Home> Karnataka
Advertisement

1 ರೂ.ಗೆ ರಾಗಿ ಮುದ್ದೆ ನೀಡಿ ಹೋಟೇಲ್‌ ತಿಂಡಿಗಳ ಬೆಲೆ ಏರಿಕೆ ಖಂಡಿಸಿದ ವಾಟಾಳ್..!

ಹೋಟೆಲ್‌ಗಳಲ್ಲಿ ತಿಂಡಿಗಳ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್ ರವರು ಇಂದು ಮಧ್ಯಾಹ್ನ ನಗರದ ಕೆಂಪೇಗೌಡ ಬಸ್‌ ನಿಲ್ದಾಣದ ಬಳಿ 1 ರೂ.ಗೆ ರಾಗಿ ಮುದ್ದೆ, ಸಾರು ನೀಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟಿಸಿದರು.

1 ರೂ.ಗೆ ರಾಗಿ ಮುದ್ದೆ ನೀಡಿ ಹೋಟೇಲ್‌ ತಿಂಡಿಗಳ ಬೆಲೆ ಏರಿಕೆ ಖಂಡಿಸಿದ ವಾಟಾಳ್..!

ಬೆಂಗಳೂರು : ಹೋಟೆಲ್‌ಗಳಲ್ಲಿ ತಿಂಡಿ ತಿನಿಸುಗಳ ದರ ಏರಿಕೆ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ವಾಟಾಳ್‌ ನಾಗರಾಜ್ ಕಿಡಿ ಕಾರಿದ್ದಾರೆ. ಅಲ್ಲದೆ, ಒಂದು ರೂಪಾಯಿಗೆ ರಾಗಿ ಮುದ್ದೆ ನೀಡುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. 

ನಗರದ ಹೋಟೆಲ್‌ಗಳಲ್ಲಿ ತಿಂಡಿಗಳ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್ ರವರು ಇಂದು ಮಧ್ಯಾಹ್ನ ನಗರದ ಕೆಂಪೇಗೌಡ ಬಸ್‌ ನಿಲ್ದಾಣದ ಬಳಿ 1 ರೂ.ಗೆ ರಾಗಿ ಮುದ್ದೆ, ಸಾರು ನೀಡುವ ಮೂಲಕ ವಿನೂತನ ರೀತಿಯ ಪ್ರತಿಭಟನೆ ಮಾಡಿದರು. 

ಇದನ್ನೂ ಓದಿ: ಹಿಸ್ಟರಿ ಕ್ರಿಯೇಟ್ ಮಾಡಲಿರುವ ‘ಟೋಬಿ’ ಸಿನಿಮಾದ ಟ್ರೈಲರ್ ಇಂದು ರಿಲೀಸ್!

ಏಕಾಏಕಿ ವೈಜ್ಞಾನಿಕವಾಗಿಯೂ ಚಿಂತನೆ ಮಾಡದೆ ಹೋಟೆಲ್‌ಗಳಲ್ಲಿ ತಿಂಡಿಗಳ ಬೆಲೆ ಏರಿಸಿರುವುದು ಸರಿಯಾದ ಕ್ರಮವಲ್ಲ. ತಿಂಡಿಗಳ ಬೆಲೆ ಏರಿಕೆ ಅವೈಜ್ಞಾನಿಕವಾಗಿದೆ. ಶೇ.60 ಭಾಗ ಜನರು ಹೋಟೆಲ್ ತಿಂಡಿಗಳನ್ನೇ ಅವಲಂಬಿಸಿದ್ದಾರೆ. ಹೋಟೆಲ್‌ಗಳಲ್ಲಿ ತಿಂಡಿಗಳ ಬೆಲೆ ಏರಿಸಬಾರದು ಎಂದು ಆಗ್ರಹಿಸಿದರು. ಸರ್ಕಾರ ಇಂದಿರಾ ಕ್ಯಾಂಟೀನ್ ನಲ್ಲಿ ಕಡಿಮೆ ದರಕ್ಕೆ ಆಹಾರವನ್ನು ಒದಗಿಸುತ್ತಿದೆ. ಹೀಗಾಗಿ ಹೊಟೇಲ್ ನವರಿಗೂ ಬೆಂಬಲ ಬೆಲೆಯನ್ನು ಕೊಡಬೇಕು ಎಂದು ಕೋರಿದರು.

ತರಕಾರಿ, ಹೋಟೆಲ್ ತಿಂಡಿ ತಿನಿಸುಗಳು, ಅಡುಗೆ ಎಣ್ಣೆಯ ಬೆಲೆ ಜಾಸ್ತಿಯಾಗುತ್ತಲೇ ಇದೆ, ಇದರಿಂದ ಜನಸಾಮಾನ್ಯರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಮಧ್ಯದ ದರ ಜಾಸ್ತಿ ಮಾಡಿ ನಮಗೇ ಅನ್ಯಾಯ ಮಾಡಿದ್ದಾರೆ ಎಂದು ಹಲವರು ಅಳಲು ತೋಡಿಕೊಂಡಿದ್ದಾರೆ. ನಮಗಾಗಿಯೂ ಪ್ರತಿಭಟನೆ ಮಾಡಿ ಎಂದು ನನ್ನ ಬಳಿ ಕೇಳಿಕೊಂಡಿದ್ದಾರೆ. ಹೀಗಾಗಿ ಮದ್ಯ ಪ್ರಿಯರಿಗಾಗಿ ಮುಂದಿನ ವಾರ ಪ್ರತಿಭಟನೆ ಮಾಡುತ್ತೇನೆ ಎಂದರು.

ಇದನ್ನೂ ಓದಿ: ಮದುವೆಯಾದ ಒಂದೇ ವರ್ಷಕ್ಕೆ ಪತಿಯನ್ನು ಕಳೆದುಕೊಂಡ ಖ್ಯಾತ ನಟಿ!

ಸರ್ಕಾರಕ್ಕೆ ತಾಕತ್ತಿದ್ದರೆ ಮದ್ಯವನ್ನು ಸಂಪೂರ್ಣ ನಿಷೇಧಿಸಲಿ. ಸ್ವತಃ ಸರ್ಕಾರವೇ ಎಂಎಸ್‌ಐಎಲ್‌ ಮಳಿಗೆಗಳಲ್ಲಿ ಮದ್ಯವನ್ನು ಮಾರಾಟ ಮಾಡುತ್ತಿದೆ. ಈಗ ದರಯೇರಿಕೆ ಮೂಲಕ ಕುಡುಕರಿಗೂ ಸಂಕಷ್ಟ ತಂದೊಡ್ಡಿದೆ ಎಂದು ಕಿಡಿಕಾರಿದರು. ಪಕ್ಷದ ಮುಖಂಡರು, ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More