Home> Karnataka
Advertisement

ಪೇಪರ್ ಓದೋರು, ಟಿವಿ ನೋಡೋರ್ ತಲೆ ಹಾಳಾಗುತ್ತೆ: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ

ಯಾರು ಪ್ರತಿದಿನ ಡಿಜಿಟಲ್ ಪೇಪರ್ ಓದುತ್ತಾರೋ, ಟಿವಿ ನೋಡುತ್ತಾರೋ ಅವರ ತಲೆ ಹಾಳಾಗುತ್ತೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿದ್ದಾರೆ.

ಪೇಪರ್ ಓದೋರು, ಟಿವಿ ನೋಡೋರ್ ತಲೆ ಹಾಳಾಗುತ್ತೆ: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ

ಅಂಕೋಲಾ: ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ, ಇದೀಗ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ.

ಉತ್ತರ ಕನ್ನಡದ ಅಂಕೋಲಾ ತಾಲೂಕಿನ ಅಲಗೆರೆಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾರು ಪ್ರತಿದಿನ ಡಿಜಿಟಲ್ ಪೇಪರ್ ಓದುತ್ತಾರೋ, ಟಿವಿ ನೋಡುತ್ತಾರೋ ಅವರ ತಲೆ ಹಾಳಾಗುತ್ತೆ ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದಾರೆ. 

ಮುಂದುವರೆದು ಮಾತನಾಡಿದ ಅವರು, ನಾನು ಕಳೆದ 10 ವರ್ಷಗಳಿಂದ ಪೇಪರ್ ಓದುತ್ತಾ ಇಲ್ಲ. ಟಿವಿ ನೋಡಲ್ಲ ಹೀಗಾಗಿ ನನ್ನ ತಲೆ ಸರಿ ಇದೆ. ನಿಮ್ಮ ಬಿಪಿ, ಶುಗರ್ ಲೆವೆಲ್ ಸರಿ ಇರಬೇಕು, ನಿಮ್ಮ ತಲೆ ಸರಿ ಇರಬೇಕು ಅಂದರೆ ನೀವೂ ಸಹ, ಪೇಪರ್ ಓದೋದನ್ನು, ಟಿವಿ ನೋಡುವುದನ್ನು ಬಿಡಿ. ಯಾವುದಕ್ಕೂ ಟೆನ್ಶನ್ ತಗೋಬೇಡಿ ಎಂದು ಹೇಳಿದ್ದಾರೆ.

Read More