Home> Karnataka
Advertisement

ದುರಸ್ತಿ ಕಾಮಗಾರಿ ಹಿನ್ನೆಲೆ : ಜೂನ್ 4 ರಿಂದ ಜೂನ್ 6 ರವರೆಗೆ ಮಂಗಳೂರಿನ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ

ಈ ಹಿಂದೆ ಮಂಗಳೂರು ಮಹಾನಗರ ಪಾಲಿಕೆಯು  ನಗರದ ಕೆಲವು ಪ್ರದೇಶಗಳಲ್ಲಿ ಜೂನ್ 2 ರಿಂದ ಜೂನ್ 4 ರವರೆಗೆ ನೀರು ಸರಬರಾಜು ವ್ಯತ್ಯಯವಾಗಲಿದೆ ಎಂದು ಹೇಳಿತ್ತು.  ಆದರೆ ಮುಖ್ಯ ನೀರಿನ ಪೈಪ್‌ಲೈನ್ ದುರಸ್ತಿ ಕಾರ್ಯದ ದಿನಾಂಕ ಬದಲಾಗಿರುವುದರಿಂದ ಜೂನ್ 4 ರಿಂದ ಜೂನ್ 6 ರವರೆಗೆ ವ್ಯತ್ಯಯ ಉಂಟಾಗಲಿದೆ. 

ದುರಸ್ತಿ ಕಾಮಗಾರಿ  ಹಿನ್ನೆಲೆ : ಜೂನ್ 4 ರಿಂದ ಜೂನ್ 6 ರವರೆಗೆ ಮಂಗಳೂರಿನ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ

ಮಂಗಳೂರು : ಮುಖ್ಯ ನೀರಿನ ಪೈಪ್‌ಲೈನ್ ದುರಸ್ತಿ ಕಾರ್ಯದ  ಹಿನ್ನೆಲೆಯಲ್ಲಿ ಮಂಗಳೂರಿನ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.  ಜೂನ್ 4 ರಿಂದ ಜೂನ್ 6 ರವರೆಗೆ ಅಂದರೆ ಎರಡು ದಿನಗಳವರೆಗೆ ನಗರದ ಕೆಲವು ಭಾಗಗಳಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿರುವ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆ ಈ ಬಗ್ಗೆ ಮಾಹಿತಿ ನೀಡಿದೆ. 

ಈ ಹಿಂದೆ ಮಂಗಳೂರು ಮಹಾನಗರ ಪಾಲಿಕೆಯು ನಗರದ ಕೆಲವು ಪ್ರದೇಶಗಳಲ್ಲಿ ಜೂನ್ 2 ರಿಂದ ಜೂನ್ 4 ರವರೆಗೆ ನೀರು ಸರಬರಾಜು ವ್ಯತ್ಯಯವಾಗಲಿದೆ ಎಂದು ಹೇಳಿತ್ತು.  ಆದರೆ ಮುಖ್ಯ ನೀರಿನ ಪೈಪ್‌ಲೈನ್ ದುರಸ್ತಿ ಕಾರ್ಯದ ದಿನಾಂಕ ಬದಲಾಗಿರುವುದರಿಂದ ಜೂನ್ 4 ರಿಂದ ಜೂನ್ 6 ರವರೆಗೆ ವ್ಯತ್ಯಯ ಉಂಟಾಗಲಿದೆ. 

ಇದನ್ನೂ ಓದಿ : ಮರ್ಯಾದೆ ಕೊಡುತ್ತಿಲ್ಲವೆಂದು ಚಿಕ್ಕಪ್ಪನಿಂದಲೇ ಮಗನ ಕೊಲೆ..!

ಅಡ್ಯಾರ್ ಕಟ್ಟೆ ಬಳಿ ತುಂಬೆ-ಬೆಂದೂರ್‌ವೆಲ್-ಪಣಂಬೂರು 1000 ಎಂಎಂ ಪೈಪ್‌ಲೈನ್‌ ನಲ್ಲಿ ಅಗತ್ಯ ನಿರ್ವಹಣಾ ಕಾಮಗಾರಿ  ನಡೆಯಲಿರುವ ಹಿನ್ನೆಲೆಯಲ್ಲಿ ಮತ್ತು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದಿಂದ (ಕೆಯುಐಡಿಎಫ್‌ಸಿ) ಕೊಟ್ಟಾರ ಚೌಕಿ ಬಳಿ 900 ಎಂಎಂ ವ್ಯಾಸದ ಪೈಪ್ ಅನ್ನು ಮರು ಸ್ಥಾಪಿಸುವ ಕಾರಣದಿಂದಾಗಿ ನೀರು ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ. 

ನಿಗದಿತ ಅವಧಿಯಲ್ಲಿ, ಪಿವಿಎಸ್, ಲೇಡಿಹಿಲ್, ಬಂದರು, ಬಿಜೈ, ಸೂಟರ್‌ಪೇಟ್, ಮೇರಿಹಿಲ್, ಪಚ್ಚನಾಡಿ, ಅಶೋಕನಗರ, ದೇರೆಬೈಲ್, ಕೊಡಿಯಾಲ್ ಬೈಲ್ , ಕದ್ರಿ, ನಾಗುರಿ, ಸುರತ್ಕಲ್, ಕಾಟಿಪಳ್ಳ ಸೇರಿದಂತೆ ನಗರದ ಹಲವಾರು ಕೆಳಮಟ್ಟದ ಪ್ರದೇಶಗಳಲ್ಲಿ ನೀರು ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಕುಳೂರು, ಜಲ್ಲಿಗುಡ್ಡೆ, ಕೋಡಿಕಲ್, ಕಾನ, ಬಾಳ, ಕುಳಾಯಿ, ಮುಕ್ಕ, ಪಣಂಬೂರು, ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿಯೂ ನೀರು ಸರಬರಾಜು ಇರುವುದಿಲ್ಲ. 

ಇದನ್ನೂ ಓದಿ :  ಪಾಲಿಕೆಯಲ್ಲಿಲ್ಲ ವಾರ್ಡ್ ಸಮಿತಿ: ಸ್ಥಳೀಯರ ಅಹವಾಲು ಆಲಿಸುವವರೇ ಇಲ್ಲ...!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More