Home> Karnataka
Advertisement

Guru Purnima 2023: ಜೆಪಿ ನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ

Guru Purnima 2023: ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಶ್ರೀ ಸತ್ಯ ಗಣಪತಿ ಶಿರಡಿ ಸಾಯಿ ದೇವಸ್ಥಾನದಲ್ಲಿ  ಪ್ರತಿ ವರ್ಷದಂತೆ ಈ ವರ್ಷವೂ ಗುರುಪೂರ್ಣಿಮೆಯನ್ನು ವಿಶೇಷವಾಗಿ ಆಚರಿಸಲಾಯ್ತು.

Guru Purnima 2023: ಜೆಪಿ ನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ

ಬೆಂಗಳೂರು: ಪ್ರತಿವರ್ಷದಂತೆ ಈ ವರ್ಷವೂ ಬೆಂಗಳೂರಿನ ಜೆ.ಪಿ.ನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ವತಿಯಿಂದ ವೈಭವದ ಗುರುಪೂರ್ಣಿಮೆ ಹಬ್ಬವನ್ನು ಆಚರಿಸಲಾಯ್ತು.. ಇಷ್ಟು ಮಾತ್ರವಲ್ಲದೇ ಸಾಯಿಬಾಬಾ ದೇವಸ್ಥಾನದಲ್ಲಿ ಬಾದಾಮಿ, ಖರ್ಜೂರ, ಹಣ್ಣುಗಳು, ಕೆಂದು ಬಣ್ಣದ ಎಳನೀರಿಯಿಂದ ವಿಶೇಷ ಅಲಂಕಾರ ಮಾಡಿದ್ದು ಭಕ್ತಾದಿಗಳು ಖುಷಿಪಟ್ಟರು.

ಗುರುಪೂರ್ಣಿಮೆ ಪ್ರಯುಕ್ತ ಶಿರಡಿ ಸಾಯಿ ಬಾಬಾರಿಗೆ ವಿಶೇಷ ಅಲಂಕಾರ, ವೈಭವದ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ಏರ್ಪಡಿಸಲಾಗಿತ್ತು. ಸಾಯಿ ಬಾಬಾರನ್ನು ಬಗೆ ಬಗೆಯ ಹೂವುಗಳು, ಹಣ್ಣುಗಳು, ಬಾದಾಮಿ, ಖರ್ಜೂರ, ಒಣಹಣ್ಣುಗಳು, ಬೆಲ್ಲದಿಂದ ಸಿಂಗರಿಸಿ, ಕೆಂದು ಬಣ್ಣದ ಎಳನೀರಿನಿಂದ ವಿಶೇಷವಾಗಿ ಅಲಂಕರಿಸಿದ್ದು ವಿಶೇವಾಗಿತ್ತು.

ಇದನ್ನೂ ಓದಿ: ಪತ್ರಿಕಾಧರ್ಮ, ವೃತ್ತಿಮೌಲ್ಯ ಕಾಪಾಡಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮನವಿ

ಗುರು ಪೂರ್ಣಿಮೆಯಂದು ಶಿರಡಿ ಸಾಯಿ ಬಾಬಾರಿಗೆ ಅಭಿಷೇಕ, ಹೋಮ, ಪ್ರಸಾದ ಸೇವೆ, ಅಲಂಕಾರ ಸೇವೆ, ಸರ್ವ ಸೇವೆ ಒಳಗೊಂಡಂತೆ ಎಲ್ಲಾ ರೀತಿಯ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಗಿತ್ತು. ಸೋಮವಾರ ಬೆಳಗ್ಗೆಯಿಂದ ರಾತ್ರಿವರೆಗೆ ಭಕ್ತರಿಗೆ ನಿರಂತರವಾಗಿ ಪ್ರಸಾದ ವಿತರಣೆ ಮಾಡಲಾಗುತ್ತಿದೆ....

ಪ್ರತಿವರ್ಷ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ನಿಂದ ಅದ್ದೂರಿಯಾಗಿ ಗುರು ಪೂರ್ಣಿಮೆ ಆಚರಿಸುತ್ತಿದ್ದು, ಈ ಬಾರಿ ಮತ್ತಷ್ಟು ಸಂಭ್ರಮ ಮತ್ತು ವಿಶೇಷತೆಗಳೊಂದಿಗೆ ಸಾಯಿ ಬಾಬಾರ ಸ್ಮರಣೆಗೆ ವ್ಯವಸ್ಥೆ ಮಾಡಲಾಗಿದೆ. ಬಾಬಾರ ‘ಸಬ್ ಕಾ ಮಾಲೀಕ್ ಏಕ್ ಹೇ’ ಎಂಬ ಪರಿಕಲ್ಪನೆಯಡಿ ಬಡವ, ಬಲ್ಲಿದ ಬೇಧ-ಭಾವವಿಲ್ಲದೇ ಎಲ್ಲಾ ಸಮುದಾಯದವರಿಗೆ ಮುಕ್ತ ಸ್ವಾಗತವನ್ನು ಕೋರಲಾಗಿದೆ.

ಇದನ್ನೂ ಓದಿ: "ಚಾಮರಾಜನಗರಕ್ಕೆ ಹೋದರೆ ಸಿಎಂ ಕುರ್ಚಿ ಹೋಗುತ್ತದೆ ಎನ್ನುವುದನ್ನು ವಿದ್ಯಾವಂತರೇ ಹೆಚ್ಚು ನಂಬುತ್ತಾರೆ"

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More