನೇ ಮನೆಯಲ್ಲಿ ಗುರು ಸಂಕ್ರಮಣ ನಡೆಯಲಿದೆ. ಈ ರಾಶಿಯವರು ಉದ್ಯೋಗದಲ್ಲಿ ಯಶಸ್ಸನ್ನು ಪಡೆಯಬಹುದು. ಔಷಧಿ, ಕಾನೂನು ಮತ್ತು ಆಹಾರಕ್ಕೆ ಸಂಬಂಧಿಸಿದ ಉದ್ಯೋಗದಲ್ಲಿ ತೊಡಗಿರುವ ಜನರಿಗೆ ಈ ಅವಧಿ ಹೆಚ್ಚು  ಅನುಕೂಲಕರವಾಗಿರುತ್ತದೆ. 

ಕರ್ಕಾಟಕ : ಗುರು ಗ್ರಹವು ಕರ್ಕಾಟಕದ 9 ನೇ ಮನೆಯಲ್ಲಿ ಸಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 9 ನೇ ಮನೆ ಅದೃಷ್ಟಡ ಮನೆಯಾಗಿರುತ್ತದೆ. ಸಾಗಣೆಯ ಸಂಪೂರ್ಣ ಅವಧಿಯು ತುಂಬಾ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ, ನೀವು ಮಾಡುವ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಸಂಬಳವೂ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೆ, ಈ ಸಾಗಣೆಯು ವ್ಯಾಪಾರಸ್ಥರಿಗೂ ಪ್ರಯೋಜನಕಾರಿಯಾಗಿದೆ. ವ್ಯಾಪಾರದಲ್ಲಿ ದೈನಂದಿನ ಆದಾಯ ಹೆಚ್ಚಾಗುತ್ತದೆ.

ಇದನ್ನೂ ಓದಿ : Astrology: ಸದಾ ಗೆಲ್ಲುವ ಉತ್ಸಾಹ ಹೊಂದಿರುತ್ತಾರೆ ಈ 4 ರಾಶಿಯ ಜನ

ಸಿಂಹ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರುವಿನ ಸಂಚಾರವು 8ನೇ ಮನೆಯಲ್ಲಿರುತ್ತದೆ. ಈ ಕಾರಣದಿಂದಾಗಿ, ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು. ಪ್ರಗತಿಯ ಅನೇಕ ಹೊಸ ಮಾರ್ಗಗಳು ಕಂಡುಬರುತ್ತವೆ. ಆದರೆ ಈ ಅವಧಿಯಲ್ಲಿ ವೈವಾಹಿಕ ಜೀವನದಲ್ಲಿ ಬೇರೆಯವರ ಹಸ್ತಕ್ಷೇಪದಿಂದಾಗಿ ಸಂಬಂಧದಲ್ಲಿ ಬಿರುಕು ಉಂಟುಮಾಡಬಹುದು. ಆದ್ದರಿಂದ ಅದರ ಬಗ್ಗೆ ಜಾಗರೂಕರಾಗಿರಿ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More