Home> Karnataka
Advertisement

School Reopen : 20 ತಿಂಗಳ ನಂತರ ಮತ್ತೆ ಶಾಲೆಗೆ ಚಿಣ್ಣರು, ಇಂದಿನಿಂದ ಒಂದನೇ ತರಗತಿಯಿಂದ ಶಾಲೆ ಆರಂಭ

ಶಾಲೆ ಆರಂಭಕ್ಕೂ ಸರ್ಕಾರದ ಕಡೆಯಿಂದ ಕೆಲವೊಂದು ಗೈಡ್‌ ಲೈನ್ಸ್‌ ಗಳನ್ನು ಜಾರಿ ಮಾಡಲಾಗಿದೆ. ಈ ನಿಯಮಗಳನ್ನು ಶಾಲೆಗಳು ಕಡ್ಡಾಯವಾಗಿ ಪಾಲಿಸಬೇಕಾಗಿದೆ. 

School Reopen : 20 ತಿಂಗಳ ನಂತರ ಮತ್ತೆ ಶಾಲೆಗೆ ಚಿಣ್ಣರು,  ಇಂದಿನಿಂದ ಒಂದನೇ ತರಗತಿಯಿಂದ ಶಾಲೆ ಆರಂಭ

ಬೆಂಗಳೂರು : ಇಂದಿನಿಂದ ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ಶಾಲೆಗಳು ಪುನರಾರಂಭವಾಗಲಿವೆ (School reopen). ಇಪ್ಪತ್ತು ತಿಂಗಳ ನಂತರ ಮತ್ತೆ ಶಾಲೆಯಲ್ಲಿ ಚಿಣ್ಣರ ಕಲರವ ಕೇಳಿ ಬರಲಿದೆ.  ಶಾಲೆಗಳಲ್ಲಿ ಪುಟಾಣಿಗಳ ಸ್ವಾಗತಕ್ಕೆ ಸಕಲ ಸಿದ್ದತೆ ಪೂರ್ಣಗೊಂಡಿವೆ. ಇಷ್ಟೊಂದು ಸಮಯದ ನಂತರ ಮಕ್ಕಳು ಮತ್ತೆ ಶಾಲೆಗೆ ಬರುತ್ತಿದ್ದು ಸಹಜವಾಗಿಯೇ ಎಲ್ಲರನ್ನೂ ಕುತೂಹಲ ಮೂಡಿಸಿದೆ. 

ಕರೋನಾ (Coronavirus) ಪ್ರಕರಣಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈಗಾಗಲೇ ೬ನೇ ತರಗತಿಯಿಂದ ಕ್ಲಾಸ್‌ ಗಳು ನಡೆಯುತ್ತಿವೆ. ಇದಕ್ಕೆ ಪೋಷಕರು ಮತ್ತು ವಿದ್ಯಾರ್ಥಿಗಳು ಕೂಡಾ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಇಂದಿನಿಂದ ಒಂದರಿಂದ ಐದರವರೆಗಿನ ತರಗತಿಗಳು ಕೂಡಾ ಆರಂಭವಾಗುವ (School  reopen) ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ : Siddaramaiah : ಮೀಸಲಾತಿ ಹೆಚ್ಚಳ ಬೇಡಿಕೆಗೆ ಸಿದ್ದರಾಮಯ್ಯ ಬೆಂಬಲ!

ಶಾಲೆ ಆರಂಭಕ್ಕೂ ಸರ್ಕಾರದ ಕಡೆಯಿಂದ ಕೆಲವೊಂದು ಗೈಡ್‌ ಲೈನ್ಸ್‌ ಗಳನ್ನು (Guidelines) ಜಾರಿ ಮಾಡಲಾಗಿದೆ. ಈ ನಿಯಮಗಳನ್ನು ಶಾಲೆಗಳು ಕಡ್ಡಾಯವಾಗಿ ಪಾಲಿಸಬೇಕಾಗಿದೆ. 

 ಪ್ರೈಮರಿ ಸ್ಕೂಲ್ ಗೈಡ್ ಲೈನ್ಸ್ :

-ಟೈಟ್ ರೂಲ್ಸ್ ಪಾಲನೆಯೊಂದಿಗೆ ಪುಟಾಣಿಗಳ ಶಾಲೆ ಶುರು
-ಶೇ.50 ರಷ್ಟು ಹಾಜರಾತಿಯಲ್ಲಿ ತರಗತಿ ನಡೆಸಲು ಅವಕಾಶ
-ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರವೇ ಶಾಲೆಗಳು ಒಪನ್
-ಇನ್ನುಳಿದ ಎರಡು ದಿನ ಶಾಲೆ ಕೊಠಡಿ ಗಳ ಸ್ವಚ್ಚತಾ ಕಾರ್ಯ ಸ್ಯಾನಿಟೈಸರ್ ಗೆ (Sanitizer) ಅವಕಾಶ
-ಮಕ್ಕಳಿಗೆ ಒಂದು ದಿನ ತರಗತಿ ಒಂದು ದಿನ ರಜೆ 
-ಪಾಸಿಟಿವಿಟಿ ಶೇ.1ಕ್ಕಿಂತ ಕಡಿಮೆ ಇರುವ ಜಿಲ್ಲೆ, ತಾಲೂಕು ವಲಯಗಳಲ್ಲಿ ಮಾತ್ರ ಶಾಲೆ ಆರಂಭ
- ಮಕ್ಕಳು ಶಾಲೆಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ
-ಅನುಮತಿ ಪತ್ರದಲ್ಲಿ ವಿದ್ಯಾರ್ಥಿಗೆ ಕೋವಿಡ್ (COVID-19) ಸೋಂಕು ಇಲ್ಲದೆ ಇರೋದನ್ನ ಪೋಷಕರು ದೃಢಿಕರಿಸಬೇಕು
-ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ನೀರಿನ (Hot water) ವ್ಯವಸ್ಥೆ ಮಾಡಬೇಕು
-ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ
- ಆನ್ ಲೈನ್ ಮತ್ತು ಆಫ್ ಲೈನ್ ಎರಡೂ ತರಗತಿಗೂ ಅವಕಾಶ
-15 ರಿಂದ 20 ಮಕ್ಕಳ ತಂಡ ರಚಿಸಿ ಮಕ್ಕಳಿಗೆ ಪಾಠ ಮಾಡಬೇಕು
-ಎರಡು ಡೋಸ್ ಲಸಿಕೆ (Vaccine) ಪಡೆದ ಶಿಕ್ಷಕರಿಗೆ ಮಾತ್ರ ಪಾಠ ಮಾಡಲು ಅವಕಾಶ
-ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ಕ್ಲಾಸ್...
-ಯಾವುದೇ ಶಾಲೆಯಲ್ಲಿ ಎಲ್.ಕೆ.ಜಿ, ಯು.ಕೆ.ಜಿ ತೆರೆಯಲು ಅವಕಾಶ ಇಲ್ಲ
-ಅಕ್ಟೋಬರ್‌ 25 ರಿಂದ ಅರ್ಧದಿನ ಮಾತ್ರ ತರಗತಿ
-ನವೆಂಬರ್ 2 ನೇ ತಾರೀಕಿನಿಂದ ಪೂರ್ತಿ ದಿನ ತರಗತಿ ನಡೆಸಲು ಸೂಚನೆ

ಇದನ್ನೂ ಓದಿ: ಅಸಹಾಯಕ ಡಿಕೆಶಿ ಎದುರು ಸಿದ್ದರಾಮಯ್ಯ ಕೈ ಮೇಲಾಯಿತೇ?: ಬಿಜೆಪಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More