Home> Karnataka
Advertisement

New Guidelines : ಲಾಕ್ ಡೌನ್ ಮಾರ್ಗಸೂಚಿ ಬದಲಾವಣೆ : ಸಂತೆ, ಮಾರುಕಟ್ಟೆ ಸಂಪೂರ್ಣ ಬಂದ್..!

ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಹಾಪ್ ಕಾಮ್ಸ್, ಎಲ್ಲ ಹಾಲಿನ ಬೂತುಗಳು ತಳ್ಳುವಗಾಡಿಮೂಲಕ ಹಣ್ಣು, ತರಕಾರಿ

New Guidelines : ಲಾಕ್ ಡೌನ್ ಮಾರ್ಗಸೂಚಿ ಬದಲಾವಣೆ : ಸಂತೆ, ಮಾರುಕಟ್ಟೆ ಸಂಪೂರ್ಣ ಬಂದ್..!

ಬೆಂಗಳೂರು : ರಾಜ್ಯ ಸರ್ಕಾರ ಲಾಕ್ ಡೌನ್ ಮಾರ್ಗಸೂಚಿಗಳನ್ನ ಮತ್ತೆ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ.

ಹೌದು, ಹೊಸ ಮಾರ್ಗಸೂಚಿ(New Guidelines)ಗಳಲ್ಲಿ ಸಂತೆ ಮತ್ತು ಮಾರುಕಟ್ಟೆಗಳನ್ನ ಸಂಪೂರ್ಣ ಬಂದ್ ಮಾಡಿ ನಿನ್ನೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

ಇದನ್ನೂ ಓದಿ : BS Yediyurappa : 'ರಾಜ್ಯದ ಕೊರೋನಾ ಲಸಿಕೆ ಕೊರತೆಯನ್ನ 2-3 ದಿನಗಳಲ್ಲಿ ಬಗೆಹರಿಸಲಾಗುವುದು' 

ಇನ್ನು ಬೆಳಗ್ಗೆ 6 ರಿಂದ 12 ರವರೆಗೆ ದಿನಸಿ ಅಂಗಡಿಗಳು ತೆರೆಯಲು ಅವಕಾಶ ನೀಡಲಾಗಿದೆ. ಅಲ್ಲದೆ, ಮಾರುಕಟ್ಟೆ(Market), ವಾರದ ಸಂತೆಗಳನ್ನು ಬಂದ್ ಮಾಡಲಾಗಿದ್ದು, ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ತಳ್ಳು ಗಾಡಿಗಳಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ : Covid Protocol : ಬೈಎಲೆಕ್ಷನ್ ಮತ ಎಣಿಕೆಗೆ ತೆಗೆದುಕೊಳ್ಳಲಿದೆ ಹೆಚ್ಚು ಸಮಯ..!

ಪ್ರಸ್ತುತ ಮಾರುಕಟ್ಟೆಗಳಲ್ಲಿ ಆಗುತ್ತಿರುವ ಜನಸಂದಣಿ/ನೂಕು ನುಗ್ಗಲುಗಳನ್ನು ತಪ್ಪಿಸಲು ದಿನಾಂಕ 2/5 /2021 ಅಂದರೆ ಇಂದಿನಿಂದ ಅನ್ವಯವಾಗುವಂತೆ ಎಲ್ಲ ರೀತಿಯ ಸಂತೆ, ವಾರದ ಸಂತೆಗಳನ್ನ  ನಿರ್ಬಂಧಿಸಲಾಗಿದೆ. ಇದರ ಬದಲಿಗೆ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಹಾಪ್ ಕಾಮ್ಸ್, ಎಲ್ಲ ಹಾಲಿನ ಬೂತುಗಳು ತಳ್ಳುವಗಾಡಿಮೂಲಕ ಹಣ್ಣು, ತರಕಾರಿಗಳನ್ನು(Vegetables) ದುಬಾರಿ ಬೆಲೆಗೆ ಮಾರಾಟ ಮಾಡದೆ, ಮಾರುಕಟ್ಟೆ ಬೆಲೆಗೆ ಮಾರಾಟ ಮಾಡುವುದು ಹಾಗೂ ಕೋವಿಡ್-19 ನಿಯಮಗನ್ನು ಪಾಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : Corona Vaccine: ಆದಷ್ಟು ಬೇಗ ಕೊರೋನಾ ಲಸಿಕೆ ಕೊರತೆ ನಿವಾರಿಸಿ, ಎಲ್ಲರಿಗೂ ಲಸಿಕೆ ಕೊಡಿ-ಸಿದ್ದರಾಮಯ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More