Home> Karnataka
Advertisement

Panditharadhya Shivacharya Swamiji : ಮನಷ್ಯನಲ್ಲಿ ಸ್ವಾರ್ಥ ಹೆಚ್ಚಾಗಿ ಯುದ್ಧ ನಡಿತಿದೆ : ಪಂಡಿತಾರಾದ್ಯ ಸ್ವಾಮೀಜಿಗಳು 

ಈಡಿ ವಿಶ್ವದಲ್ಲಿ ಶಾಂತಿ ಕದಡಿ, ಅಶಾಂತಿ ಹೆಚ್ಚಾಗ್ತಿದೆ. ಮನಷ್ಯನಲ್ಲಿ ಸ್ವಾರ್ಥ ಹೆಚ್ಚಾಗಿ ಅನುಮಾನದಿಂದ ನೋಡುವಂತಾಗಿ ಯುದ್ಧ ನಡಿತಿದೆ. ಮನಸ್ಸಿನಲ್ಲಿ ಯುದ್ಧ ಶುರುವಾಗಿ ಬಹಿರಂಗವಾಗಿ ಶುರುವಾಗುತ್ತೆ. ಯುದ್ಧ ಬೇಗ ಸಮಾಪ್ತಿ ಆಗಲಿ ಜಗತ್ತಿನ ಯಾರಿಗೆ ನೋವಾದ್ರೂ ನಮಗೆ ನೋವಾದಂತೆ.

Panditharadhya Shivacharya Swamiji : ಮನಷ್ಯನಲ್ಲಿ ಸ್ವಾರ್ಥ ಹೆಚ್ಚಾಗಿ ಯುದ್ಧ ನಡಿತಿದೆ : ಪಂಡಿತಾರಾದ್ಯ ಸ್ವಾಮೀಜಿಗಳು 

ಹಾವೇರಿ : ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ಧದಲ್ಲಿ ಮೃತನಾದ ನವೀನ್ ಮನೆಗೆ ಇಂದು ಸಿರಿಗೆರೆ ಸಾಣೆಹಳ್ಳಿ ಶಾಖಾ‌ ಮಠದ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿಗಳು ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. 

ಬೇಟಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ, ಸಿರಿಗೆರೆ ಸಾಣೆಹಳ್ಳಿ ಶಾಖಾ‌ ಮಠದ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿಗಳು(Panditharadhya Shivacharya Swamiji), ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ. ನಾವು ಬಯಸೋದೆ ಒಂದು, ಆಗೋದೆ ಒಂದು. ಈಡಿ ವಿಶ್ವದಲ್ಲಿ ಶಾಂತಿ ಕದಡಿ, ಅಶಾಂತಿ ಹೆಚ್ಚಾಗ್ತಿದೆ. ಮನಷ್ಯನಲ್ಲಿ ಸ್ವಾರ್ಥ ಹೆಚ್ಚಾಗಿ ಅನುಮಾನದಿಂದ ನೋಡುವಂತಾಗಿ ಯುದ್ಧ ನಡಿತಿದೆ. ಮನಸ್ಸಿನಲ್ಲಿ ಯುದ್ಧ ಶುರುವಾಗಿ ಬಹಿರಂಗವಾಗಿ ಶುರುವಾಗುತ್ತೆ. ಯುದ್ಧ ಬೇಗ ಸಮಾಪ್ತಿ ಆಗಲಿ ಜಗತ್ತಿನ ಯಾರಿಗೆ ನೋವಾದ್ರೂ ನಮಗೆ ನೋವಾದಂತೆ. ಯುದ್ಧ ಕೊನೆಗೊಳ್ಳಲಿ, ಶಾಂತಿ ನೆಲೆಸಲಿ. ಅಲ್ಲಿ ಸಿಲುಕಿರೋ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾರೆ, ಅವರ ಕುಟುಂಬಗಳು ದುಃಖದಲ್ಲಿವೆ. ಆ ಸಂಕಷ್ಟಗಳು ದೂರಾಗಿ ವಿದ್ಯಾರ್ಥಿಗಳು ನಾಡನ್ನು ಮುಟ್ಟುವಂತಾಗಲಿ ಎಂದು ಹೇಳಿದರು.

ಇದನ್ನೂ ಓದಿ : Congress : ಮೃತ ನವೀನ್ ಕುಟುಂಬಕ್ಕೆ ಸಾಂತ್ವಾನ ಹೇಳಿದ 'ಕೈ' ನಾಯಕರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More