Home> Karnataka
Advertisement

ಲಾಕ್ ಡೌನ್ ವಿಚಾರ ಇಲ್ಲ, ಯಾರಿಗೋ ಸ್ವಲ್ಪ ಲಾಭವಾಗುತ್ತೆ ಅಂತ ರಿಲ್ಯಾಕ್ಸ್ ಮಾಡಲ್ಲ: ಸಚಿವ ಆರ್.ಅಶೋಕ್

Karnataka Lockdown: ಲಾಕ್ ಡೌನ್ ವಿಚಾರ ನಮ್ಮ ಮುಂದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಲಾಕ್ ಡೌನ್ ವಿಚಾರ ಇಲ್ಲ, ಯಾರಿಗೋ ಸ್ವಲ್ಪ ಲಾಭವಾಗುತ್ತೆ ಅಂತ ರಿಲ್ಯಾಕ್ಸ್  ಮಾಡಲ್ಲ: ಸಚಿವ ಆರ್.ಅಶೋಕ್

ಬೆಂಗಳೂರು: ಕೊರೊನಾ ಸೋಂಕು (Corona Virus) ಕಡಿಮೆಯಾದರೆ ರಿಲ್ಯಾಕ್ಸ್ ಮಾಡಬಹುದು. ಆದರೆ ಲಾಕ್ ಡೌನ್ (Lockdown) ವಿಚಾರ ನಮ್ಮ ಮುಂದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸಂಜೆ ಸಿಎಂ ಕೋವಿಡ್ ಸಭೆ ವಿಚಾರವಾಗಿ ಮಾತನಾಡಿದ ಸಚಿವ ಆರ್.ಅಶೋಕ್ (R.Ashok), ವೈದ್ಯಕೀಯ ಸೌಲಭ್ಯ ಕುರಿತಂತೆ ಚರ್ಚೆಯಾಗಲಿದೆ. ಕೋವಿಡ್ ಪ್ರಮಾಣ ಹೆಚ್ಚಾಗಿದೆ. ಆದರೆ ಸಾವಿನ ಪ್ರಮಾಣ ಕಡಿಮೆಯಿದೆ. ಬೇರೆ ರಾಜ್ಯಗಳಲ್ಲಿ‌ಸೋಂಕು‌ ತಗ್ಗುತ್ತಿದೆ ಎಂದು ಹೇಳಿದರು.

ಯಾರಿಗೋ ಸ್ವಲ್ಪ ಲಾಭವಾಗುತ್ತೆ ಅಂತ ರಿಲ್ಯಾಕ್ಸ್ ಇಲ್ಲ. ಲಕ್ಷಾಂತರ ಜನರನ್ನ ಕಷ್ಟಕ್ಕೆ ದೂಡುವುದಿಲ್ಲ. ವೀಕೆಂಡ್ ಕರ್ಪ್ಯೂ (Weekend Curfew) ಮಾಡುವ ಮನಸ್ಥಿತಿ ನಮಗಿಲ್ಲ ಎಂದರು. 

ಹೊಟೇಲ್ ಮಾಲಿಕರಾಗಲಿ, ಬೇರೆಯವರಾಗಲಿ ಯಾರ ಒತ್ತಡಕ್ಕೆ ನಾವು ಮಣಿಯುವುದಿಲ್ಲ. ತಜ್ಞರ ಸಲಹೆಯಂತೆ ನಾವು ನಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಮೇಕೆದಾಟು ಪಾದಯಾತ್ರೆಗೆ ಅಶೋಕ್ ಟಾಂಗ್:

ಬೆಟ್ಟ ಅಗೆದು ಇಲಿ ಹಿಡಿದ್ರು, ಇದು ಕಾಂಗ್ರೆಸ್ ನವರ ಮನಸ್ಥಿತಿ. ರ್ಯಾಲಿಯಲ್ಲಿ ಯಾರು ಮೊದಲಿರಬೇಕು, ಆ ನಂತರ ಯಾರು ಹಿಂದಿರಬೇಕು ಇದು ಅವರಲ್ಲಿತ್ತು. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮೇಲಾಟದ ಪಾದಯಾತ್ರೆ (Mekedatu Padayatre) ಎಂದು ವ್ಯಂಗ್ಯವಾಡಿದರು. 

ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ಸೋಂಕು: ಡಿಕೆಶಿ ವಿರುದ್ಧ ಬಿಜೆಪಿ ಗರಂ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More