Home> Karnataka
Advertisement

ಮಾಸ್ಕ್ ದಂಡ ನಿಯಮಕ್ಕೆ ಬಹುತೇಕ ಫುಲ್ ಸ್ಟಾಪ್!

ಪ್ರತಿನಿತ್ಯ ಮಾಸ್ಕ್ ದಂಡ ಹಾಗೂ ಸಾಮಾಜಿಕ ಅಂತರ ಕಾಯದ ಜನರಿಗೆ ದಂಡ ವಿಧಿಸುತ್ತಿದ್ದ ಮಾರ್ಷಲ್ಸ್, ದಿನವೊಂದಕ್ಕೆ ಒಂದೂವರೆ ಲಕ್ಷ ರೂಪಾಯಿಗೂ ಅಧಿಕ ದಂಡ ಸಂಗ್ರಹಿಸುತ್ತಿದ್ದರು.

ಮಾಸ್ಕ್ ದಂಡ ನಿಯಮಕ್ಕೆ ಬಹುತೇಕ ಫುಲ್ ಸ್ಟಾಪ್!

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ (COVID) ಮೂರನೇ ಅಲೆಯೂ ಸಂಪೂರ್ಣವಾಗಿ ಕಡಿಮೆಯಾಗಿರುವ ಹಿನ್ನಲೆ, ಮಾಸ್ಕ್ (Mask) ಧರಿಸುವ ಕಡ್ಡಾಯ ನಿಯಮದಲ್ಲಿ ಸಡಿಲಿಕೆ ಮಾಡಲಾಗಿದೆ .  ಹೀಗಾಗಿ ನಗರದಲ್ಲಿ ಮಾಸ್ಕ್ ಧರಿಸದವರಿಗೆ, ದೈಹಿಕ ಅಂತರ ಕಾಪಾಡದವರಿಗೆ (Social distancing) ದಂಡ ವಿಧಿಸುತ್ತಿಲ್ಲ. ಬದಲಾಗಿ, ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸುವ ಕೆಲಸ ಮಾತ್ರ ನಡೆಸಲು ಮೌಖಿಕ ಸೂಚನೆ ನೀಡಲಾಗಿದೆ. 

ಪ್ರತಿನಿತ್ಯ ಮಾಸ್ಕ್ ದಂಡ (Mask fine) ಹಾಗೂ ಸಾಮಾಜಿಕ ಅಂತರ ಕಾಯದ ಜನರಿಗೆ ದಂಡ ವಿಧಿಸುತ್ತಿದ್ದ ಮಾರ್ಷಲ್ಸ್, ದಿನವೊಂದಕ್ಕೆ ಒಂದೂವರೆ ಲಕ್ಷ ರೂಪಾಯಿಗೂ ಅಧಿಕ ದಂಡ ಸಂಗ್ರಹಿಸುತ್ತಿದ್ದರು. ಆದ್ರೆ ಭಾನುವಾರ ಮಾಸ್ಕ್ ಧರಿಸದ 20 ಜನರಿಂದ 5 ಸಾವಿರ ರೂ. ಮಾತ್ರ ದಂಡ ಸಂಗ್ರಹಿಸಲಾಗಿದೆ. 

ಇದನ್ನೂ ಓದಿ : Road Accident: ರಸ್ತೆ ಬದಿಯಲ್ಲಿ ಮಲಗಿದ್ದ ಬಾಲಕಿ ಮೇಲೆ ಬುಲೋರೋ ಹರಿದು ಸಾವು

COVID ಹೆಚ್ಚು ಇದ್ದ ದಿನಗಳಲ್ಲಿ, 500, 600 ಪ್ರಕರಣಗಳಿಗೆ ದಂಡ ಹಾಕಲಾಗ್ತಿತ್ತು. ಸದ್ಯ 20, 30 ಜನರಿಗೆ ಮಾತ್ರ ದಂಡ ವಿಧಿಸಲಾಗ್ತಿದೆ. ಇನ್ನು ದೈಹಿಕ ಅಂತರ ಪ್ರಕರಣಕ್ಕೆ (Socia Distancing) ದಂಡ ಹಾಕುವುದನ್ನು ಮಾರ್ಚ್ 7 ರಿಂದ ಸಂಪೂರ್ಣವಾಗಿ ನಿಲ್ಲಿಸಲಾಗಿದೆ. 

ಮಾಸ್ಕ್ ನಿಯಮ ತೆರವು ಇಲ್ಲ: 
ಕೇಂದ್ರ ಸರ್ಕಾರದ ಸೂಚನೆಯಂತೆ ಕೋವಿಡ್ ನಿಯಮಾವಳಿ (Corona Guidelines) ಉಲ್ಲಂಘಿಸಿದರೆ ವಿಪತ್ತು ನಿರ್ವಹಣಾ ಕಾಯ್ದೆಯೂ ಇನ್ನು ಅನ್ವಯವಾಗುವುದಿಲ್ಲ. ಯಾವುದೇ ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ ಇದರಡಿ ದಾಖಲಾಗುವುದಿಲ್ಲ. ಆದರೆ ಕೇಂದ್ರ ಆರೋಗ್ಯ ಇಲಾಖೆ ಆಗಷ್ಟ್ ವರೆಗೂ ಕೋವಿಡ್ ನಿಯಮಾವಳಿ ಮುಂದುವರಿಸುವ ಚಿಂತನೆಯಲ್ಲಿದೆ. ದೇಶದಲ್ಲಿ ಕೋವಿಡ್ (COVID)ಇಳಿಕೆಯಾಗಿದ್ದರೂ, ವಿಶ್ವದ ಬೇರೆ ಕಡೆಗಳಲ್ಲಿ ನಾಲ್ಕನೇ ಅಲೆ ತೀವ್ರವಾಗಿದೆ. ಹೀಗಾಗಿ ಎಲ್ಲಾ ಕಡೆ  ಪ್ಯಾಂಡಮಿಕ್ - ಎಂಡಮಿಕ್ ಆಗುವವರೆಗೂ ಮಾಸ್ಕ್ ನಿಯಮದಿಂದ ಹಿಂದೆ ಸರಿಯದಿರಲು ನಿರ್ಧರಿಸಿದೆ. ಮನೆಯಿಂದ ಹೊರಬಂದರೆ ಮಾಸ್ಕ್, ಹಾಗೂ ಕೋವಿಡ್ ಕಂಟೈನ್ ಮೆಂಟ್ ನಿಯಮಗಳನ್ನು  ರದ್ದುಮಾಡದೆ, ಮುಂದುವರೆಸಲು ತಿಳಿಸಲಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತರಾದ ರಂದೀಪ್ ಜೀ ಕನ್ನಡ ನ್ಯೂಸ್ ಗೆ ತಿಳಿಸಿದ್ದಾರೆ. 

ಇದನ್ನೂ ಓದಿ : ಮಲೆಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರೆ ಆರಂಭ: ಎರಡು ವರ್ಷಗಳ ಬಳಿಕ ಕಳೆಗಟ್ಟಿದ ಸಂಭ್ರಮ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More