Home> Karnataka
Advertisement

ಅಂದು ಕೈಕೊಟ್ಟ ಸ್ಕೂಟರ್’ನಿಂದ ಶಾಸಕರಾದ್ರು.. ಇಂದು ಕರ್ನಾಟಕದ ಗದ್ದುಗೆ ಏರಲಿದ್ದಾರೆ ಈ ‘ನಾಯಕ’! ಯಾರವರು?

Siddaramaiah Scooter Story: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನ 12.30ಕ್ಕೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈಗಾಗಲೇ ಕಂಠೀರವ ಸ್ಟೇಡಿಯಂ ಮದುಮಗಳಂತೆ ಸಿಂಗಾರಗೊಂಡಿದೆ. ಸಿಎಂ, ಡಿಸಿಎಂ ಜೊತೆಗೆ 8 ಜನ ಶಾಸಕರು ಸಚಿವರಾಗಿ ಸಂವಿಧಾನ ಗೌಪ್ಯತೆ ಪ್ರತಿಜ್ಞೆ ಸ್ವೀಕಾರ ಮಾಡಲಿದ್ದಾರೆ.

ಅಂದು ಕೈಕೊಟ್ಟ ಸ್ಕೂಟರ್’ನಿಂದ ಶಾಸಕರಾದ್ರು.. ಇಂದು ಕರ್ನಾಟಕದ ಗದ್ದುಗೆ ಏರಲಿದ್ದಾರೆ ಈ ‘ನಾಯಕ’! ಯಾರವರು?

Siddaramaiah Scooter Story: ಕರ್ನಾಟಕದಲ್ಲಿ ಚುನಾವಣಾ ಪರ್ವ ಮುಗಿದು ಇದೀಗ ಅಂತಿಮ ಹಂತಕ್ಕೆ ಬಂದು ನಿಂತಿದೆ. ಇಂದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಜೊತೆ 8 ಮಂದಿ ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ಇದನ್ನೂ ಓದಿ: Weather Update: ವಿವಿಧೆಡೆ ಗುಡುಗು ಸಹಿತ ಮಳೆ-ಬಿರುಗಾಳಿಯ ಮುನ್ಸೂಚನೆ! ಎಚ್ಚರಿಕೆ ವಹಿಸಲು ಇಲಾಖೆ ಮನವಿ

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನ 12.30ಕ್ಕೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈಗಾಗಲೇ ಕಂಠೀರವ ಸ್ಟೇಡಿಯಂ ಮದುಮಗಳಂತೆ ಸಿಂಗಾರಗೊಂಡಿದೆ. ಸಿಎಂ, ಡಿಸಿಎಂ ಜೊತೆಗೆ 8 ಜನ ಶಾಸಕರು ಸಚಿವರಾಗಿ ಸಂವಿಧಾನ ಗೌಪ್ಯತೆ ಪ್ರತಿಜ್ಞೆ ಸ್ವೀಕಾರ ಮಾಡಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಕೃತ್ತಿಕಾ ನಕ್ಷತ್ರ, ಅಜಗಂಡ ನಾಮಯೋಗ, ಸಿಂಹಲಗ್ನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.

ಇನ್ನು ಸಿದ್ದರಾಮಯ್ಯನವರು ಎಲ್ ಎಲ್ ಬಿ ಪದವೀಧರರು. ಅವರ ರಾಜಕೀಯ ಜೀವನವೇ ಒಂದು ರೋಚಕ ಸನ್ನಿವೇಶ ಎನ್ನಬಹುದು. ಅಂದೊಮ್ಮೆ ಸ್ಕೂಟರ್ ಕೆಟ್ಟ ಕಾರಣ ಇಂದು ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ಏರಿದ್ದಾರೆ ಎಂದರೆ ನೀವು ನಂಬುತ್ತೀರಾ? ಹೌದು ಸಿದ್ದು ಲೈಫ್ ಸ್ಟೋರಿ ಬಲು ರೋಚಕವಾಗಿದೆ. ರಾಜಕೀಯಕ್ಕೆ ರಂಗಪ್ರವೇಶದ ಮಾಡಿದ ಬಗ್ಗೆ ಸಂದರ್ಶನವೊಂದರಲ್ಲಿ ಸಿದ್ದರಾಮಯ್ಯ ಅವರೇ ಸ್ವತಃ ಹೇಳಿದ್ದರು.

ಸಿದ್ದರಾಮಯ್ಯನವರಿಗೆ ಶಾಸಕ ಸ್ಥಾನ ಸಿಕ್ಕಿದ್ದೇ ಬಲುರೋಚಕ. ಅಂದು ಜನತಾಪಾರ್ಟಿ, ಕ್ರಾಂತಿರಂಗ, ಲೋಕದಳ ಮೂರು ಒಟ್ಟಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. ಆದರೆ ಕೆಂಪಿರೇಗೌಡರಿಗೆ ಟಿಕೆಟ್ ಸಿಕ್ಕಿರಲಿಲ್ಲ, ಇದರಿಂದ ಅಸಮಾಧಾನಗೊಂಡ ಮೈಸೂರಿನ ಜನರು ಒತ್ತಾಯಪೂರ್ವಕವಾಗಿ ಸಿದ್ದರಾಮಯ್ಯನವರನ್ನು ನಾಮಪತ್ರ ಸಲ್ಲಿಸುವಂತೆ ಮಾಡಿದರು. ಠೇವಣಿ ಇಡಲು ಹಣವಿಲ್ಲದಿದ್ದಾಗ ಕಚೇರಿ ಗುಮಾಸ್ತನಿಂದ 250 ರೂ. ಪಡೆದುಕೊಂಡು ಲೋಕದಳದ ಅಭ್ಯರ್ಥಿಯಾಗಿ ನಿಲ್ಲಿಸಿದರು. ಆದರೆ ಲೋಕದಳದಿಂದ ಸಿದ್ದರಾಮಯ್ಯನವರಿಗೆ ಬಿ ಫಾರಂ ಸಿಗಲಿಲ್ಲ. ಹೀಗಾಗಿ ಕೊನೆಗೆ ಪಕ್ಷೇತರರಾಗಿ ನಿಂತರು. ಆದರೆ ಚುನಾವಣೆಗೆ ಖರ್ಚು ಮಾಡಲು ಹಣವಿಲ್ಲವೆಂದು ಬೇಸರ ಮಾಡಿಕೊಂಡ ಸಿದ್ದು, ಯಾರಿಗೂ ಹೇಳದೆ ತನ್ನ ಸ್ಕೂಟರ್ ಹಿಡಿದು, ನಾಮಪತ್ರ ಹಿಂಪಡೆದುಕೊಳ್ಳಲು ಹೊರಟರು. ಈ ಸಂದರ್ಭವನ್ನು ದುರಾದೃಷ್ಟಕ್ಕಿಂತ ಅದೃಷ್ಟ ಎನ್ನಬಹುದು. ಅರ್ಧದಾರಿಯಲ್ಲಿ ಸ್ಕೂಟರ್ ಕೆಟ್ಟಿತು, ಏನೇ ಸಾಹಸ ಮಾಡಿದರೂ ಸ್ಕೂಟರ್ ಸ್ಟಾರ್ಟ್ ಆಗುತ್ತಿಲ್ಲ. ಅತ್ತ ನಾಮಪತ್ರ ಹಿಂತೆಗೆದುಕೊಳ್ಳುವ ಪ್ರಕ್ರಿಯೆಯ ಸಮಯ ಮೀರಿತ್ತು. ಕಡೆಗೆ ಪಕ್ಷೇತರರಾಗಿ ಉಳಿದ ಸಿದ್ದು, 3000 ಮತಗಳ ಅಂತರದಿಂದ ಗೆದ್ದು, ವಿಧಾನಸೌಧದ ಮೆಟ್ಟಿಲೇರಿದರು.

ಇದನ್ನೂ ಓದಿ: DK Shivakumar: ನೂತನ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ಧ್ವನಿಯಾಗಿ ಕೆಲಸ ಮಾಡಲಿದೆ - ಡಿ.ಕೆ.ಶಿವಕುಮಾರ್

ಈ ಸ್ವಾರಸ್ಯಕರ ಘಟನೆಯ ಬಗ್ಗೆ ಸಂದರ್ಶನವೊಂದರಲ್ಲಿ ಸಿದ್ದು ಹೇಳಿದ್ದರು. ಅಂದು ಗಾಡಿ ಕೆಟ್ಟಿಲ್ಲದಿದ್ದರೆ ಇಂದು ಸಿದ್ದು ರಾಜಕೀಯ ಜೀವನವೇ ಕಾಣುತ್ತಿರಲಿಲ್ಲವೇನೋ..! ಆಗುವುದೆಲ್ಲಾ ಒಳ್ಳೆಯದಕ್ಕೆ ಎನ್ನುವುದು ಇದೇ ಕಾರಣಕ್ಕೆ ಅಲ್ಲವೇ..!!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More