Home> Karnataka
Advertisement

ಹನೂರಲ್ಲಿ ಮುಂಗಾರು ಆರ್ಭಟ: ಕರ್ನಾಟಕ- ತಮಿಳುನಾಡು ಸಂಪರ್ಕ ರಸ್ತೆ 3 ಗಂಟೆ ಬಂದ್

ಈ ಹಿನ್ನೆಲೆ ಬೋರೆದೊಡ್ಡಿ ಗ್ರಾಮದ ಸಮೀಪದ ಜಡೆತಡಿ ಹಳ್ಳ, ಲೊಕ್ಕನಹಳ್ಳಿ ಸಮೀಪದ  ಹಳ್ಳಗಳು ತುಂಬಿ ಹರಿಯುತ್ತಿದೆ. ಇದರಿಂದ ಲೊಕ್ಕನಹಳ್ಳಿ ಗ್ರಾಮದಿಂದ ಒಡೆಯರಪಾಳ್ಯ ಪಿ ಜಿ ಪಾಳ್ಯ ತಮಿಳುನಾಡಿಗೆ ಹೋಗುತ್ತಿದ್ದ ವಾಹನಗಳು ಹಾಗೂ ಒಡೆಯರಪಾಳ್ಯ ಮಾರ್ಗವಾಗಿ ಲೊಕ್ಕನಹಳ್ಳಿ ಕೊಳ್ಳೇಗಾಲ, ಹನೂರು ಪಟ್ಟಣ ವ್ಯಾಪ್ತಿಗೆ ಬರುತ್ತಿದ್ದ ಹಲವಾರು ದ್ವಿಚಕ್ರ ವಾಹನ, ಬಸ್, ಸರಕು ಸಾಗಣೆ ವಾಹನಗಳು ನಿಂತಲ್ಲಿ ನಿಂತಿದ್ದು ಸುಮಾರು ಮೂರು ಗಂಟೆಗಳಿಗೂ ಹೆಚ್ಚು ಕಾಲ ಸಂಚಾರ ಸ್ಥಗಿತವಾಗಿದೆ.

ಹನೂರಲ್ಲಿ ಮುಂಗಾರು ಆರ್ಭಟ: ಕರ್ನಾಟಕ- ತಮಿಳುನಾಡು ಸಂಪರ್ಕ ರಸ್ತೆ 3 ಗಂಟೆ ಬಂದ್

ಚಾಮರಾಜನಗರ: ಗುರುವಾರ ಸಂಜೆ ಹನೂರು ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಬಿದ್ದ ಭಾರಿ ಮಳೆಗೆ ಜಡೆತಡಿ ಹಳ್ಳ ತುಂಬಿ ಹರಿದ ಪರಿಣಾಮ ಮೂರು ಗಂಟೆಗಳಿಗೂ ಹೆಚ್ಚು ಕಾಲ ಅಂತರ ರಾಜ್ಯ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.ಲೊಕ್ಕನಹಳ್ಳಿ ಹೋಬಳಿಯ ಪಿ.ಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾವಿನ ಮೂಲೆ, ಉದ್ದಟ್ಟಿ, ಕೆರೆದಿಂಬ ನೆಲ್ಲಿಕತ್ರಿ ಅರಣ್ಯ ವ್ಯಾಪ್ತಿಯಲ್ಲಿ ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ಉತ್ತಮ ಮಳೆಯಾಗಿದೆ.

ಇದನ್ನೂ ಓದಿ: ಮುಖ್ಯಮಂತ್ರಿ ರಾಜೀನಾಮೆ ಪಡೆಯಲು ಆಗ್ರಹಿಸಿ ರಾಜ್ಯಪಾಲರಿಗೆ ಮನವಿ: ಬಿವೈ ವಿಜಯೇಂದ್ರ

ಈ ಹಿನ್ನೆಲೆ ಬೋರೆದೊಡ್ಡಿ ಗ್ರಾಮದ ಸಮೀಪದ ಜಡೆತಡಿ ಹಳ್ಳ, ಲೊಕ್ಕನಹಳ್ಳಿ ಸಮೀಪದ  ಹಳ್ಳಗಳು ತುಂಬಿ ಹರಿಯುತ್ತಿದೆ. ಇದರಿಂದ ಲೊಕ್ಕನಹಳ್ಳಿ ಗ್ರಾಮದಿಂದ ಒಡೆಯರಪಾಳ್ಯ ಪಿ ಜಿ ಪಾಳ್ಯ ತಮಿಳುನಾಡಿಗೆ ಹೋಗುತ್ತಿದ್ದ ವಾಹನಗಳು ಹಾಗೂ ಒಡೆಯರಪಾಳ್ಯ ಮಾರ್ಗವಾಗಿ ಲೊಕ್ಕನಹಳ್ಳಿ ಕೊಳ್ಳೇಗಾಲ, ಹನೂರು ಪಟ್ಟಣ ವ್ಯಾಪ್ತಿಗೆ ಬರುತ್ತಿದ್ದ ಹಲವಾರು ದ್ವಿಚಕ್ರ ವಾಹನ, ಬಸ್, ಸರಕು ಸಾಗಣೆ ವಾಹನಗಳು ನಿಂತಲ್ಲಿ ನಿಂತಿದ್ದು ಸುಮಾರು ಮೂರು ಗಂಟೆಗಳಿಗೂ ಹೆಚ್ಚು ಕಾಲ ಸಂಚಾರ ಸ್ಥಗಿತವಾಗಿದೆ.

ಇದನ್ನೂ ಓದಿ: ಲೋಕ ಸಮರ ಫಲಿತಾಂಶ ಎಫೆಕ್ಟ್: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಲಿತ-ಲಿಂಗಾಯತ ನಾಯಕರ ಒತ್ತಡ?!

ಕಳೆದ ಒಂದು ತಿಂಗಳಿನಲ್ಲಿ ಇಂತಹ ಮಳೆಯಾಗಿರಲಿಲ್ಲ,  ಗುರುವಾರ ಬಿದ್ದ ಮಳೆಯಿಂದ ಕೆರೆಕಟ್ಟೆಗಳು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Read More