Home> Karnataka
Advertisement

ಇಂದು ಸುಪ್ರೀಂ ಕೋರ್ಟಿನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ

ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠದ ಎದುರು ಆನಂದ್ ಸಿಂಗ್ ಪರ ಸಜ್ಜನ್ ಪೂವಯ್ಯ, ಶ್ರೀಮಂತ ಪಾಟೀಲ್ ಮತ್ತು ಆರ್. ಶಂಕರ್ ಪರ ಗಿರಿ ವಾದ ಮಾಡಿದರು.

ಇಂದು ಸುಪ್ರೀಂ ಕೋರ್ಟಿನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ

ನವದೆಹಲಿ: ತಮ್ಮ ವಿಧಾನಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿದ್ದ ಕರ್ನಾಟಕ ವಿಧಾನಸಭಾ ಅಧ್ಯಕ್ಷರ ಆದೇಶ ಪ್ರಶ್ನಿಸಿ ಕಾಂಗ್ರೆಸ್ ಮತ್ತು ಜೆಡಿಸ್ ಪಕ್ಷದ 17 ಅನರ್ಹ ಶಾಸಕರ ಅರ್ಜಿಯನ್ನು ನಿನ್ನೆ ಸುದೀರ್ಘವಾಗಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇಂದು ಇನ್ನುಳಿದ ಅಂಶಗಳ ಮೇಲೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠದ ಎದುರು ಆನಂದ್ ಸಿಂಗ್ ಪರ ಸಜ್ಜನ್ ಪೂವಯ್ಯ, ಶ್ರೀಮಂತ ಪಾಟೀಲ್ ಮತ್ತು ಆರ್. ಶಂಕರ್ ಪರ ಗಿರಿ ವಾದ ಮಾಡಿದರು. ಜೆಡಿಎಸ್ ಪರ ವಾದ ಮಾಡಿದ ರಾಜೀವ್ ದವನ್ 'ಸಾರ್ವಜನಿಕ ಜೀವನದಲ್ಲಿ ಇರುವ ಶಾಸಕರು ಸಾಮೂಹಿಕ ರಾಜೀನಾಮೆ ನೀಡಿದರೆ ಏನು ಅರ್ಥ? ಅದರ ಉದ್ದೇಶವನ್ನು ಹೇಗೆ ಅರ್ಥೈಸಿಕೊಳ್ಳುವುದು? ಈ ಪ್ರಕರಣ ಸಾಂವಿಧಾನಿಕ ಪೀಠಕ್ಕೆ ಹೋಗಲಿ. ರಾಜೀನಾಮೆ ಮೂಲಭೂತ ಹಕ್ಕು ಎನ್ನಲು ಇವರು ಸರ್ಕಾರಿ ಅಧಿಕಾರಿಗಳಿಲ್ಲ. ರಾಜೀನಾಮೆ ಹಿಂದಿನ ಅರ್ಥವನ್ನು ಸ್ಪೀಕರ್ ತಿಳಿದುಕೊಳ್ಳಬೇಕು. ಸ್ಪೀಕರ್ ಗೆ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡಬೇಕು. ಆಸೆ ಆಮಿಷ್ಯ, ಬಾಹ್ಯ ಒತ್ತಡ ಎಲ್ಲವೂಗಳನ್ನು ಸ್ಪೀಕರ್ ಗಮನಿಸಬೇಕು. ಇಲ್ಲಿ ಯಾರು ರಾಜಕೀಯ ಸನ್ಯಾಸಿಗಳಿಲ್ಲ. ಆದರೆ ಸಂವಿಧಾನದ ವಿಚಾರ ಬಂದಾಗ ಕಾರ್ಯ ಕ್ಷಮತೆ ಎತ್ತಿ ಹಿಡಿಯಬೇಕು. ಆಗಿನ ಸ್ಪೀಕರ್ ಅದನ್ನೇ ಮಾಡಿದ್ದಾರೆ. ಈ ಪೂರ್ಣ ಪ್ರಕರಣ ನೋಡಿದರೆ ಇಲ್ಲನ ಉದ್ದೇಶ ಗೊತ್ತಾಗುತ್ತದೆ. ಇಲ್ಲಿ ಬಲವಂತವಾಗಿ ರಾಜೀನಾಮೆ ನೀಡಲಾಗಿದೆ. ಸಾಮೂಹಿಕ ರಾಜೀನಾಮೆಯೇ ಇದಕ್ಕೆ ಸೂಕ್ತ ಉದಾಹರಣೆ. ರಾಜೀನಾಮೆ ಹಿಂದೆ ರಾಜಕೀಯ ಇಚ್ಛಾಶಕ್ತಿ ಇದೆ. ಬಾಹ್ಯ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಲಾಗಿದೆ. ಇವರು ಇತಿಮಿಗಳನ್ನು ಮೀರಿ ವರ್ತಿಸಿದ್ದಾರೆ. 190 b ಬಗ್ಗೆ ಮಾತನಾಡುವ ಇವರು ಈ ಆರ್ಟಿಕಲ್ ಉದ್ದೇಶ ಅರ್ಥೈಸಿಕೊಂಡಿದ್ದಾರೆಯೇ? ದುರ್ಬಳಕೆ ಮಾಡಿಕೊಂಡಿದ್ದಾರೆ. ನೈಜತೆ ಎಂಬುದು ಕೇವಲ ರಾಜೀನಾಮೆ ಪತ್ರ ಮತ್ತು ಸಹಿ ಅಸಲಿಯೋ, ನಕಲಿಯೋ ಎಂಬುದಕ್ಕಷ್ಟೇ ಸೀಮಿತವಲ್ಲ‌. ರಾಜೀನಾಮೆ ನೀಡಿದ್ದು ಸದುದ್ದೇಶಕ್ಕೋ, ದುರುದ್ದೇಶಕ್ಕೋ ಎಂಬುದನ್ನು ಗಮನಿಸಬೇಕು. ಸ್ಪೀಕರ್ ಗೆ ಅಸೆಂಬ್ಲಿ ಮತ್ತು ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದರ ಮಾಹಿತಿ ಇರುತ್ತದೆ. ಆದ್ದರಿಂದ ಸ್ಪೀಕರ್ ಅವರು ರಾಜೀನಾಮೆ ಬಗ್ಗೆ ಎನ್ ಕ್ವಯರಿ‌ ಮಾಡುವುದು ಸ್ಪೀಕರ್ ಅವರ ಜವಾಬ್ದಾರಿಯಾಗಿದೆ‌. ಇದರಲ್ಲಿ ಸ್ಪೀಕರ್ ದುರುದ್ದೇಶ ಎಲ್ಲಿದೆ? ಸ್ಪೀಕರ್ ನಿಯಮಕ್ಕೆ ಬದ್ಧರಾಗಿಯೇ ತೀರ್ಮಾನ ಕೈ ಗೊಂಡಿದ್ದರೆ. ಸ್ಪೀಕರ್ ಅವರನ್ನು ರಿಟ್ ಅರ್ಜಿಗಳ ಮೂಲಕ ಸುಪ್ರೀಂ ಕೋರ್ಟ್ ಗೆ ಎಳಿಬಾರದು. ಅನರ್ಹ ಶಾಸಕರು ಸಲ್ಲಿಸಿರುವ ರಿಟ್ ಅರ್ಜಿಯನ್ನು ವಜಾಗೊಳಿಸಬೇಕು' ಎಂದು ಹೇಳಿದರು.

ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಶುಕ್ರವಾರ ಮಧ್ಯಾಹ್ನ ಬಳಿಕ ವಾದ ಮಾಡುವುದಾಗಿ ವಿನಂತಿಸಿಕೊಂಡರು.‌ ಸಿಬಲ್ ಮನವಿಗೆ ಒಪ್ಪಿದ ನ್ಯಾ. ರಮಣ ನೇತೃತ್ವದ ಪೀಠ ವಿಚಾರಣೆಯನ್ನು ಇಂದಿಗೆ ಮುಂದೂಡಿತು. ಇಂದಿನ ವಿಚಾರಣೆ ಬಳಿಕ ತೀರ್ಪು ಅನ್ನು ಪ್ರಕಟಿಸುವ ಅಥವಾ ಕಾಯ್ದಿರಿಸುವ ಸಾಧ್ಯತೆಗಳಿವೆ.

Read More