Home> Lifestyle
Advertisement

ಪತ್ನಿಯಲ್ಲಿ ಈ ಮೂರು ಗುಣವಿದ್ದರೆ ಬದುಕು ಬಂಗಾರ...!

ಆಚಾರ್ಯ ಚಾಣಕ್ಯರ ನೀತಿ ನಿಮಗೆ ಗೊತ್ತಿರಬಹುದು. ನೀತಿ ಶಾಸ್ತ್ರ ನಿಪುಣ ಆಚಾರ್ಯ ಚಾಣಕ್ಯರು ಹಲವು ವಿಷಯಗಳಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. 

ಪತ್ನಿಯಲ್ಲಿ ಈ ಮೂರು ಗುಣವಿದ್ದರೆ ಬದುಕು ಬಂಗಾರ...!

ನವದೆಹಲಿ : ಆಚಾರ್ಯ ಚಾಣಕ್ಯರ ನೀತಿ (Chanakya Niti) ನಿಮಗೆ ಗೊತ್ತಿರಬಹುದು. ನೀತಿ ಶಾಸ್ತ್ರ ನಿಪುಣ ಆಚಾರ್ಯ ಚಾಣಕ್ಯರು ಹಲವು ವಿಷಯಗಳಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ಜೀವನದಲ್ಲಿ ಸಫಲವಾಗಬೇಕಾದರೆ ಜೀವನದಲ್ಲಿ ಕೆಲವೊಂದು ವಿಚಾರಗಳನ್ನು ಪಾಲಿಸಬೇಕು ಎಂದು ಚಾಣಕ್ಯ (Chanakya) ಹೇಳಿದ್ದಾರೆ.  ಚಾಣಕ್ಯರ ಪ್ರಕಾರ ಪತ್ನಿಯ ಮೂರು ಗುಣಗಳು (Qualities of wife) ಅವರನ್ನು ಶ್ರೇಷ್ಠರನ್ನಾಗಿಸುತ್ತದೆ ಎಂದು ಹೇಳುತ್ತಾರೆ ಚಾಣಕ್ಯ. ಪತ್ನಿಯ ಈ ಮೂರುಗುಣಗಳಿಂದಲೇ ಪುರಷ ಸುಖೀ ಜೀವನವನ್ನು ಆನಂದಿಸುತ್ತಾನೆ ಎನ್ನುತ್ತಾರೆ ಚಾಣಕ್ಯ. ಹಾಗಾದರೆ, ಆ ಮೂರು ಗುಣಗಳು ಯಾವುದು..?

1. ವಿನಮ್ರತೆ: 

ಚಾಣಕ್ಯರ (Chanakya) ಪ್ರಕಾರ ಸ್ತ್ರೀ ವಿನಮ್ರ ಮತ್ತು ದಯಾಳು ಆಗಿರಬೇಕು. ಪರಿವಾರದೊಂದಿಗೆ (family) ಅನ್ಯೋನ್ಯವಾಗಿರಬೇಕು.  ಎಂದಿಗೂ ಕೂಡಾ ಪರಿವಾರದ ಒಳಿತಿಗೆ ಯೋಚಿಸಬೇಕು.

ಇದನ್ನೂ ಓದಿ : Palmistry: ನಿಮ್ಮ ಕೈಯಲ್ಲಿಯೂ ಕೂಡ ಈ ರೇಖೆ ಇದೆಯಾ? ಹಾಗಾದರೆ ನಿಮಗಿದೆ ಸರ್ಕಾರಿ ನೌಕರಿಯ ಯೋಗ

2. ಧರ್ಮ ಪರಿಪಾಲನೆ:  
ಚಾಣಕ್ಯರ ಪ್ರಕಾರ ಪತ್ನಿ (Wife)  ಯಾವತ್ತಿಗೂ ಧರ್ಮ ಪರಿಪಾಲನೆ ಮಾಡಬೇಕು.  ಧರ್ಮ ಪಾಲನೆ ಮಾಡುವ ಪತ್ನಿ ಸತ್ಕರ್ಮದತ್ತ ಪ್ರೇರಿತಳಾಗುತ್ತಾಳೆ. ಮಕ್ಕಳಿಗೆ ಸಂಸ್ಕಾರ ಕಲಿಸುತ್ತಾಳೆ.  ತನ್ನ ಕರ್ತವ್ಯ ನಿರ್ವಹಿಸುವಲ್ಲಿ ಆಕೆ ವಿಚಲಿತವಾಗುವುದಿಲ್ಲ.  ಇಂಥಹ ಸ್ತ್ರೀ ಕೇವಲ ಪರಿವಾರಕ್ಕೆ ಅಷ್ಟೇ ಅಲ್ಲ, ಸಮಸ್ತ ತಲೆಮಾರಿನ ಕಲ್ಯಾಣಕ್ಕೆ ಕಾರಣವಾಗುತ್ತಾಳೆ.

3. ಉಳಿತಾಯ ಮನೋಭಾವ:
ಚಾಣಕ್ಯ ಪ್ರಕಾರ ಸ್ತ್ರೀ ಯಾವತ್ತಿಗೂ ಹಣ (Money) ಉಳಿಸುವತ್ತ ಯೋಚನೆ ಮಾಡಬೇಕು.  ಯಾವ ಸ್ತ್ರೀಯಲ್ಲಿ ಹಣ ಉಳಿಸುವ ಪರಿಪಾಠ ಇರುತ್ತದೆಯೋ ಅಂಥಹ ಕುಟುಂಬ ಸುಲಭದಲ್ಲಿ ಕೆಟ್ಟ ಸಮಯವನ್ನು ಸೋಲಿಸಿ ಗೆದ್ದು ಬರುತ್ತದೆ.

ಇದನ್ನೂ ಓದಿ : Government Job Remedies: ಸರ್ಕಾರಿ ನೌಕರಿ ಗಿಟ್ಟಿಸುವ ನಿಮ್ಮ ಕನಸು ಈಡೇರಿಸಲು ಈ ಸಲಹೆಗಳನ್ನು ಅನುಸರಿಸಿ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More