Home> Karnataka
Advertisement

ಸೆಕ್ಸ್‌ CD ಪ್ರಕರಣ: ಕೊನೆಗೂ ದೂರು ದಾಖಲಿಸಿದ ರಮೇಶ್ ಜಾರಕಿಹೊಳಿ!

ಸದಾಶಿವ ನಗರದ ಪೊಲೀಸ್‌ ಠಾಣೆಯಲ್ಲಿ ರಮೇಶ್‌ ಜಾರಕಿಹೊಳಿ ಆಪ್ತ ಎಂ.ವಿ ನಾಗರಾಜ್‌ ʼಬ್ಲ್ಯಾಕ್‌ ಮೇಲ್‌ ಕೇಸ್‌ʼ ದಾಖಲಿಸಲಿದ್ದಾರೆ.

ಸೆಕ್ಸ್‌ CD ಪ್ರಕರಣ: ಕೊನೆಗೂ ದೂರು ದಾಖಲಿಸಿದ ರಮೇಶ್ ಜಾರಕಿಹೊಳಿ!

ಬೆಂಗಳೂರು: ರಮೇಶ್‌ ಜಾಕಕಿಹೊಳಿ ಸೆಕ್ಸ್‌ ಸಿಡಿ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ಸದಾಶಿವ ನಗರದ ಪೊಲೀಸ್‌ ಠಾಣೆಯಲ್ಲಿ ರಮೇಶ್‌ ಜಾರಕಿಹೊಳಿ ಆಪ್ತ ಎಂ.ವಿ ನಾಗರಾಜ್‌ ʼಬ್ಲ್ಯಾಕ್‌ ಮೇಲ್‌ ಕೇಸ್‌ʼ ದಾಖಲಿಸಲಿದ್ದಾರೆ. ಸ್ವತಃ ರಮೇಶ್‌ ಜಾರಕಿಹೊಳೆಯವ್ರೇ ಲಿಖಿತ ರೂಪದಲ್ಲಿ ಈ ದೂರನ್ನ ನೀಡಿದ್ದು, ಆಪ್ತ ಎಂ.ವಿ ನಾಗಾರಾಜ್‌ ಅವ್ರ ಕೈಯಲ್ಲಿ ಠಾಣೆಗೆ ಕೊಟ್ಟು ಕಳಿಸಿದ್ದಾರೆ ಎನ್ನಲಾಗಿದೆ.

ಲಿಖಿತ ರೂಪದಲ್ಲಿರುವ ಈ ದೂರಿನಲ್ಲಿ ರಮೇಶ್(Ramesh Jarkiholi)‌ ಅವ್ರ ಸಹಿ ಇದ್ದು, ಈ ಸಿಡಿಯಿಂದ ತನ್ನ ತೇಜೋವಧೆ ಆಗಿದೆ, ಸೂಕ್ತವಾಗಿ ತನಿಖೆ ಮಾಡಿ ಎಂದಿದೆ. ಇನ್ನುದೂರಿನಲ್ಲಿ ನನ್ನನ್ನ ಬ್ಲ್ಯಾಕ್‌ ಮೇಲ್‌ ಮಾಡಲಾಗಿದ ಎಂದು ಬರೆಯಾಗಿದ್ದು, ಯಾರ ಹೆಸ್ರನ್ನು ಉಲ್ಲೇಖ ಮಾಡಿಲ್ಲ ಅಂಥ ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ.

By Election: ರಂಗೇರಿದ ಉಪಚುನಾವಣೆ ಕಣ: ಮಸ್ಕಿಗೆ ಚುನಾವಣಾಧಿಕಾರಿ ನೇಮಕ!

ರಮೇಶ್‌ ಜಾರಕಿಹೊಳಿ ಅವ್ರ ಆಪ್ತ ನಾಗಾರಾಜ್‌ ಸದಾಶಿವ ನಗರ ಪೊಲೀಸ್‌ ಠಾಣೆ(Police Station)ಗೆ ಬಂದಿದ್ದು, ದೂರು ದಾಖಲಿಸಲು ಠಾಣೆಯ ಒಳಗೆ ತೆರಳಿದ್ದಾರೆ. ಆದ್ರೆ, ದೂರುದಾರನಿಲ್ಲದೇ ದೂರು ದಾಖಲಿಸಲು ಸಾಧ್ಯವಿಲ್ಲ ಎಂದು ಹೇಳಲಾಗ್ತಿದ್ದು, ಸದ್ಯ ಪೊಲೀಸರು ಕಾನೂನು ತಜ್ಞರಿಂದ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಿದ ಬಳಿಕ ಕೇಸ್‌ ದಾಖಲಿಸಿಕೊಂಡು ಎಫ್‌ಐಆರ್‌ ದಾಖಲು ಮಾಡಿಕೊಳ್ಳಬಹುದು ಎನ್ನಲಾಗಿದೆ.

ರೈತರಿಗೆ ಸರ್ಕಾರಿದಿಂದ ಸಿಹಿ ಸುದ್ದಿ: KIADBಗೆ ಭೂಮಿ ಕೊಟ್ಟವರಿಗೆ ಪರಿಹಾರ ಹೆಚ್ಚಳ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More