Home> Karnataka
Advertisement

Exclusive - 'ರಾಜ್ಯದಲ್ಲಿ ಎಳೇ ಮಕ್ಕಳನ್ನು ಬಲಿ ಪಡೆಯುತ್ತಿದೆ ಕೋವಿಡ್ 3ನೇ ಅಲೆ' 

ಜನವರಿ 17 ರಿಂದ ಮಕ್ಕಳ ಸಾವಿನ ಸಂಖ್ಯೆ ಹೆಚ್ಚಾಗಿದೆ. ಒಮಿಕ್ರಾನ್ ಜೊತೆಗೆ ಡೆಲ್ಟಾ ರೂಪಾಂತರಿ ಮಕ್ಕಳಿಗೆ ಮಾರಕವಾಗಿದೆ. ಆದ್ರೆ, ಕೋವಿಡ್ ಮೊದಲ, ಹಾಗೂ 2 ನೇ ಅಲೆಗಿಂತಲೂ ಮೂರನೇ ಅಲೆ ತುಂಬಾ ಡೇಂಜರ್ ಆಗಿದೆ.

Exclusive - 'ರಾಜ್ಯದಲ್ಲಿ ಎಳೇ ಮಕ್ಕಳನ್ನು ಬಲಿ ಪಡೆಯುತ್ತಿದೆ ಕೋವಿಡ್ 3ನೇ ಅಲೆ' 

ಬೆಂಗಳೂರು : ರಾಜ್ಯದಲ್ಲಿ ಮಹಾಮಾರಿ ಕೋವಿಡ್ ಮೂರನೇ ಅಲೆ ಎಳೇ ಮಕ್ಕಳನ್ನು ಬಲಿ ಪಡೆಯುತ್ತಿದೆ. ಕಳೆದೆರಡು ಕೋವಿಡ್ ಅಲೆಗಿಂತಲೂ ಈ ಬಾರಿ ಹೆಚ್ಚು ಮಕ್ಕಳು ಸಾವನ್ನಪ್ಪುತ್ತಿದ್ದಾರೆ ಎಂದು ಅಂಕಿ ಅಂಶಗಳಿಂದ ಮಾಹಿತಿ ತಿಳಿದು ಬಂದಿದೆ. 

ಜನವರಿ 17 ರಿಂದ ಮಕ್ಕಳ ಸಾವಿನ ಸಂಖ್ಯೆ ಹೆಚ್ಚಾಗಿದೆ. ಒಮಿಕ್ರಾನ್(Omicron) ಜೊತೆಗೆ ಡೆಲ್ಟಾ ರೂಪಾಂತರಿ ಮಕ್ಕಳಿಗೆ ಮಾರಕವಾಗಿದೆ. ಆದ್ರೆ, ಕೋವಿಡ್ ಮೊದಲ, ಹಾಗೂ 2 ನೇ ಅಲೆಗಿಂತಲೂ ಮೂರನೇ ಅಲೆ ತುಂಬಾ ಡೇಂಜರ್ ಆಗಿದೆ.

ಇದನ್ನೂ ಓದಿ : R Ashok : 'ಹಿಜಾಬ್ ಮತ್ತು ಕೇಸರಿ ಎರಡೂ ಕಾಲೇಜು ಕ್ಯಾಂಪಸ್ ನಲ್ಲಿ ಬರಬಾರದು' 

ಕೋವಿಡ್ ಬಲಿತೆಗೆದುಕೊಂಡ ಮಕ್ಕಳ ಸಂಖ್ಯೆ ಎಷ್ಟು?

23 ದಿನದಲ್ಲಿ ಬರೋಬ್ಬರಿ 25 ಮಕ್ಕಳು ಕೋವಿಡ್ ಮೂರನೇ ಅಲೆ(Covid Third Wave)ಗೆ ಬಲಿಯಾಗಿದ್ದಾರೆ. ಇದರಲ್ಲಿ, 7 ಮಕ್ಕಳು ಒಂದು ವರ್ಷ ತುಂಬುವ ಮೊದಲೇ ಕೋವಿಡ್ ನಿಂದ ಅಸುನೀಗಿದ್ದಾರೆ. 4 ದಿನದ ಹಸುಗೂಸೂ ಸೇರಿದಂತೆ 18 ವರ್ಷದವರೆಗಿನ ಮಕ್ಕಳು ಕೋವಿಡ್ ಗೆ ಬಲಿಯಾಗಿದ್ದಾರೆ. 1 ರಿಂದ 12 ವರ್ಷದವರೆಗಿನ ಅಧಿಕ ಮಕ್ಕಳು ಕೋವಿಡ್ ಗೆ ತುತ್ತಾಗುತ್ತಿದ್ದಾರೆ.

15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ಹಿನ್ನಲೆ ಈ ವಯಸ್ಸಿನ ಮಕ್ಕಳ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಆದ್ರೆ ಲಸಿಕೆ ಒಂದು ಡೋಸ್ ಪಡೆದ 18 ಹಾಗೂ 17 ವರ್ಷದ ಇಬ್ಬರು ಮಕ್ಕಳ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : ತಮಿಳುನಾಡು ನದಿಜೋಡಣೆ ಯೋಜನೆಗಳಿಗೆ ಆಕ್ಷೇಪ ಸಲ್ಲಿಕೆ: ಸಿಎಂ ಬಸವರಾಜ್ ಬೊಮ್ಮಾಯಿ

ಈ ಕುರಿತು ಜೀ ಕನ್ನಡ ನ್ಯೂಸ್ ಜೊತೆ ಮಾತನಾಡಿದ ಆರೋಗ್ಯ ಇಲಾಖೆ ಆಯುಕ್ತ ಡಿ ರಂದೀಪ್(D Randeep), ಕಳೆದೆರಡು ಅಲೆಗಿಂತ ಮಕ್ಕಳ ಸಾವು ಈ ಬಾರಿ ಹೆಚ್ಚಾಗಿದೆ. ವಿವರವಾದ ಡೆತ್ ಆಡಿಟ್ ನಡೆಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಯಾವ ಕಾರಣಕ್ಕಾಗಿ ಸಾವನ್ನಪ್ಪಿದ್ದಾರೆ ಎಂದು ಪತ್ತೆಮಾಡಲು ಕೋವಿಡ್ ಆಡಿಟ್ ನಡೆಸಲಾಗುತ್ತೆ. ಶೇ.50 ರಿಂದ 60 ರಷ್ಟು ಮಕ್ಕಳು ಅನ್ಯ ಖಾಯಿಲೆ ಹಾಗೂ ಕೋವಿಡ್ ನಿಂದಾಗಿ ಸಾವನ್ನಪ್ಪಿದ್ದಾರೆ. ಕೇವಲ ಕೋವಿಡ್ ಮಾತ್ರವಲ್ಲ ಬೇರೆ ಖಾಯಿಲೆಯಿದ್ದಿದ್ದರಿಂದ ಸಾವಾಗಿರಬಹುದು. ಕೋಮಾರ್ಬಿಟಿ ಇಲ್ಲದೆಯೂ ಎಷ್ಟು ಮಂದಿ ಸತ್ತಿದ್ದಾರೆಂಬುದು ಆಡಿಟ್ ನಲ್ಲಿ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More