Home> Karnataka
Advertisement

ಮೋದಿ, ಅಮಿತ್ ಶಾ ಅವರೇ ದೇಶಕ್ಕೆ ನಿಮ್ಮ ತ್ಯಾಗ ಏನು?- ಸಿದ್ದರಾಮಯ್ಯ

ಮುಂದಿನ ಲೋಕಸಭೆ ಅಥವಾ ರಾಜ್ಯ ವಿಧಾನಸಭೆ ಚುನಾವಣೆ ಗೆಲ್ಲಲು ರಾಹುಲ್ ಗಾಂಧಿ ಅವರು ಈ ಯಾತ್ರೆಯನ್ನು ಹಮ್ಮಿಕೊಂಡಿಲ್ಲ.ಸ್ವತಂತ್ರ್ಯ ಭಾರತದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಪಾದಯಾತ್ರೆ.

ಮೋದಿ, ಅಮಿತ್ ಶಾ ಅವರೇ ದೇಶಕ್ಕೆ ನಿಮ್ಮ ತ್ಯಾಗ ಏನು?- ಸಿದ್ದರಾಮಯ್ಯ

ಬಳ್ಳಾರಿ: ರಾಹುಲ್ ಗಾಂಧಿ ಅವರ ಪಾದಯಾತ್ರೆಯನ್ನು ಲಘುವಾಗಿ ಟೀಕಿಸುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಐತಿಹಾಸಿಕ ಯಾತ್ರೆ ಮಾಡುತ್ತಿದ್ದು, ದೇಶಕ್ಕಾಗಿ ಅವರ ಕುಟುಂಬ ತ್ಯಾಗ ಬಲಿದಾನ ಮಾಡಿದ್ದಾರೆ. ಮೋದಿ, ಅಮಿತ್ ಶಾ ಅವರೇ ದೇಶಕ್ಕೆ ನಿಮ್ಮ ತ್ಯಾಗ ಏನು? ಕಾಂಗ್ರೆಸ್ ಪಕ್ಷ ದೇಶಕ್ಕಾಗಿ ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು 

ಮುಂದಿನ ಲೋಕಸಭೆ ಅತವಾ ರಾಜ್ಯ ವಿಧಾನಸಭೆ ಚುನಾವಣೆ ಗೆಲ್ಲಲು ರಾಹುಲ್ ಗಾಂಧಿ ಅವರು ಈ ಯಾತ್ರೆಯನ್ನು ಹಮ್ಮಿಕೊಂಡಿಲ್ಲ.ಸ್ವತಂತ್ರ್ಯ ಭಾರತದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಪಾದಯಾತ್ರೆ. ಈ ಹಿಂದೆ ಹಲವು ಪಾದಯಾತ್ರೆ ನಡೆದಿವೆ. ಮಹಾತ್ಮಾ ಗಾಂಧಿ, ವಿನೋಬಾ ಬಾವೆ, ಚಂದ್ರಶೇಖರ್ ಅವರು ಪಾದಯ್ತಾರೆ ಮಾಡಿದ್ದಾರೆ. ಆದರೆ ಏಕಬಾರಿಗೆ 3570 ಕಿ.ಮೀ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಯಾತ್ರೆ ಐತಿಹಾಸಿಕ ಯಾತ್ರೆಯಾಗಿದೆ. ಈಗಾಗಲೇ 1 ಸಾವಿರ ಕಿ.ಮೀ ಪೂರ್ಣಗೊಂಡಿದೆ.

ಇದನ್ನೂ ಓದಿ :ಕ.ವಿ.ವಿ.ಯಿಂದ ಪ್ರಪ್ರಥಮ ಬಾರಿಗೆ ‘ಅರಿವೆ ಗುರು’ ಪ್ರಶಸ್ತಿ ಪ್ರದಾನ

ಕರ್ನಾಟಕ ನಂತರ ಆಂಧ್ರ, ತೆಲೆಂಗಾಣ ಹೀಗೆ 12 ರಾಜ್ಯ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾತ್ರೆ ಸಾಗಲಿದೆ. ಈ ಯಾತ್ರೆ ಉದ್ದೇಶವನ್ನು ಅನೇಕ ಬಾರಿ ರಾಹುಲ್ ಗಾಂಧಿ ಅವರ ಸ್ಪಷ್ಟಪಡಿಸಿದ್ದಾರೆ. ಇಂದು ದೇಶ ಜಾತಿ, ಧರ್ಮ, ವರ್ಗ, ಭಾಷೆ ಆಧಾರದ ಮೇಲೆ ಜನರನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಮನಸ್ಸಲ್ಲಿ ವಿಷ ಹಿಂಡುತ್ತಿದ್ದಾರೆ. ಮೋದಿ ಅವರು ಪ್ರಧಾನಿಯಾದ ನಂತರ ಮಾನವ ವಿರೋಧಿ ಕೆಲಸ ಹೆಚ್ಚಾಗುತ್ತಿದೆ. ಎಲ್ಲೆಡೆ ದ್ವೇಷ ರಾಜಕಾರಣ, ಹಿಂಸೆಯ ರಾಜಕಾರಣದಿಂದ ಜನ ಇಂದು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ದಲಿತರು, ಹಿಂದುಳಿದವರು,. ಅಲ್ಪಸಂಖ್ಯಾತರು, ರೈತರು, ಬಡವರು ಭಯದಲ್ಲಿದ್ದಾರೆ.

ಕುವೆಂಪು ಅವರು ಭಾರತ ಸರ್ವಜನಾಂಗದ ಶಾಂತಿಯ ತೋಟವಾಗಬೇಕು ಎಂದರು. ಎಲ್ಲ ಜನರು ಶಾಂತಿಯಿಂದ ಪ್ರೀತಿಯಿಂದ ಬದುಕುವಂತೆ ಪರಿಸ್ಥಿತಿ ನಿರ್ಮಾಣ ಆಗಬೇಕು ಎಂದರು. ಆದರೆ ಆರ್ ಎಸ್ಎಸ್ ಹಾಗೂ ಸಂಘಪರಿವಾರದವರು ದೇಶದಲ್ಲಿ ಧರ್ಮದ ರಾಜಕಾರಣ ಮಾಡಿ ಅಶಾಂತಿ ಸೃಷ್ಟಿಸಿ ದೇಶದಲ್ಲಿ ನೀಚ ಕೆಲಸ ಮಾಡುತ್ತಿದ್ದಾರೆ. 

ರಾಹುಲ್ ಗಾಂಧಿ ಅವರ ಪಾದಯಾತ್ರೆಯನ್ನು ಲಘುವಾಗಿ ಟೀಕಿಸುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಐತಿಹಾಸಿಕ ಯಾತ್ರೆ ಮಾಡುತ್ತಿದ್ದು, ದೇಶಕ್ಕಾಗಿ ಅವರ ಕುಟುಂಬ ತ್ಯಾಗ ಬಲಿದಾನ ಮಾಡಿದ್ದಾರೆ. ಮೋದಿ, ಅಮಿತ್ ಶಾ ಅವರೇ ದೇಶಕ್ಕೆ ನಿಮ್ಮ ತ್ಯಾಗ ಏನು? ಕಾಂಗ್ರೆಸ್ ಪಕ್ಷ ದೇಶಕ್ಕಾಗಿ ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟಿದೆ. ಗಾಂಧಿ, ನೆಹರೂ ಸೇರಿದಂತೆ ಅನೇಕ ನಾಯಕರು ಸೇರೆವಾಸ ಅನುಭಿಸಿ ಆಶ್ತಿ ಕಳೆದುಕೊಂಡು ಹುತಾತ್ಮರಾಗಿದ್ದಾರೆ. 1925ರಲ್ಲಿ ಆರ್ ಎಸ್ಎಸ್ ಆರಂಭವಾಗಿದ್ದು ನಿಮ್ಮಲ್ಲಿ ಯಾರಾದರೂ ಒಬ್ಬ ದೇಶಕ್ಕಾಗಿ ಹುತಾತ್ಮರಾಗಿದ್ದಾರೆ. ಒಬ್ಬ ಸಾಯಲಿಲ್ಲ. ಕಾಂಗ್ರೆಸ್ ತಂದುಕೊಟ್ಟ ಸ್ವಾತಂತ್ರ್ಯ ಅನುಭವಿಸುತ್ತಿದ್ದಾರೆ.

ಈ ಜಿಲ್ಲೆಯ ಮಂತ್ರಿ ರಾಮುಲು ಅವರು ಇಂದು ಒಂದು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ದೇಶಕ್ಕೆ ಏನೂ ಮಾಡಿಲ್ಲ. ನೆಹರೂ ಕುಟುಂಬ ದೇಶಕ್ಕೆ ಏನೂ ಮಾಡಿಲ್ಲ. ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಏನು ಮಾಡಿಲ್ಲ ಎಂದು ಹೇಳಿದ್ದಾರೆ. ಶ್ರೀರಾಮುಲು ಅವರಿಗೆ ನೆನಪಿಸುತ್ತಿದ್ದೇನೆ, ರಾಮುಲು ನಿನಗೆ ಇತಿಹಾಸ ಗೊತ್ತಿಲ್ಲ. ನೆಹರೂ ಕಾಂಗ್ರೆಸ್ ಬಗ್ಗೆ ಮಾತನಾಡಲು ನಿನಗೆ ಯಾವುದೇ ನೈತಿಕ ಹಕ್ಕಿಲ್ಲ. 1977ರಲ್ಲಿ ವಿಜಯನಗರ ಉಕ್ಕಿನ ಕಾರ್ಖಾನೆ ಸ್ಥಾಪಿಸಿದವರು ಯಾರು? ಸಾವಿರಾರು ಮಂದಿಗೆ ಉದ್ಯೋಗ ಕೊಟ್ಟು ಊಟ ಕೊಟ್ಟಿದ್ದರೆ ಶ್ರೀಮಂತಿ ಇಂದಿರಾ ಗಾಂಧಿ ಕಾರಣ. 

ಸೋನಿಯಾ ಗಾಂಧಿ ಅವರು 1999ರಲ್ಲಿ ಬಳ್ಳಾರಿಯಿಂದ ಗೆದ್ದು ಲೋಕಸಭಾ ಸದಸ್ಯರಾದ ನಂತರ ವಿದ್ಯತ್ ಯೋಜನೆಗೆ 3300 ಕೋಟಿ ತಂದವರು ಯಾರು? ಶ್ರೀಮತಿ ಸೋನಿಯಾ ಗಾಂಧಿ. ರಾಮುಲು ನಿನ್ನ ಹಾಗೂ ಬಿಜೆಪಿ ಕೊಡುಗೆ ಏನು? ಮೋದಿ ಪ್ರಧಾನಿ ಆಗಿ 8 ವರ್ಷ ಆಗಿದೆ ಬಳ್ಳಾರಿ ಜಿಲ್ಲೆಗೆ 1 ರೂ. ಕೆಲಸ ಆಗಿದೆಯಾ? ನಿನ್ನಂತ ಪೆದ್ದನ ಜತೆ ಚರ್ಚೆಗೆ ನಾವು ಸಿದ್ದರಿಲ್ಲ. ಲೂಟಿ ಹೊಡೆದಿದ್ದು ನಿಮ್ಮ ಸಾಧನೆ. ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ಕೊಟ್ಟವರು ಯಾರು? ನಾವು ಪಾದಯಾತ್ರೆ ಮಾಡಿದ ನಂತರ ಜನಾರ್ದನ ರೆಡ್ಡಿ ಜೈಲಿಗೆ ಹೋಗಬೇಕಾಯಿತು. ಕಾಂಗ್ರೆಸ್ ಪ್ರಶ್ನಿಸಲು ನಿಮಗೆ ಯಾವುದೇ ನೈತಿಕ ಆಧಾರವಿಲ್ಲ. 

ಇದನ್ನೂ ಓದಿ : Hair Care Tips: ಕೂದಲು ವೇಗವಾಗಿ ಬೆಳೆಯಲು ಈ ತರಕಾರಿಗಳನ್ನು ಸೇವಿಸಿ

ರಾಮುಲು, ಬಳ್ಳಾರಿಗೆ ಕಾಂಗ್ರೆಸ್ ಮಾಡಿರುವ ಕೊಡುಗೆ ಬಗ್ಗೆ ಚರ್ಚೆ ಮಾಡಲು ಉಗ್ರಪ್ಪ ಅವರನ್ನು ಕಳುಹಿಸಿಕೊಡುತ್ತೇನೆ. ಚರ್ಚೆ ಮಾಡಿ. ಇಂದು 40% ಕಮಿಷನ್ ಸರ್ಕಾರ ಎಂದು ಬಿಜೆಪಿ ಸರ್ಕಾರಕ್ಕೆ ಕರೆಯುತ್ತಾರೆ. ಇದು ನಾನು ಹೇಳುತ್ತಿಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಮಂತ್ರಿಗೆ ಪ್ತ್ರ ಬರೆದು ಹೇಳಿದ್ದಾರೆ. ಈ ಪತ್ರ ಬರೆದು ಒಂದು ವರ್ಷವಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮೋದಿ ಅವರು ಮಾತೆತ್ತಿದರೆ ನಾ ಖಾವೂಂಗಾ, ನಾ ಖಾನೇದೂಂಗ ಎನ್ನುತ್ತಾರೆ. ಮೋದಿ ಅವರೇ ಎಲ್ಲಿದ್ದೀರಿ? ನಾಚಿಕೆಯಾಗುವುದಿಲ್ಲವೇ? 

ರಾಹುಲ್ ಗಾಂಧಿ ಅವರು ಪಾದಯಾತ್ರೆ ಮಾಡಿದ ನಂತರ ಈಗ ಜನಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ. ಜನ ಸಂಕಲ್ಪ ಮಾಡಿದ್ದು, 2023ಕ್ಕೆ ನಿಮ್ಮನ್ನು ಕಿತ್ತೆಸೆದು ಕಾಂಗ್ರೆಸ್ ಸರ್ಕಾರ ತರಲು ಸಂಕಲ್ಪ ಮಾಡಿದ್ದಾರೆ. ರಾಹುಲ್ ಗಾಂಧಿ ಅವರ ಪಾದಯಾತ್ರೆಗೆ ಸಿಕ್ಕಿರುವ ಅಭೂತಪೂರ್ವ ಬಂಬಲ ಕಂಡು ಬಿಜೆಪಿಯವರಿಗೆ ನಡುಕ ಹುಟ್ಟಿದೆ. ಅಧಿಕಾರ ಹೋಗುತ್ತದೆ ಎಂಬ ಹೆದರಿಕೆ ಶುರುವಾಗಿದೆ. ಇದಕ್ಕಾಗಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ.

ರಾಹುಲ್ ಗಾಂಧಿ ಅವರು ನನಗೆ 5 ವರ್ಷ ಮುಖ್ಯಮಂತ್ರಿ ಆಗುವ ಅವಕಾಶ ಕೊಟ್ಟಿದ್ದರು. ನಾವು ನುಡಿದಂತೆ ನಡೆದಿದ್ದೇವೆ. 160 ಭರವಸೆಗಳ ಪೈಕಿ 158 ಭರವಸೆಗಳನ್ನು ಈಡೇರಿಸಿದ್ದೇವೆ.ನೀವು 2018ರಲ್ಲಿ ಕೊಟ್ಟಿರುವ ಪ್ರಣಾಳಿಕೆಯಲ್ಲಿ ಶೇ.10ರಷ್ಟು ಈಡೇರಿಸಿಲ್ಲ. ನಿಮಗೆ ನಾಚಿಕೆ ಆಗುವುದಿಲ್ಲವೇ? ಕೇವಲ ಲೂಟಿ ಮಾಡಿ ರಾಜ್ಯ ಹಾಳು ಮಾಡುತ್ತಿದ್ದೀರಿ. ಇದಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದೇವೆ.

ಒಡೆದಿರುವ ಜನರ ಮನಸ್ಸು ಒಂದುಗೂಡಿಸಬೇಕು. ಬೆಲೆ ಏರಿಕೆ ಹೆಚ್ಚಾಗಿದೆ. ಮೋದಿ ಸರ್ಕಾರ ಕಚ್ಚಾತೈಲ ಬೆಲೆ ಇಳಿದರೂ ಇಂಧನದ ಬೆಲೆ ಇಳಿಸಲಿಲ್ಲ. ಬದಲಿಗೆ ಹೆಚ್ಚಿಸಿದ್ದಾರೆ. 2014ರಲ್ಲಿ ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. 16 ಕೋಟಿ ಉದ್ಯೋಗ ನೀಡುವ ಬದಲು 4-5 ಲಕ್ಷ ಉದ್ಯೋಗ ಕಸಿದಿದ್ದಾರೆ. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದರು. ಆದಾಯ ದುಪ್ಪಟ್ಟು ಆಗಲಿಲ್ಲ. ಅವರ ವೆಚ್ಚ ದುಪ್ಪಟ್ಟು ಆಗಿದೆ. ಬೆಂಬಲ ಬೆಲೆ ನೀಡದೇ ರೈತರ ಮನೆ ಹಾಳು ಮಾಡಿದರು. ಇಂದಿರಾ ಗಾಂಧಿ ಅವರು ತಂದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಿ ಯಾರು ಬೇಕಾದರೂ ಕೃಷಿ ಭೂಮಿ ಖರೀದಿಸಬಹುದು ಎಂದು ಮಾಡಿದ್ದೀರಿ. ದಲಿತರು, ಸಣ್ಣ ಇಡುವಳಿದಾರರನ್ನು ಬೀದಿಗೆ ತಂದಿದ್ದೀರಿ. ಇದೆಲ್ಲವನ್ನು ಜನರಿಗೆ ತಿಳಿಸಬೇಕಲ್ಲವೇ? ಅದಕ್ಕಾಗಿ ಈ ಯಾತ್ರೆ.

2013ರಲ್ಲಿ ಈ ದೇಶದ ಮೇಲಿದ್ದ ಸಾಲ 53.11 ಲಕ್ಷ ಕೋಟಿ. ಮುಂದಿನ ಮಾರ್ಚ್ ಅಂತ್ಯಕ್ಕೆ 155 ಲಕ್ಷ ಕೋಟಿ. ಮೋದಿ ಅವರು ಅಚ್ಛೇ ದಿನ್ ಬರುತ್ತದೆ ಎಂದು  100 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇದೆಲ್ಲವನ್ನು ಜನರಿಗೆ ಹೇಳಬೇಕಲ್ಲವೇ? ದೇಶ ಉಳಿಸಬೇಕಲ್ಲವೇ? ದೇಶದ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಪ್ರಜಾಪ್ರಭುತ್ವ ಸಂವಿಧಾನ ಎಲ್ಲದಕ್ಕೂ ಆರ್ ಎಸ್ಎಸ್ ವಿರೋಧವಿದೆ. ಅವರು ನಮ್ಮ ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿಸುತ್ತಾರೆ. ಇವು ಅಪಾಯದಲ್ಲಿವೆ. ಇದನ್ನು ಉಳಿಸುವುದು ನಮ್ಮ ಜವಾಬ್ದಾರಿ.

ಮೋದಿ ಅವರೇ ನೀವು ಪ್ರಧಾನಿ ಆಗಿದ್ದು, ನಾನು ಸಿಎಂ ಆಗಿದ್ದು ಅಂಬೇಡ್ಕರ್ ಕೊಟ್ಟ ಸಂವಿಧಾನದಿಂದ. ಆ ಸಂವಿಧಾನ ಉಳಿಸಲು ಈ ಪಾದಯಾತ್ರೆ. ಇಂತಹ ಸಾಹಸಕ್ಕೆ ಕೈಹಾಕಿರುವುದಕ್ಕೆ ನಮಿಸುತ್ತೇನೆ. ಅವರ ಈ ಯಾತ್ರೆಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ದುಡಿಯೋಣ. ನಮ್ಮ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಳಿಸಿದೆ. ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನ ಕಾಂಗ್ರೆಸ್ ಪಕ್ಷ ಅದಿಕಾರಕ್ಕೆ ತರಲಿದ್ದಾರೆ ಎಂದು ರಾಹುಲ್ ಗಾಂಧಿ ಅವರಿಗೆ ಭರವಸೆ ನೀಡುತ್ತೇನೆ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Read More