Home> Karnataka
Advertisement

ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕೆರೆಗಳಿಗೆ ಸಂಸ್ಕರಿಸಿದ ನೀರು: BWSSB ಮಹತ್ವದ ನಿರ್ಧಾರ

BWSSB : ನಗರದಲ್ಲಿನ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಮಹತ್ವದ ಕ್ರಮ ಕೈಗೊಂಡಿರುವ ಬೆಂಗಳೂರು ಜಲ ಮಂಡಳಿ ಒಣಗಿರುವ ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ಪೂರೈಕೆ ಮಾಡಲು ನಿರ್ಧರಿಸಿದೆ.

ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕೆರೆಗಳಿಗೆ ಸಂಸ್ಕರಿಸಿದ ನೀರು: BWSSB ಮಹತ್ವದ ನಿರ್ಧಾರ

ಬೆಂಗಳೂರಿನ ಶೇ.50ರಷ್ಟು ಬೋರ್‌ವೆಲ್‌ಗಳು ಬತ್ತಿ ಹೋಗಿದ್ದು, ಹೀಗಾಗಿ ನಗರದ ಅಂತರ್ಜಲ ಮೂಲಗಳನ್ನು ಮರುಪೂರಣಗೊಳಿಸುವ ಉದ್ದೇಶದಿಂದ ಒಣಗುತ್ತಿರುವ ಕೆರೆಗಳಿಗೆ ದಿನಕ್ಕೆ 1,300 ಮಿಲಿಯನ್ ಲೀಟರ್ ಶುದ್ಧೀಕರಿಸಿದ ನೀರನ್ನು ತುಂಬಿಸಲು ಬೆಂಗಳೂರು ಜಲಮಂಡಳಿ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಬೆಂಗಳೂರಿನ ನೀರಿನ ಬಿಕ್ಕಟ್ಟು (Bengaluru water crisis) ತೀವ್ರವಾಗಿರುವಂತೆಯೇ ನಗರದಲ್ಲಿನ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಮಹತ್ವದ ಕ್ರಮ ಕೈಗೊಂಡಿರುವ ಬೆಂಗಳೂರು ಜಲ ಮಂಡಳಿ ಒಣಗಿರುವ ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ಪೂರೈಕೆ ಮಾಡಲು ನಿರ್ಧರಿಸಿದೆ.

ಇದನ್ನು ಓದಿ : Vande bharat express : ಬೆಂಗಳೂರು-ಚೆನ್ನೈ ನಡುವೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ

ಬೆಂಗಳೂರಿನ ನೀರಿನ ಬಿಕ್ಕಟ್ಟನ್ನು ನಿರ್ವಹಿಸುವ ಉದ್ದೇಶದಿಂದ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸಹ ಫಿಲ್ಟರ್ ಬೋರ್‌ವೆಲ್‌ಗಳನ್ನು ಸ್ಥಾಪಿಸುತ್ತಿದ್ದು, ಎಲ್ಲ ರೀತಿಯ ಪರೀಕ್ಷೆಯ ನಂತರ ನೀರನ್ನು ಪೂರೈಸಲು ಪುನಶ್ಚೇತನಗೊಂಡ ಕೆರೆಗಳ ಬಳಿ ವಿನೂತನ ತಂತ್ರಜ್ಞಾನವನ್ನು ಬಳಸಿಕೊಂಡು ನೀರಿನ ಸ್ಥಾವರಗಳನ್ನು ನಿರ್ಮಿಸುತ್ತೇವೆ ಎಂದು BWSSB ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿಗೆ 2,100 ಎಂಎಲ್‌ಡಿ ಕುಡಿಯುವ ನೀರಿನ ಅಗತ್ಯವಿದ್ದು, ಅದರಲ್ಲಿ 1,450 ಎಂಎಲ್‌ಡಿ ಕಾವೇರಿ ನದಿಯಿಂದ ಬರುತ್ತದೆ. ನೀರಿನ ಬಿಕ್ಕಟ್ಟಿನ ಕುರಿತು ಜನತೆ ಆತಂಕ ಪಡುವ ಅಗತ್ಯವಿಲ್ಲ. ಜುಲೈವರೆಗೆ ಜಲಾಶಯಗಳಲ್ಲಿ ಸಾಕಷ್ಟು ನೀರು ಇದೆ. ನಗರಕ್ಕೆ ಮಾರ್ಚ್‌ನಿಂದ ಮೇ ವರೆಗೆ ಸುಮಾರು ಎಂಟು ಸಾವಿರ ದಶಲಕ್ಷ ಘನ ಅಡಿ (ಟಿಎಂಸಿ) ಅಗತ್ಯವಿದ್ದು, ಜಲಾಶಯಗಳಲ್ಲಿ 34 ಟಿಎಂಸಿ ನೀರಿದೆ. ನಗರಕ್ಕೆ ಅಗತ್ಯವಿರುವ ಉಳಿದ 650 ಎಂಎಲ್‌ಡಿ ನೀರು ಬೋರ್‌ವೆಲ್ ನೀರಿನಿಂದ ಬರುತ್ತದೆ. ಮಳೆಯ ಅಭಾವ, ಅಂತರ್ಜಲದ ಕುಸಿತ ಮತ್ತು ಅಂತರ್ಜಲದ ಶೋಷಣೆಯಿಂದಾಗಿ ಇಲ್ಲಿ 250 MLD ಕೊರತೆಯಿದೆ ಎಂದು ಅವರು ಹೇಳಿದರು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಸಹಯೋಗದೊಂದಿಗೆ ಈ ಉಪಕ್ರಮವನ್ನು ತೆಗೆದುಕೊಳ್ಳಲಾಗಿದ್ದು, ಇದು ಸುಮಾರು 2030 MLD ನೀರನ್ನು ವ್ಯವಸ್ಥೆಗೆ ಸೇರಿಸುವ ನಿರೀಕ್ಷೆಯಿದೆ ಎಂದು BWSSB ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಹೇಳಿದರು.

ಇದನ್ನು ಓದಿ : Xstream Air Fiber ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದ Airtel

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ದೇವನಹಳ್ಳಿಯಲ್ಲಿ ನೀರಾವರಿ ಇಲಾಖೆಯು ಇದೇ ಉಪಕ್ರಮದಿಂದ ಕೋಟೆ ಕೆರೆಯ ನೀರನ್ನು ಸಂಸ್ಕರಿಸಿ ನೀರು ಪೂರೈಸುತ್ತಿದೆ. ಯೋಜನೆಯ ಭಾಗವಾಗಿ ಬೆಳ್ಳಂದೂರು, ವರ್ತೂರು, ನಾಯಂಡಹಳ್ಳಿ, ಹೇರೋಹಳ್ಳಿ, ಅತ್ತೂರು ಮತ್ತು ಜಕ್ಕೂರು ಕೆರೆಗಳಿಗೆ ಆರಂಭದಲ್ಲಿ ನೀರು ತುಂಬಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More