Home> Karnataka
Advertisement

Tomato Flu: ಟೊಮೆಟೋ ಜ್ವರ ಭೀತಿ: ರಾಜ್ಯ ಆರೋಗ್ಯ ಇಲಾಖೆಯಿಂದ ಕ್ರಮಕ್ಕೆ ಸೂಚನೆ

ಕೊರೊನಾ ಬೆನ್ನಲ್ಲೇ ಮತ್ತೊಂದು ಮಹಾಮಾರಿ ರಾಜ್ಯಕ್ಕೆ ಎಂಟ್ರಿ ಕೊಟ್ಟಿದೆಯಾ ಎಂಬ ಆತಂಕ ಶುರುವಾಗಿದೆ. ಶಂಕಿತ ಟೊಮೊಟೋ ವೈರಸ್  ರಾಜ್ಯದಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಕೇರಳ ಗಡಿಭಾಗ ಉಡುಪಿಯಲ್ಲಿ ವೈರಸ್ ಪತ್ತೆಯಾಗಿದೆ. ಇದೀಗ ಕೇರಳ ಗಡಿ ಪ್ರದೇಶದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಇನ್ನು ರಾಜ್ಯ ಆರೋಗ್ಯ ಇಲಾಖೆಯಿಂದ ಬಿಬಿಎಂಪಿಗೆ ಎಚ್ಚರಿಕೆಯ ಸಂದೇಶ ರವಾನೆಯಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. 

Tomato Flu: ಟೊಮೆಟೋ ಜ್ವರ ಭೀತಿ: ರಾಜ್ಯ ಆರೋಗ್ಯ ಇಲಾಖೆಯಿಂದ ಕ್ರಮಕ್ಕೆ ಸೂಚನೆ

ಬೆಂಗಳೂರು: ಕೊರೊನಾ ಬೆನ್ನಲ್ಲೇ ಮತ್ತೊಂದು ಮಹಾಮಾರಿ ರಾಜ್ಯಕ್ಕೆ ಎಂಟ್ರಿ ಕೊಟ್ಟಿದೆಯಾ ಎಂಬ ಆತಂಕ ಶುರುವಾಗಿದೆ. ಶಂಕಿತ ಟೊಮೊಟೋ ವೈರಸ್  ರಾಜ್ಯದಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಕೇರಳ ಗಡಿಭಾಗ ಉಡುಪಿಯಲ್ಲಿ ವೈರಸ್ ಪತ್ತೆಯಾಗಿದೆ. ಇದೀಗ ಕೇರಳ ಗಡಿ ಪ್ರದೇಶದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಇನ್ನು ರಾಜ್ಯ ಆರೋಗ್ಯ ಇಲಾಖೆಯಿಂದ ಬಿಬಿಎಂಪಿಗೆ ಎಚ್ಚರಿಕೆಯ ಸಂದೇಶ ರವಾನೆಯಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. 

ಇದನ್ನು ಓದಿ: ರಾಜ್ಯಕ್ಕೆ ವಕ್ಕರಿಸಿತು ಮತ್ತೊಂದು ಮಹಾಮಾರಿ.! ಮಕ್ಕಳನ್ನು ಬಾಧಿಸುವ ಟೊಮೊಟೊ ಜ್ವರ ವೈರಸ್ ಪತ್ತೆ

ಕೊರೊನಾ ಸಂದರ್ಭದಲ್ಲಿ ಮೊಬೈಲ್‌ ಟೆಸ್ಟಿಂಗ್‌ ಸೆಂಟರ್‌ ನಿರ್ಮಿಸಿ ತಪಾಸಣೆ ನಡೆಸಲಾಗುತ್ತಿತ್ತು. ಇದೀಗ ಅದೇ ಮಾದರಿಯಲ್ಲಿ ಕಟ್ಟೆಚ್ಚರ ವಹಿಸಲು ನಿರ್ಧರಿಸಲಾಗಿದೆ. ಇನ್ನು ಈ ಸೆಂಟರ್‌ಗಳನ್ನು ನಗರದ ಬಸ್‌ಸ್ಟ್ಯಾಂಡ್‌, ರೈಲ್ವೇ ನಿಲ್ದಾಣಗಳಲ್ಲಿ ತೆರೆಯಲು ಪಾಲಿಕೆ ನಿರ್ಧರಿಸಿದೆ. 

ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ಆರೋಗ್ಯ ಇಲಾಖೆಗೆ ಟೊಮೆಟೋ ಜ್ವರದ ಬಗ್ಗೆ ಮಾಹಿತಿಯನ್ನು ನೀಡಿದೆ. ಇನ್ನು ಈಗಾಗಲೇ ಕೆಲವು ಮಕ್ಕಳಲ್ಲಿ ಟೊಮೆಟೋ ಜ್ವರದ ಲಕ್ಷಣಗಳುಳ್ಳ ಫೀವರ್‌ ಕಾಣಿಸಿಕೊಂಡಿದ್ದು, ಹೆಚ್ಚಿನ ತಪಾಸಣೆ ಮಾಡಲಾಗುತ್ತಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಲಭಿಸಿಲ್ಲ. 

ಇನ್ನು ಟೊಮ್ಯಾಟೋ ಫೀವರ್ ಟೆಸ್ಟ್ ಬಗ್ಗೆ ಆರೋಗ್ಯ ಇಲಾಖೆ ಗೊಂದಲದಲ್ಲಿದೆ. ಏಕೆಂದರೆ ಜ್ವರ ಹರುಡುವಿಕೆಯ ವೇಗ, ಚಿಕಿತ್ಸೆಯ ಬಗ್ಗೆ ಸ್ಪಷ್ಟವಾದ ಚಿತ್ರಣ ಸಿಗುತ್ತಿಲ್ಲ. ಈ ಸಂಬಂಧ  ಜ್ವರದ ಸ್ಪ್ರೆಡಿಂಗ್ ತೀವ್ರತೆ ಬಗ್ಗೆ ಆರೋಗ್ಯ ಇಲಾಖೆ ತನಿಖೆ ನಡೆಸುತ್ತಿದೆ. 

ಕರ್ನಾಟಕ ಗಡಿ ರಾಜ್ಯವಾದ ಕೇರಳದಲ್ಲಿ ಕಳೆದ ಕೆಲವು ಸಮಯಗಳಿಂದ ಮಕ್ಕಳಲ್ಲಿ  ಟೊಮೊಟೋ ಜ್ವರ ಕಾಣಿಸಿಕೊಂಡಿದೆ. ಐದು ವರ್ಷದ ಕೆಳಗಿನ ಮಕ್ಕಳನ್ನು ಈ  ಟೊಮೊಟೋ ಜ್ವರ ಬಾಧಿಸುತ್ತಿದೆ. ಇದೀಗ ರಾಜ್ಯದಲ್ಲಿಯೂ ಶಂಕಿತ ಟೊಮೊಟೊ ವೈರಸ್  ಪತ್ತೆಯಾಗಿದೆ ಎನ್ನಲಾಗಿದೆ. ಕೇರಳ ಗಡಿಭಾಗವಾದ ಉಡುಪಿ ಜಿಲ್ಲೆಯಲ್ಲಿ ಶಂಕಿತ ಟೊಮೊಟೊ ವೈರಸ್  ಪತ್ತೆಯಾಗಿದೆ ಎನ್ನಲಾಗಿತ್ತು. 

ಇದನ್ನು ಓದಿ: ನ್ಯಾಯ ಕೋರಿ ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ಪಿಎಸ್ಐ ಅಭ್ಯರ್ಥಿಗಳು ..!

ಶಂಕಿತ ವೈರಸ್ ಪತ್ತೆ ಹಿನ್ನೆಲೆ ರಾಜ್ಯದ ಗಡಿ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಉಡುಪಿ, ಮಂಗಳೂರು, ಕೊಡಗು, ಚಾಮರಾಜ ನಗರ ಜಿಲ್ಲೆಯಲ್ಲಿ ಆರೋಗ್ಯ ಅಧಿಕಾರಿಗಳು ಹದ್ದಿನ ಕಣ್ಣು ಇರಿಸಿದ್ದಾರೆ. 

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Read More