Home> Karnataka
Advertisement

Police Action on PFI Issue: ‘ಪಿಎಫ್ಐ ಮತ್ತು ಅದರ ಅಂಗ ಸಂಸ್ಥೆಗಳಿಗೆ ಸೇರಿದ್ರೆ ಎಚ್ಚರ’: ಪೊಲೀಸರಿಂದ ಬಂತು ವಾರ್ನಿಂಗ್

Police Action on PFI Issue: ಕಾನೂನು ಬಾಹಿರ ಚಟುವಟಿಕೆಗಳ (ಯುಎಪಿಎ) ನ್ಯಾಯ ಮಂಡಳಿ ಸೂಚನೆ ಮೇರೆಗೆ ಪೊಲೀಸರು ಎಚ್ಚರಿಕೆ ಕರೆಗಂಟೆಯನ್ನು ನೀಡುತ್ತಿದ್ದು, ನಗರದ ಎಲ್ಲ ವಿಭಾಗದ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರಿಂದ ಮನವರಿಕೆ ಕಾರ್ಯ ನಡೆಯುತ್ತಿದೆ.

Police Action on PFI Issue: ‘ಪಿಎಫ್ಐ ಮತ್ತು ಅದರ ಅಂಗ ಸಂಸ್ಥೆಗಳಿಗೆ ಸೇರಿದ್ರೆ ಎಚ್ಚರ’: ಪೊಲೀಸರಿಂದ ಬಂತು ವಾರ್ನಿಂಗ್

Police Action on PFI Issue:ದೇಶದಲ್ಲಿ ಪಿಎಫ್ಐ ಹಾಗೂ ಅದರ ಅಂಗ ಸಂಸ್ಥೆಗಳ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಸಾರ್ವಜನಿಕರಿಗೆ ಪೊಲೀಸರು ಖಡಕ್ ಸೂಚನೆ ನೀಡಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಪಿಎಫ್ ಐ ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.

ಕಾನೂನು ಬಾಹಿರ ಚಟುವಟಿಕೆಗಳ (ಯುಎಪಿಎ) ನ್ಯಾಯ ಮಂಡಳಿ ಸೂಚನೆ ಮೇರೆಗೆ ಪೊಲೀಸರು ಎಚ್ಚರಿಕೆ ಕರೆಗಂಟೆಯನ್ನು ನೀಡುತ್ತಿದ್ದು, ನಗರದ ಎಲ್ಲ ವಿಭಾಗದ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರಿಂದ ಮನವರಿಕೆ ಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ: Nagaraj Watal : ರಾಜ್ಯಕ್ಕೆ ಬರುವ ಮಹಾರಾಷ್ಟ್ರ ಸಚಿವರನ್ನು ಬಂಧಿಸಿ : ವಾಟಾಳ್ ಆಗ್ರಹ 

ಪೊಲೀಸ್ ಸೂಚನೆಗಳು:

1. ಪಿಎಫ್ಐ ಸಂಘಟನೆ ಸಂಬಂಧಿತ ಕಾರ್ಯ ಚಟುವಟಿಕೆ ಕಂಡು ಬಂದಲ್ಲಿ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.

2.  ಪಿಎಫ್ಐ ಹಾಗೂ ಅದರ ಅಂಗ ಸಂಸ್ಥೆಗಳನ್ನ ಕೇಂದ್ರ ಸರ್ಕಾರ ನಿಷೇಧಿಸಿದೆ. ಆದ್ದರಿಂದ ಸಾರ್ವಜನಿಕರು ಈ ಸಂಘಟನೆಗೆ ಸೇರುವುದಾಗಲಿ ಅಥವಾ ಸಂಘಟನೆಗಳ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾಗುವಂತಿಲ್ಲ.

3. ಈ ಬಗ್ಗೆ ಮಾಹಿತಿ ಕಂಡು ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಕೂಡಲೇ ಮಾಹಿತಿ ನೀಡುವಂತೆ ಸೂಚನೆ.

ಪಿಎಫ್ಐ ಮತ್ತು ಅದರ ಅಂಗ ಸಂಸ್ಥೆಗಳ ನಿಷೇಧದ ಬಗ್ಗೆ ಪ್ರಚಾರ ಮಾಡಲು ನ್ಯಾಯಮಂಡಳಿಯಿಂದ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಲೌಡ್ ಸ್ಪೀಕರ್ ಮೂಲಕ ನಗರದಲ್ಲಿ ಪೊಲೀಸರು ಪ್ರಚಾರ ನಡೆಸುತ್ತಿದ್ದಾರೆ.

ಇನ್ನು ಟ್ರಿಬ್ಯೂನಲ್ ಸೂಚನೆಯನ್ನ ಎಲ್ಲಾ ವಿಭಾಗದ ಡಿಸಿಪಿಗಳಿಗೆ ರವಾನೆ ಮಾಡಲಾಗಿದ್ದು, ಇದೀಗ ಆಯಾ ಠಾಣಾ ವ್ಯಾಪ್ತಿಯಲ್ಲಿ ಮೈಕ್ ಮೂಲಕ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ. ಇನ್ನೊಂದೆಡೆ ಡಿಸಿ ಕಚೇರಿಯ ನೋಟಿಸ್ ಬೋರ್ಡ್ ನಲ್ಲೂ ಈ ಬಗ್ಗೆ ಪ್ರಕಟಿಸಲು ಸೂಚನೆ ನೀಡಲಾಗಿದೆ.

PFI ನಿಷೇಧಿಸಿ ಆದೇಶ:

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ), ಅದರ ಮಿತ್ರಪಕ್ಷಗಳು ಮತ್ತು ಅದರ ಎಲ್ಲಾ ಅಂಗಸಂಸ್ಥೆಗಳನ್ನು ಕಾನೂನುಬಾಹಿರ ಸಂಘ ಎಂದು ಘೋಷಿಸುವ ಮೂಲಕ ಕೇಂದ್ರ ಸರ್ಕಾರ ಸೆಪ್ಟೆಂಬರ್ ತಿಂಗಳಲ್ಲಿ ನಿಷೇಧ ಹೇರಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಎಲ್ಲಾ ಸಂಘಟನೆಗಳಿಗೂ ಐದು ವರ್ಷಗಳ ಕಾಲ ನಿಷೇಧ ಹೇರಿ ಆದೇಶ ಹೊರಡಿಸಿದೆ. ಯುಎಪಿಎ ಕಾಯ್ದೆಯಡಿ ಸಂಘಟನೆಯನ್ನು ನಿಷೇಧಿಸಲಾಗಿದೆ.

ಪಿಎಫ್‌ಐ ಪಿತೂರಿ:

ದೇಶದಾದ್ಯಂತ ನಡೆಯುತ್ತಿರುವ ತೀವ್ರ ಪ್ರತಿಭಟನೆಗಳು ಮತ್ತು ಭಯೋತ್ಪಾದಕ ಕೃತ್ಯಗಳ ಹಿಂದೆ ಪಿಎಫ್‌ಐ ಕೈವಾಡ ಇದೆ ಎಂಬ ಅನುಮಾನ ಕಾಡುತ್ತಿದೆ. ಅಷ್ಟೇ ಅಲ್ಲದೆ, ಸೂಕ್ಷ್ಮ ಪ್ರದೇಶಗಳಲ್ಲಿ ಅಶಾಂತಿ ಹರಡಲು ಈ ಸಂಘಟನೆ ಪಿತೂರಿ ನಡೆಸಿತ್ತು ಎಂಬುದು ತಿಳಿದುಬಂದಿತ್ತು.

ಇದನ್ನೂ ಓದಿ: Murugesh Nirani : 'ಜಿಮ್ ಒಪ್ಪಂದ ಮುಂದಿನ 5 ವರ್ಷದೊಳಗೆ ಶೇ.75 ರಷ್ಟು ಅನುಷ್ಠಾನ'

ಏನಿದು ಪಿಎಫ್ಐ?

ಪಿಎಫ್ಐ ಎಂದರೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ. ಇದನ್ನು 2006 ರಲ್ಲಿ ಕೇರಳದಲ್ಲಿ ಸ್ಥಾಪಿಸಲಾಯಿತು. ಈ ಸಂಘಟನೆಯು ಭಾರತದಲ್ಲಿ ಅಂಚಿನಲ್ಲಿರುವ ವಿಭಾಗಗಳ ಸಬಲೀಕರಣಕ್ಕಾಗಿ ನವ-ಸಾಮಾಜಿಕ ಆಂದೋಲನವನ್ನು ನಡೆಸುತ್ತಿದೆ ಎಂದು ಹೇಳಿಕೊಂಡರೂ ಸಹ ಇತ್ತೀಚಿನ ದಿನಗಳಲ್ಲಿ ಮೂಲಭೂತ ಇಸ್ಲಾಂ ಧರ್ಮವನ್ನು ಪ್ರಚಾರ ಮಾಡುತ್ತಿದೆ ಎಂದು ಭದ್ರತಾ ಸಂಸ್ಥೆಗಳು ಹೇಳಿಕೊಂಡಿವೆ. ಈ ಸಂಸ್ಥೆಯನ್ನು ಕೇರಳದಲ್ಲಿ ಸ್ಥಾಪಿಸಲಾಗಿದ್ದರೂ ಸಹ ಇದರ ಕೇಂದ್ರ ಕಚೇರಿ ಇರುವುದು ದೆಹಲಿಯಲ್ಲಿ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Read More