Home> Karnataka
Advertisement

KSRTC-BMTC : ರಾಜ್ಯದಲ್ಲಿ ಅನ್​​ಲಾಕ್​ ಗೆ ಸಿದ್ಧತೆ : ಸರ್ಕಾರದಿಂದ ಸಾರಿಗೆ ನೌಕರರಿಗೆ ಬುಲಾವ್!

ಈಗಾಗಲೇ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರಿಗೆ ಜೂನ್ 7 ರೊಳಗೆ ಕರ್ತವ್ಯಕ್ಕೆ ಹಾಜರಾಗಲು ಬುಲಾವ್ ನೀಡಲಾಗಿದೆ.

KSRTC-BMTC : ರಾಜ್ಯದಲ್ಲಿ ಅನ್​​ಲಾಕ್​ ಗೆ ಸಿದ್ಧತೆ : ಸರ್ಕಾರದಿಂದ ಸಾರಿಗೆ ನೌಕರರಿಗೆ ಬುಲಾವ್!

ಬೆಂಗಳೂರು : ಜೂನ್ 14 ರ ನಂತರ ಅನ್ಲಾಕ್‌ ಆದರೆ ಬಿಎಂಟಿಸಿ(BMTC) ಮತ್ತು ಕೆಎಸ್‌ಆರ್​​ಟಿಸಿ(KSRTC) ಬಸ್​ಗಳ ಸಂಚಾರ ಆರಂಭಿಸುವುದಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಈಗಾಗಲೇ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರಿಗೆ ಜೂನ್ 7 ರೊಳಗೆ ಕರ್ತವ್ಯಕ್ಕೆ ಹಾಜರಾಗಲು ಬುಲಾವ್ ನೀಡಲಾಗಿದೆ.

ಬಸ್ ಕಾರ್ಯಾಚರಣೆಗೆ ಸಿದ್ಧತೆ ಆರಂಭಿಸಿರುವ ಸಾರಿಗೆ ನಿಗಮಗಳು(Transportation Corporation), ಜೂನ್​ 14 ರ ನಂತರ ಸರ್ಕಾರ ನೀಡಲಿರುವ ಮಾರ್ಗಸೂಚಿಯನ್ನು ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿವೆ.

ಇದನ್ನೂ ಓದಿ : CN Ashwath Narayan : 'ಬಿಎಸ್‌ವೈ ಸಂಪುಟದಲ್ಲಿ ಶಾಸಕ ಮುನಿರತ್ನಗೆ ಸಿಗುತ್ತೆ ಅವಕಾಶ'

ಬಿಎಂಟಿಸಿ(BMTC)ಯಲ್ಲಿ 6500 ಬಸ್ಸುಗಳಿವೆ ಅದರಲ್ಲಿ 1500 ದಿಂದ 2000 ಬಸ್ಸುಗಳು ರಸ್ತೆಗಿಳಿಯುವ ಸಾಧ್ಯತೆ ಇದೆ. ಇನ್ನು ವೋಲ್ವೋ ಬಸ್ಸುಗಳು ಸಂಚಾರ ಇರುವುದಿಲ್ಲ, ನಾರ್ಮಲ್ ಬಸ್ಸುಗಳಿಗೆ ಮಾತ್ರ ಅವಕಾಶವಿರಲಿದೆ. ಬಸ್ಸಿನಲ್ಲಿ ಶೇ. 50 ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶವಿರಲಿದ್ದು, ನಿಂತು ಪ್ರಯಾಣ ಮಾಡಲು ಅವಕಾಶ ಇರೋದಿಲ್ಲ. ಆಟೋ, ಓಲಾ, ಊಬರ್ ಟ್ಯಾಕ್ಸಿಯಲ್ಲಿ ಇಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶ ಒದಗಿಸಲಿದ್ದು, ಜೂನ್ ಕೊನೆಯವರೆಗೂ ನಮ್ಮ ಮೆಟ್ರೋ ಸಂಚಾರಕ್ಕೆ ಅವಕಾಶವಿರುವುದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ : `ಹೈಕಮಾಂಡ್ ಸೂಚಿಸಿದ ತಕ್ಷಣ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ..!'

ಕೆಎಸ್‌ಆರ್​​ಟಿಸಿ(KSRTC)ಯಲ್ಲಿ 8 ಸಾವಿರ ಬಸ್ಸುಗಳಿವೆ. ಅದರಲ್ಲಿ 3 ಸಾವಿರ ಬಸ್ಸುಗಳು ಮಾತ್ರ ರೋಡಿಗಿಳಿಯುವ ಸಾಧ್ಯತೆ ಇದೆ. ಕೊರೋನಾ ಹಿನ್ನೆಲೆಯಲ್ಲಿ ಎಸಿ ಬಸ್ಸುಗಳನ್ನು ರೋಡಿಗಿಳಿಸದಿರಲು ಚಿಂತನೆ ನಡೆದಿದೆ. ಇನ್ನು ಅಂತರ್​​ರಾಜ್ಯ ಬಸ್ ಸಂಚಾರ ಇರೋದಿಲ್ಲ. ಈ ಬಸ್ಸುಗಳಲ್ಲೂ ಅರ್ಧದಷ್ಟು ಸಾಮರ್ಥ್ಯವನ್ನು ಮಾತ್ರ ತುಂಬಲು ಅವಕಾಶ ನೀಡಲಿದ್ದು, ಮೂರು ಸೀಟ್ ಕಡೆಯಲ್ಲಿ ಇಬ್ಬರು, ಎರಡು ಸೀಟ್ ಕಡೆ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗುವುದು. ನಿಂತು ಪ್ರಯಾಣಿಸಲು ಅನುಮತಿ ನೀಡುವುದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ : Karnataka Monsoon Entry : ರಾಜ್ಯಕ್ಕೆ ಮುಂಗಾರು ಎಂಟ್ರಿ : ಎರಡು ದಿನ ಭಾರೀ ಮಳೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More