Home> Karnataka
Advertisement

ಬಿಜೆಪಿ ಬೆವರು ಹರಿಸುವ ರೈತರ ರಕ್ತ ಹರಿಸುತ್ತಿದೆ: ಕಾಂಗ್ರೆಸ್ ಆಕ್ರೋಶ

ನಿಮ್ಮ ಅವಧಿಯಲ್ಲಾದ ಸಾವಿರಾರು ರೈತರ ಆತ್ಮಹತ್ಯೆಗೆ, ನಿರುದ್ಯೋಗಿಗಳ ಆತ್ಮಹತ್ಯೆಗೆ, ಕೋವಿಡ್ ಸಾವುಗಳಿಗೆ ಹೊಣೆ ಹೊರುವ ಬದ್ಧತೆ ಇದೆಯೇ ಬಿಜೆಪಿ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಬಿಜೆಪಿ ಬೆವರು ಹರಿಸುವ ರೈತರ ರಕ್ತ ಹರಿಸುತ್ತಿದೆ: ಕಾಂಗ್ರೆಸ್ ಆಕ್ರೋಶ

ಬೆಂಗಳೂರು: ಬಿಜೆಪಿ ಬೆವರು ಹರಿಸುವ ರೈತರ ರಕ್ತ ಹರಿಸುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್(Karnataka Congress) ಆಕ್ರೋಶ ವ್ಯಕ್ತಪಡಿಸಿದೆ. #ರೈತರಕೊಲೆಗಾರಬಿಜೆಪಿ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಹಾವೇರಿಯಲ್ಲಿ ಗೋಲಿಬಾರ್ ನಡೆಸಿ ರೈತರನ್ನು ಕೊಲೆ ಮಾಡಿದ ರಾಜ್ಯದ ಬಿಜೆಪಿ ಸರ್ಕಾರ ಅಂದಿನಿಂದ ಇಂದಿನವರೆಗೂ ರೈತರ ಮೇಲೆ ದ್ವೇಷ ಸಾದಿಸುತ್ತಲೇ ಬಂದಿದೆ. ರೈತರನ್ನೆಲ್ಲ ಕೊಂದು ಕೃಷಿ ಕ್ಷೇತ್ರವನ್ನು ಅದಾನಿ ಅಂಬಾನಿಗಳ ಕೈಗಿಡುವುದೇ ಬಿಜೆಪಿ ಅಜೆಂಡಾ’ ಅಂತಾ ಕಿಡಿಕಾರಿದೆ.

‘ಬಿಜೆಪಿ(BJP)ಗೆ ರೈತರೆಡೆಗೆ ಇರುವ ದ್ವೇಷದ ಪರಿಣಾಮ ನೆರೆ ಪರಿಹಾರವಿಲ್ಲ, ಬರ ಪರಿಹಾರವೂ ಇಲ್ಲ, ರೈತರಿಗೆ ಸಾಲ ಮನ್ನವೂ ಇಲ್ಲ, ರೈತರಿಗಾಗಿ ಒಂದೂ ಯೋಜನೆಯಿಲ್ಲ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ರೈತರ ಬದುಕು ಬೀದಿಪಾಲಾಗಿದೆ. ರೈತರಿಗೆ ವಿಶೇಷ ಆದ್ಯತೆ ಕೊಡುವುದು ದೂರದ ಮಾತು, ಕನಿಷ್ಠ ಗೌರವವನ್ನೂ ಬಿಜೆಪಿ ಕೊಡುತ್ತಿಲ್ಲ’ ಎಂದು ಕಾಂಗ್ರೆಸ್ ಕುಟುಕಿದೆ.

ಇದನ್ನೂ ಓದಿ: ಬಸವರಾಜ್ ಬೊಮ್ಮಾಯಿ ರಾಜ್ಯಕ್ಕೆ ‘ಅತಿಥಿ ಸಿಎಂ’ನಂತಾಗಿದ್ದಾರೆ: ಕಾಂಗ್ರೆಸ್ ಟೀಕೆ

‘ಭ್ರಷ್ಟ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಆಳ್ವಿಕೆಯಲ್ಲಿ ಡಬಲ್ ಆಗಿದ್ದು ರೈತರ ಆದಾಯವಲ್ಲ, ರೈತರ ಆತ್ಮಹತ್ಯೆಗಳು. ರೈತರ ಸಾವಿನ ಸಂಖ್ಯೆ ಸಾಲಲಿಲ್ಲವೆಂದು ರೈತರ ಹತ್ಯೆಯನ್ನೂ ಮಾಡುತ್ತಿದ್ದೀರಿ. ನಿಮ್ಮ ಅವಧಿಯಲ್ಲಾದ ಸಾವಿರಾರು ರೈತರ ಆತ್ಮಹತ್ಯೆಗೆ, ನಿರುದ್ಯೋಗಿಗಳ ಆತ್ಮಹತ್ಯೆಗೆ, ಕೋವಿಡ್ ಸಾವುಗಳಿಗೆ ಹೊಣೆ ಹೊರುವ ಬದ್ಧತೆ ಇದೆಯೇ ಬಿಜೆಪಿ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಶಾಂತಿಯುತ ಪ್ರತಿಭಟನೆಯ ನಡುವೆ ಕಾರು ನುಗ್ಗಿಸಿ ರೈತರ ಹತ್ಯಗೈದಿದ್ದು ಆಕಸ್ಮಿಕವೂ ಅಲ್ಲ, ಅಪಘಾತವೂ ಅಲ್ಲ. ಇದು ಬಿಜೆಪಿ ನಡೆಸಿದ ‘ಮಾರಣಹೋಮ’. ಹತ್ಯಾಕಾಂಡಗಳ ಮೂಲಕವೇ ರಾಜಕೀಯ ಅಸ್ತಿತ್ವ ಕಂಡುಕೊಂಡ ಸಾವಿನ ವ್ಯಾಪಾರಿ ನರೇಂದ್ರ ಮೋದಿ ಅವರಿಗೆ ಕನಿಷ್ಠ ಸಾಂತ್ವಾನ ಹೇಳುವ ಸೌಜನ್ಯವೂ ಇಲ್ಲ, ಕೊಲೆಗಡುಕರ ಬಂಧನವೂ ಇಲ್ಲ’ ಎಂದು ಕಾಂಗ್ರೆಸ್(Congress) ಟ್ವೀಟ್ ಮಾಡಿದೆ.

ಇದನ್ನೂ ಓದಿ: ಕಾಂಗ್ರೆಸ್‌ ಸೋಲಿಸುವ ದುರುದ್ದೇಶದಿಂದಲೇ JDSನಿಂದ ಮುಸ್ಲಿಂ ಅಭ್ಯರ್ಥಿಗಳು ಕಣಕ್ಕೆ: ಸಿದ್ದರಾಮಯ್ಯ

ಖರ್ಗೆ ಆಸ್ತಿ ವಿಚಾರ ಪ್ರಶ್ನಿಸಿದ ಬಿಜೆಪಿಗೆ ತಿರುಗೇಟು

ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ(Mallikarjun Kharge)ಯವರಿಗೆ ನಿಮ್ಮ ಕುಟುಂಬದ ಆಸ್ತಿ ಎಷ್ಟು ಸಾವಿರ ಕೋಟಿ ರೂ. ಇದೆ ಎಂದು ಒಂದೇ ಸಾಲಿನಲ್ಲಿ ಉತ್ತರಿಸಿ ಎಂದು ಕೇಳಿದ್ದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ‘ಕಳೆದ 7 ವರ್ಷಗಳಿಂದ ಒಂದೇ ತುತ್ತೂರಿಯನ್ನ ಊದುತ್ತಿರುವ ನಿಮ್ಮ ಪರಿಸ್ಥಿತಿ ಬಗ್ಗೆ ನಮಗೆ ಮರುಕವಿದೆ. IT, ED, CBI ಎಲ್ಲವೂ ನಿಮ್ಮ ಕೈಯಲ್ಲೇ ಇದೆ. ಆದರೂ ಈ ರೀತಿ‌ ಸುಳ್ಳು ಹೇಳುವುದನ್ನು ಬಿಟ್ಟು ನಿಮ್ಮಿಂದ ಬೇರೇನೂ ಮಾಡಲಾಗಿಲ್ಲ. ಅಂದಹಾಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಅವರ ಭ್ರಷ್ಟಾಚಾರವೇ ಕಾರಣ ಅಲ್ಲವೇ? ಇದಕ್ಕೆ ಉತ್ತರವಿದೆಯೇ ಬಿಜೆಪಿ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More