Home> Karnataka
Advertisement

R Ashok : ಬೆಂಗಳೂರಲ್ಲೇ ಮನೆ ಮಾಡಲಿದ್ದಾರೆ ಕೇಂದ್ರ ಸಚಿವ ಅಮಿತ್ ಶಾ, ಧರ್ಮೇಂದ್ರ ಪ್ರಧಾನ್!

ಈ ಬಗ್ಗೆ ಕಂದಾಯ ಸಚಿವ ಆರ್ ಅಶೋಕ ಮಾತನಾಡಿದ, ಮತ್ತೆ ಡಬಲ್ ಇಂಜನ್ ಸರ್ಕಾರ ಅಧಿಕಾರಕ್ಕೆ ತರಲು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಬೆಂಗಳೂರಲ್ಲಿ ಮನೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ. 

R Ashok : ಬೆಂಗಳೂರಲ್ಲೇ ಮನೆ ಮಾಡಲಿದ್ದಾರೆ ಕೇಂದ್ರ ಸಚಿವ ಅಮಿತ್ ಶಾ, ಧರ್ಮೇಂದ್ರ ಪ್ರಧಾನ್!

ಬಾಗಲಕೋಟೆ : ರಾಜ್ಯದಲ್ಲಿ ಮತ್ತೆ ಕಮಲ ಪಕ್ಷ ಅರಳಿಸಲು ಕೇಂದ್ರ ನಾಯಕರು ಮೆಗಾ ಪ್ಲಾನ್ ಮಾಡುತ್ತಿದ್ದಾರೆ. ಈ ಬಗ್ಗೆ ಕಂದಾಯ ಸಚಿವ ಆರ್ ಅಶೋಕ ಮಾತನಾಡಿದ, ಮತ್ತೆ ಡಬಲ್ ಇಂಜನ್ ಸರ್ಕಾರ ಅಧಿಕಾರಕ್ಕೆ ತರಲು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಬೆಂಗಳೂರಲ್ಲಿ ಮನೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ. 

ಜಿಲ್ಲೆಯ ಬೀಳಗಿ ಕ್ಷೇತ್ರದ ಕಲಾದಗಿ ಗ್ರಾಮದಲ್ಲಿ ಸುದಿಗಾರರ ಜೊತೆ ಮಾತನಾಡಿದ ಸಚಿವ ಆರ್ ಅಶೋಕ, ಇಲ್ಲೆ ಇರ್ತಾರೆ ಬಂದು. ಅವರದ್ದು ಅಜೆಂಡಾ. ನಮ್ಮದು ನಾಳೆ ಬಾ ಅನ್ನೋ ಪಾರ್ಟಿ ಅಲ್ಲ, ಟುಡೇಜ್ ಪಾರ್ಟಿ.. ಅಮೀತ್ ಶಾ, ಧರ್ಮೇಂದ್ರ ಪ್ರದಾನ ಎಲ್ರೂ ಬಂದು ಗೆಲ್ಲಿಸಬೇಕು ಎಂದು ಇಲ್ಲಿಗೆ ಬರ್ತಾರೆ. ಅವರ (ಕಾಂಗ್ರೆಸ್) ತರಹ ಬಂದು ಓಡಿ ಹೋಗೋದಲ್ಲ. ಬರೋದು ಭಾಷಣ ಮಾಡೋದಲ್ಲ. ಇಲ್ಲಿ ಬರ್ಬೇಕು, ಇಲ್ಲಿ ಇದ್ದು.. ಡಬಲ್ ಇಂಜೆನ್ ಸರ್ಕಾರ ಇಲ್ಲಿ ಬರ್ಬೇಕು ಅಂತಾ ಅವರೆಲ್ಲರ ಬಯಕೆ. ಸೂರ್ಯ ಚಂದ್ರರಿರೋದು ಎಷ್ಟು ಸತ್ಯವೋ, ನಮ್ಮ ಸರ್ಕಾರ ಬರೋದು ಸತ್ಯ. ಬೆಂಗಳೂರಲ್ಲಿ ಮನೆ ಮಾಡೀದು ಹಂಡ್ರೆಡ್ ಪರ್ಸೆಂಟ್ ಸತ್ಯ, ಡೌಟೇ ಇಲ್ಲ..ಯಾಕೆ ಬರ್ತಾರೆ ಎಂದ್ರೆ ಗೆಲ್ತವಿ ಅನ್ನೋ ದೃಷ್ಟಿಯಿಂದ ಬರ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : PM visit Belagavi : ಬೆಳಗಾವಿಗೆ ಪಿಎಂ ಮೋದಿ ಭೇಟಿ : 8 ಕಿಮೀ ರೋಡ್ ಶೋ, 3-4 ಲಕ್ಷ ಜನ ಭಾಗಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More