Home> Karnataka
Advertisement

ಭಾರತ್ ಜೋಡೋ ಯಾತ್ರೆಗೆ ಖಾಕಿ ಅಲರ್ಟ್!!

ಭಾರತ್ ಜೋಡೋ ಯಾತ್ರೆಗೆ ಮೂವರು ಎಸ್ಪಿ, ಎಂಟು ಜನ ಡಿವೈಎಸ್ಪಿ, 25 ಇನ್ಸಫೆಕ್ಟರ್, 50 ಜನ ಸಬ್ ಇನ್ಸ್ ಪೆಕ್ಟರ್, ಒಂದು ಸಾವಿರಕ್ಕೂ ಅಧಿಕ ಮಂದಿ ಪೇದೆ, ಕೆಎಸ್ಆರ್ಪಿ, ಹತ್ತಕ್ಕೂ ಅಧಿಕ ಡಿಆರ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.

ಭಾರತ್ ಜೋಡೋ ಯಾತ್ರೆಗೆ ಖಾಕಿ ಅಲರ್ಟ್!!

ಚಾಮರಾಜನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಇಂದು ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶಸಿಲಿರುವ ಹಿನ್ನೆಲೆಯಲ್ಲಿ ಖಾಕಿ ಹೈ ಅಲರ್ಟ್ ಆಗಿದ್ದು ಗುಂಡ್ಲುಪೇಟೆಯಲ್ಲಿ ಬಿಗಿ ಪೊಲೀಸ್ ಪಹರೆ ನಿಯೋಜಿಸಲಾಗಿದೆ. 

30 ಸಾವಿರಕ್ಕೂ ಹೆಚ್ಚು ಮಂದಿ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕುವ ನಿರೀಕ್ಷೆ ಇದ್ದು ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆ  ಹೆಚ್ಚಿನ ಮುತುವರ್ಜಿಯನ್ನು ವಹಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.

ಭಾರತ್ ಜೋಡೋ ಯಾತ್ರೆಗೆ ಮೂವರು ಎಸ್ಪಿ, ಎಂಟು ಜನ ಡಿವೈಎಸ್ಪಿ, 25 ಇನ್ಸಫೆಕ್ಟರ್, 50 ಜನ ಸಬ್ ಇನ್ಸ್ ಪೆಕ್ಟರ್, ಒಂದು ಸಾವಿರಕ್ಕೂ ಅಧಿಕ ಮಂದಿ ಪೇದೆ, ಕೆಎಸ್ಆರ್ಪಿ, ಹತ್ತಕ್ಕೂ ಅಧಿಕ ಡಿಆರ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ- ಅಂದು ‘ಡಿಸ್ಕವರಿ ಇಂಡಿಯಾ’ ಇಂದು ‘ಭಾರತ್ ಜೋಡೋ’: ಚಾಮರಾಜನಗರದಿಂದಲೇ ‘ರಾಗಾ’ ಯಾತ್ರೆ

ಕಾನೂನು ಬಾಹಿರ ಕೃತ್ಯಕ್ಕೆ ಯಾರೇ ಮುಂದಾದರೂ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು, ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದವರು ತಿಳಿಸಿದರು.

ವೇದಿಕೆ ಮೇಲೆ 240 ಮಂದಿ : 
ರಾಜ್ಯದ ಎಲ್ಲಾ ನಾಯಕರುಗಳು  ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರಿಗೆ ಸಾಥ್ ನೀಡಲಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗ ಬೃಹತ್ ಸಭೆ ನಡೆಯಲಿದ್ದು ಈ ಸಂದರ್ಭದಲ್ಲಿ  240 ಮಂದಿ ವೇದಿಕೆ ಮೇಲೆ ಆಸೀನರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- ಭಾರತ್ ಜೋಡೋ ಯಾತ್ರೆಗೆ ಗುಂಡ್ಲುಪೇಟೆಯಲ್ಲಿ ಭರ್ಜರಿ ತಯಾರಿ

ವೇದಿಕೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ನಡಿಗೆ ಆರಂಭಿಸಲಿರುವ ರಾಗಾ ಗುಂಡ್ಲುಪೇಟೆ ಪಟ್ಟಣದ ಹೊರವಲಯದಲ್ಲಿನ ಕೆಬ್ಬೆಕಟ್ಟೆ ಶನೀಶ್ವರ ದೇವಾಲಯ ಬಳಿ ಸೋಲಿಗರು, ಆಮ್ಲಜನಕ ದುರಂತದಲ್ಲಿ ಮಡಿದ ಸಂತ್ರಸ್ತರ ಜೊತೆ ಸಂವಾದ ನಡೆಸಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More