Home> Karnataka
Advertisement

ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಆಳವಡಿಕೆ ಫೆಬ್ರವರಿ 17 ರಿಂದ ಮೇ 31, 2024ರವರೆಗೆ ವಿಸ್ತರಣೆ

Transport Department : ವಾಹನಗಳಿಗೆ ಹೆಚ್ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ನೀಡಿದ್ದ ಕಾಲಾವಕಾಶ ಮತ್ತೆ ವಿಸ್ತರಣೆ ಮಾಡಿದ್ದು, ಫೆಬ್ರವರಿ 17 ರಿಂದ ಮೇ 31, 2024ರ ತನಕ ಸಮಯ ವಿಸ್ತರಿಸಿದೆ. 

ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಆಳವಡಿಕೆ ಫೆಬ್ರವರಿ 17 ರಿಂದ ಮೇ 31, 2024ರವರೆಗೆ ವಿಸ್ತರಣೆ

HSRP number plate validity deadline extended : ವಾಹನಗಳಿಗೆ ಹೆಚ್ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ನೀಡಿದ್ದ ಕಾಲಾವಕಾಶ ಮತ್ತೆ ವಿಸ್ತರಣೆ ಮಾಡಿದ್ದು, ಈ ಕುರಿತು ವಾಹನ ಸವಾರರಿಗೆ  ಅಳವಡಿಕೆಗೆ ಬಗ್ಗೆ ಅರಿವು ಮೂಡಿಸುವುದು ಸಾರಿಗೆ ಇಲಾಖೆ ಪಾಲಿಗೆ ಸವಾಲಿನ ಕೆಲಸವಾಗಿದೆ. ವಾಹನ ಸವಾರರ ಒತ್ತಡಕ್ಕೆ ಮಣಿದು ನಂಬರ್ ಪ್ಲೇಟ್ ಆಳವಡಿಕೆ ಮಾಡಲು ಇದ್ದ ಗಡುವು ವಿಸ್ತರಣೆ ಫೆಬ್ರವರಿ 17 ರಿಂದ ಮೇ 31, 2024ರ ತನಕ ಸಮಯ ವಿಸ್ತರಿಸಿದೆ. 

ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡು ರಾಜ್ಯದಲ್ಲಿ 1 ಏಪ್ರಿಲ್ 2019ಕ್ಕಿಂತ ಮೊದಲು ನೋಂದಣಿ ಮಾಡಿದ ಹಳೆಯ ವಾಹನಗಳು ಸುರಕ್ಷಿತ ನೋಂದಣಿ ಫಲಕ (ಹೆಚ್ಎಸ್ಆರ್‌ಪಿ) ಅಳವಡಿಕೆ ಮಾಡಬೇಕಿದೆ. ಸದ್ಯ ಇದಕ್ಕೆ ಮೇ 31ರ ತನಕ ಸಮಯವಿದೆ. 

ವಾಹನ ಸವಾರರು ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಆಳವಡಿಕೆ ಮಾಡಲು ಆನ್‌ಲೈನ್ ಮೂಲಕ ನೋಂದಣಿ ಮಾಡಿಸುವಾಗ ಹಲವು ತೊಂದರೆ ಅನುಭವಿಸುತ್ತಿದ್ದಾರೆ. ಸರ್ವರ್ ನಿಧಾನವಾಗಿರುವ ಕಾರಣ ಮತ್ತೆ ಮತ್ತೆ ನೋಂದಣಿಗೆ ಕೇಳುತ್ತಿದೆ. ತಾಂತ್ರಿಕ ತೊಂದರೆಗಳು ಉಂಟಾದರೆ ಅದನ್ನು ಬಗೆಹರಿಸಲು ಸಾರಿಗೆ ಇಲಾಖೆ ಸಹಾಯವಾಣಿ ಆರಂಭಿಸಿದೆ.

ಇದನ್ನು ಓದಿ : Bangalore : ಇಂದಿನಿಂದ ಒಂದು ವಾರ ನಡೆಯಲಿದೆ 15ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 

ಜನರಲ್ಲಿ ಅರಿವು ಮೂಡಿಸಲು ವಿಫಲವಾಗಿರುವ ಸಾರಿಗೆ ಇಲಾಖೆ ಆನ್‌ಲೈನ್ ಮಾತ್ರವಲ್ಲ ಆಫ್‌ಲೈನ್ ಮೂಲಕವೂ ನೋಂದಣಿಗೆ ಅವಕಾಶ ಮಾಡಿಕೊಡಲು ಚಿಂತನೆ ನಡೆಸಿದೆ. ಪ್ರಾಯೋಗಿಕವಾಗಿ ಬೆಂಗಳೂರು ನಗರದ ಕೆಲವು ಬಡಾವಣೆಗಳಲ್ಲಿ ಇದು ಜಾರಿಗೆ ಬರುವ ನಿರೀಕ್ಷೆ ಇದೆ. ಜನರು ಬೆಳಗ್ಗೆ 10 ರಿಂದ ಸಂಜೆ 5.30ರ ತನಕ 9449863429/26 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಅಲ್ಲದೇ ಈಗ ಸೈಬರ್ ಸೆಂಟರ್‌ಗಳಲ್ಲಿಯೂ ಹೆಚ್‌ಎಸ್‌ಆರ್‌ಪಿ ನೋಂದಣಿ ಮಾಡಿಕೊಡಲಾಗುತ್ತದೆ ಎಂಬ ಜಾಹೀರಾತು ಕಾಣಿಸುತ್ತಿದೆ. 

ಆನ್‌ಲೈನ್‌ನಲ್ಲಿ ಹೆಚ್‌ಎಸ್ಆರ್‌ಪಿ ಪ್ಲೇಟ್ ನೋಂದಣಿ ಸಮಯದಲ್ಲಿ ಆಗುವ ತೊಂದರೆ, ಜನರಿಗೆ ಅರಿವಿನ ಕೊರತೆ, ತಾಂತ್ರಿಕ ಸಮಸ್ಯೆಗಳ ಹಿನ್ನಲೆಯಲ್ಲಿ ಆಫ್‌ಲೈನ್ ಮೂಲಕವೂ ನೋಂದಣಿ ಮಾಡಿಕೊಳ್ಳಲು ಸಾರಿಗೆ ಇಲಾಖೆ ಮುಂದಾಗಿದ್ದು, ಶೀಘ್ರವೇ ಈ ಕುರಿತು ಆದೇಶ ಪ್ರಕಟವಾಗುವ ಸಾಧ್ಯತೆ ಇದೆ. 

ಇದನ್ನು ಓದಿ : ರಶ್ಮಿಕಾ ಜೊತೆ ಗುಟ್ಟಾಗಿ ಮದುವೆಯಾದ್ರಾ ವಿಜಯ್ ದೇವರಕೊಂಡ! ಒಂದೇ ಮನೆಯಲ್ಲಿದ್ದಾರಾ ಈ ಜೋಡಿ?

ಅಧಿಕಾರಿಗಳಯ ಹೇಳುವಂತೆ ಈ ವೆಬ್‌ಸೈಟ್ ಮೂಲಕ ನೋಂದಣಿ ಮಾಡಿ ಆಳವಡಿಸಿದ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಮಾತ್ರ ಮಾನ್ಯತೆ ಹೊಂದಿರುತ್ತವೆ. ಇತರ ವೆಬ್ ಪೋರ್ಟಲ್ ಬಳಕೆ ಮಾಡಬಾರದು, ವಂಚನೆ ಬಗ್ಗೆ ಜನರು ಜಾಗೃತೆ ವಹಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಹೆಚ್‌ಎಸ್‌ಆರ್‌ಪಿ ನೋಂದಣಿ ಹೆಸರಿನಲ್ಲಿ ವಂಚನೆ ಮಾಡುವ ಹಲವಾರು ಲಿಂಕ್‌ಗಳು ಸಹ ಆನ್‌ಲೈನ್‌ನಲ್ಲಿ ಕಾಣಿಸುತ್ತಿವೆ. ಅಧಿಕಾರಿಗಳು http://transport.karnataka.gov.in ಅಥವ www.siam.in ವೆಬ್‌ಸೈಟ್‌ಗೆ ಮಾತ್ರ ಭೇಟಿ ನೀಡಿ ನಂಬರ್ ಪ್ಲೇಟ್ ಆಳವಡಿಕೆಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More