Home> Karnataka
Advertisement

Rameshwaram Cafe Blast : ಬಸ್ ನಲ್ಲೇ ಸಂಚಾರ ಮಾಡಿದ್ದ ರಾಮೇಶ್ವರಂ‌ ಕೆಫೆ ಬ್ಲಾಸ್ಟ್ ಶಂಕಿತ ಬಾಂಬರ್ : ಸಿಸಿಟಿವಿಯಲ್ಲಿ ಎಲ್ಲವೂ ಸ್ಪಷ್ಟ

Rameshwaram Cafe Blast latest update :ಬೆಂಗಳೂರು ರಾಮೇಶ್ವರಂ‌ ಕೆಫೆಯಲ್ಲಿ ಸಂಭವಿಸಿದ ಸ್ಪೋಟದ ಹಿನ್ನೆಲೆಯಲ್ಲಿ ಲ್ಲಾ ಕಡೆ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಇದೀಗ ಸಿಸಿ ಟಿವಿ ಫೂಟೇಜ್ ನಿಂದಲೇ ಪ್ರಮುಖ ಸುಳಿವು ಪೊಲೀಸರ ಕೈ ಸೇರಿದೆ. 
 

Rameshwaram Cafe Blast : ಬಸ್ ನಲ್ಲೇ ಸಂಚಾರ ಮಾಡಿದ್ದ ರಾಮೇಶ್ವರಂ‌ ಕೆಫೆ ಬ್ಲಾಸ್ಟ್ ಶಂಕಿತ ಬಾಂಬರ್ : ಸಿಸಿಟಿವಿಯಲ್ಲಿ ಎಲ್ಲವೂ ಸ್ಪಷ್ಟ

Rameshwaram Cafe Blast latest update : ಬೆಂಗಳೂರು ರಾಮೇಶ್ವರಂ‌ ಕೆಫೆಯಲ್ಲಿ ಸಂಭವಿಸಿದ ಸ್ಪೋಟದ ನಂತರ ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಆರೋಪಿ ಪತ್ತೆಗೆ ಪೊಲೀಸ್ ಇಲಾಖೆ ಬಲೆ ಬೀಸಿದೆ. ಹೀಗಾಗಿ ಎಲ್ಲಾ ಕಡೆ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಇದೀಗ ಸಿಸಿ ಟಿವಿ ಫೂಟೇಜ್ ನಿಂದಲೇ ಪ್ರಮುಖ ಸುಳಿವು ಪೊಲೀಸರ ಕೈ ಸೇರಿದೆ. 

ರಾಮೇಶ್ವರಂ‌ ಕೆಫೆಯಲ್ಲಿ ಬಾಂಬ್ ಇಟ್ಟ ಬಾಂಬರ್ ಬಸ್ಸಿನಲ್ಲಿ ಪ್ರಯಾಣಿಸಿರುವುದು ಸಿಸಿಟಿವಿ ದೃಶ್ಯಾವಳಿಯಿಂದ ಪತ್ತೆಯಾಗಿದೆ. ಬಸ್ ನಂಬರ್ 500ರಲ್ಲಿ ಆರೋಪಿ ಸಂಚಾರ ಮಾಡಿರುವುದು ಬೆಳಕಿಗೆ ಬಂದಿದೆ. ಈ ಫೂಟೇಜ್ ಆಧಾರದ ಮೇಲೆ ಇದೀಗ ಆರೋಪಿಯ ಪತ್ತೆಗೆ ಬಲೆ ಬೀಸಲಾಗಿದೆ. 

ಇದನ್ನೂ ಓದಿ : ಸರ್ಕಾರ ಅಲರ್ಟ್‌.. ಹಿರಿಯ ಪೊಲೀಸರ ಸಭೆ ಕರೆದ ಸಿಎಂ

ಬಸ್ ಹಾಗೂ ಬಸ್ ಸ್ಟಾಪ್ ನಲ್ಲಿರುವ ಸಿಸಿಟಿವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಎಂಟಿಸಿ ಅಧಿಕಾರಿಗಳು ಪೊಲೀಸರಿಗೆ ಬಸ್ ಸಿಸಿಟಿವಿಯನ್ನು  ಒದಗಿಸಿದ್ದಾರೆ. ಬ್ರೂಕ್ ಫೀಲ್ಡ್, ವೈಟ್ ಫೀಲ್ಡ್ ಮತ್ತು ಐಟಿಪಿಎಲ್ ಭಾಗದ ಸಿಸಿಟಿವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಆರೋಪಿಯ ನೆಲೆಯನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ. 

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಹಿನ್ನೆಲೆಯಲ್ಲಿ ಬೆಂಗಳೂರನಲ್ಲಿ ಪೊಲೀಸರ ಹೈ ಅಲರ್ಟ್ ಜಾರಿ ಮಾಡಲಾಗಿದೆ. ಬೆಂಗಳೂರಿನಲ್ಲಿ WPL ಮ್ಯಾಚ್ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪರಿಶೀಲನೆ ನಡೆಸಲಾಗಿದೆ. ಕಬ್ಬನ್ ಪಾರ್ಕ್ ಪೊಲೀಸರು ಸ್ಟೇಡಿಯಂನಲ್ಲಿ ಪರಿಶೀಲನೆ ನಡೆಸಿದ್ದಾರೆ. ಚರ್ಚ್ ಸ್ಟ್ರೀಟ್, ಎಂಜಿ ರೋಡ್ ನಲ್ಲೂ ಬಾಂಬ್ ಸ್ಕ್ವಾಡ್, ಡಾಗ್ ಸ್ಕ್ವಾಡ್ ಜೊತೆ ಪರಿಶೀಲನೆ ನಡೆಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಿನ್ನೆಯಿಂದಲೂ ನಗರದ ಎಲ್ಲೆಡೆ ಕಣ್ಗಾವಲು ಹೆಚ್ಚಾಗಿದೆ. 

ಇದನ್ನೂ ಓದಿ : ಓರ್ವ ಶಂಕಿತ ಆರೋಪಿಯನ್ನ ಬಂಧಿಸಿದ ಪೊಲೀಸರು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More