Home> Karnataka
Advertisement

Weekend Curfew: ವೀಕೆಂಡ್ ಕರ್ಫ್ಯೂಗೆ ಕೌಂಟ್ ಡೌನ್: ಬಸ್ ಓಡುತ್ತಾ..? ಮೆಟ್ರೋ ಸೇವೆ ಇರುತ್ತಾ..?

ವೀಕೆಂಡ್ ಕರ್ಪ್ಯೂ (Weekend Curfew) ಸಂದರ್ಭದಲ್ಲಿ ಅಂದರೆ ಶನಿವಾರ, ಭಾನುವಾರ ಸಾರಿಗೆ (Transport) ಸಂಚಾರದಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಅದರಲ್ಲೂ ಬಿಎಂಟಿಸಿ ಬಹುತೇಕ ಸ್ತಬ್ಧವಾಗಲಿದೆ. ವೀಕೆಂಡ್ ಕರ್ಫ್ಯೂ ದಿನ ಶೇ. 10ರಷ್ಟು ಬಿಎಂಟಿಸಿ ಬಸ್ ಗಳು ಮಾತ್ರ ರಸ್ತೆಗೆ ಇಳಿಯಲಿವೆ. ಆದರೆ ಈ ಬಸ್ ಗಳು ಸಾಮಾನ್ಯ ಪ್ರಯಾಣಿಕರ ಓಡಾಟಕ್ಕೆ ಲಭ್ಯವಿರುವುದಿಲ್ಲ.

Weekend Curfew: ವೀಕೆಂಡ್ ಕರ್ಫ್ಯೂಗೆ ಕೌಂಟ್ ಡೌನ್: ಬಸ್ ಓಡುತ್ತಾ..? ಮೆಟ್ರೋ ಸೇವೆ ಇರುತ್ತಾ..?

ಬೆಂಗಳೂರು: ಓಮಿಕ್ರಾನ್ (Omicron) ಆರ್ಭಟ ಹಾಗೂ ಕರೋನಾ 3ನೇ ಅಲೆಯ (Corona Third Wave) ಅಟ್ಟಹಾಸದ ನಡುವೆ ರಾಜ್ಯದಲ್ಲಿ ನೈಟ್ ಕರ್ಫ್ಯೂ (Night Curfew) ಜೊತೆ ವೀಕೆಂಡ್ ಕರ್ಫ್ಯೂ (Weekend Curfew) ಕೂಡ ಜಾರಿಯಾಗಿದೆ. ಇವತ್ತು ರಾತ್ರಿ 10 ಗಂಟೆಗೆ ಇಡೀ ರಾಜ್ಯಕ್ಕೆ ಬೀಗ ಬಿದ್ದರೆ ಮತ್ತೆ ಎಲ್ಲವೂ ನಾರ್ಮಲ್ ಆಗೋದು ಸೋಮವಾರ ಬೆಳಗ್ಗೆ 5 ಗಂಟೆಗೆ. ಹಾಗಾದ್ರೆ ವೀಕೆಂಡ್ ಕರ್ಫ್ಯೂ ವೇಳೆ ಬಿಎಂಟಿಸಿ ಬಸ್, ಮೆಟ್ರೋ ಸಂಚಾರ ಇರುತ್ತಾ..? ಇಲ್ವಾ..? ಅನ್ನೋ ಪ್ರಶ್ನೆಗೆ ಕಂಪ್ಲೀಟ್ ಉತ್ತರ ಇಲ್ಲಿದೆ.

ವೀಕೆಂಡ್ ಕರ್ಪ್ಯೂ (Weekend Curfew) ಸಂದರ್ಭದಲ್ಲಿ ಅಂದರೆ ಶನಿವಾರ, ಭಾನುವಾರ ಸಾರಿಗೆ (Transport) ಸಂಚಾರದಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಅದರಲ್ಲೂ ಬಿಎಂಟಿಸಿ ಬಹುತೇಕ ಸ್ತಬ್ಧವಾಗಲಿದೆ. ವೀಕೆಂಡ್ ಕರ್ಫ್ಯೂ ದಿನ ಶೇ. 10ರಷ್ಟು ಬಿಎಂಟಿಸಿ ಬಸ್ ಗಳು ಮಾತ್ರ ರಸ್ತೆಗೆ ಇಳಿಯಲಿವೆ. ಆದರೆ ಈ ಬಸ್ ಗಳು ಸಾಮಾನ್ಯ ಪ್ರಯಾಣಿಕರ ಓಡಾಟಕ್ಕೆ ಲಭ್ಯವಿರುವುದಿಲ್ಲ. ಹಾಗಾದ್ರೆ ಯಾರೆಲ್ಲಾ ಬಿಎಂಟಿಸಿ ಬಸ್ ಬಳಸಬಹುದು ಅನ್ನೋದನ್ನ ನೋಡೋದಾದ್ರೆ.

ಇದನ್ನೂ ಓದಿ-  Covid Death: ಪರಿಹಾರ ಮೊತ್ತ ಸ್ವೀಕಾರಿಸಲು ನಿರಾಕರಣೆ ಮಾಡುತ್ತಿರುವ COVID-19 ಮೃತ ಕುಟುಂಬಸ್ಥರು

ಯಾರಿಗೆಲ್ಲಾ ಬಿಎಂಟಿಸಿ ಸೇವೆ..?
1) ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಿಗಳು, ಪೊಲೀಸರು, ಹೋಂ ಗಾರ್ಡ್ಸ್, ಸಿವಿಲ್ ಡಿಫೆನ್ಸ್, ಅಗ್ನಿ ಶಾಮಕ & ತುರ್ತು ಸೇವೆಗಳ ಸಿಬ್ಬಂದಿ ಬಿಎಂಟಿಸಿ ಸೇವೆ ಬಳಸಬಹುದು.

2) ಆಸ್ಪತ್ರೆಗೆ ತೆರಳುವ ರೋಗಿಗಳು ಮತ್ತು ಚಿಕಿತ್ಸೆ, ಪರೀಕ್ಷೆಗೆ ಕರೆದುಕೊಂಡು ಹೋಗುವವರಿಗೆ ಬಿಎಂಟಿಸಿ (BMTC) ಬಸ್ ಸೇವೆ ಲಭ್ಯವಿರುತ್ತದೆ.

3) ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರು, ಸಿಬ್ಬಂದಿ, ಲ್ಯಾಬ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಬಿಎಂಟಿಸಿ ಬಳಸಬಹುದು.

4) ಸರ್ಕಾರಿ/ಖಾಸಗಿ ಬ್ಯಾಂಕ್, ವಿಮೆ ಕಂಪನಿಗಳ ಸಿಬ್ಬಂದಿ, ಅಧಿಕಾರಿಗಳು. ಮುದ್ರಣ ಮತ್ತು ದೃಶ್ಯ ಮಾಧ್ಯಮದಲ್ಲಿ ಕೆಲಸ ಮಾಡುವವರು ಅವಕಾಶ ಕಲ್ಪಿಸಲಾಗಿದೆ.

5) ದೂರದ ಊರಿಗೆ ಪ್ರಯಾಣ ಮಾಡುವ ಬಸ್ (Bus), ವಿಮಾನ (Flight), ರೈಲು (Train) ಪ್ರಯಾಣಿಕರು ಟಿಕೆಟ್ ತೋರಿಸಿ ಪ್ರಯಾಣಿಸಬಹುದು. 

6) ಪರೀಕ್ಷೆ ಬರೆಯಲು ಹೋಗುವ ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

7) ಬಸ್ ಸೇವೆ ಬಳಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಐಡಿ ಕಾರ್ಡ್ ತೋರಿಸಬೇಕು. ವೀಕೆಂಡ್ ಕರ್ಪ್ಯೂ ಸಂದರ್ಭದಲ್ಲಿ ಸಾಮಾನ್ಯ ಜನರಿಗೆ ಬಿಎಂಟಿಸಿ ಬಸ್ ನಲ್ಲಿ ಸಂಚರಿಸಲು ಅವಕಾಶ ಇರುವುದಿಲ್ಲ.

ಇದನ್ನೂ ಓದಿ-  Mallikarjun Kharge : ಪಿಎಂ ಭದ್ರತಾ ವೈಫಲ್ಯದ ನೆಪದಲ್ಲಿ ಪಂಜಾಬ್ ವಿರುದ್ಧ ಬಿಜೆಪಿ ಗೂಬೆ ಕೂರಿಸುವ ಕಾರ್ಯ'

ಮೆಟ್ರೋ ಕಥೆ ಏನು..?
ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲೂ ನಮ್ಮ ಮೆಟ್ರೋ (Namma Metro) ರೈಲು ಸಂಚಾರ ಲಭ್ಯವಿರಲಿದೆ. ಶನಿವಾರ ಹಾಗೂ ಭಾನುವಾರ ಬೆಳಗ್ಗೆ 8 ರಿಂದ ರಾತ್ರಿ 9ರ ತನಕ ಮಾತ್ರ ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ನಾಗಸಂದ್ರ, ಕೆಂಗೇರಿ ಮತ್ತು ಬೈಯಪ್ಪನಹಳ್ಳಿ ನಿಲ್ದಾಣದಿಂದ ಬೆಳಗ್ಗೆ 8ಕ್ಕೆ ಮೆಟ್ರೋ ರೈಲು ಹೊರಡಲಿದೆ. ಪ್ರತಿ 20 ನಿಮಿಷಕ್ಕೆ 1 ಮೆಟ್ರೋ ರೈಲು ಸಂಚರಿಸಲಿದೆ. ಟರ್ಮಿನಲ್ ನಿಲ್ದಾಣದಿಂದ ಕೊನೆಯ ರೈಲು ರಾತ್ರಿ 9 ಗಂಟೆಗೆ ಹೊರಡಲಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ‌.

ಕೆಎಸ್ ಆರ್ ಟಿಸಿ ಬಸ್ ಇರುತ್ತಾ..?
ವೀಕೆಂಡ್ ಕರ್ಪ್ಯೂ ವೇಳೆ ಕೆಎಸ್ ಆರ್ ಟಿಸಿ (KSRTC) ಸಂಚಾರ ಇರುತ್ತದೆ. ಆದರೆ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಕೆಎಸ್ ಆರ್ ಟಿಸಿ ಬಸ್ ಗಳು ಸಂಚರಿಸಲಿವೆ. ರಾತ್ರಿ ಬಸ್ ಸೇವೆಯಲ್ಲಿ ಆನ್ ಲೈನ್ ಬುಕಿಂಗ್ ಗೆ ಆದ್ಯತೆ ನೀಡಲಾಗಿದೆ. ಮುಖ್ಯವಾಗಿ ಕೇರಳ, ಮಹಾರಾಷ್ಟ್ರ ಹಾಗೂ ಗೋವಾದಿಂದ ರಾಜ್ಯಕ್ಕೆ ಅಗಮಿಸುವ ಪ್ರಯಾಣಿಕರು 72 ಗಂಟೆಯ ಒಳಗೆ ಆರ್ ಟಿಪಿಸಿಆರ್ ಪರೀಕ್ಷೆ ಮಾಡಿಸಿರಬೇಕು. ನೆಗೆಟಿವ್ ರಿರ್ಪೋಟ್ ಹಾಗೂ ಮಾಸ್ಕ್ ಇದ್ದರೆ ಮಾತ್ರ ನೆರೆ ರಾಜ್ಯದ ಪ್ರಯಾಣಿಕರಿಗೆ ಎಂಟ್ರಿ ಸಿಗಲಿದೆ. ಇಲ್ಲವಾದರೆ ಗಡಿಯಲ್ಲೇ ಅಂತಹ ಪ್ರಯಾಣಿಕರಿಗೆ ಗೇಟ್ ಪಾಸ್ ನೀಡಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More