Home> Karnataka
Advertisement

Mid Day Meal: 'ಅಕ್ಷರ ದಾಸೋಹ ಜೋಳಿಗೆ'... ಇಲ್ಲಿ ನಿತ್ಯವೂ ವಿದ್ಯಾರ್ಥಿಗಳಿಗೆ ಬಗೆಬಗೆ ಭೋಜನ!!

ಗುಂಡ್ಲುಪೇಟೆ (Gundlupet) ತಾಲೂಕಿನ ಹೊಂಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ " ಅಕ್ಷರ ದಾಸೋಹ ಜೋಳಿಗೆ" (Akshara Dasoha Jolige) ಎಂಬ ವಿಭಿನ್ನ ಪರಿಕಲ್ಪನೆ ಜಾರಿಯಿದ್ದು ಗ್ರಾಮಸ್ಥರು ತಾವು ಬೆಳೆದ ಹಣ್ಣು-ತರಕಾರಿಗಳನ್ನೂ ಹಾಗೂ ಸಮಾರಂಭಗಳಲ್ಲಿ ಮಾಡುವ ಸಿಹಿ ತಿನಿಸುಗಳನ್ನು ಶಾಲೆಗೆ ತಂದುಕೊಡುತ್ತಾರೆ. ಹೀಗಾಗಿ ಮಧ್ಯಾಹ್ನದ ಬಿಸಿಯೂಟದ ವೇಳೆ ನಿತ್ಯವೂ ಒಂದಲ್ಲ ಒಂದು ವಿಶೇಷ ತಿಂಡಿ ವಿದ್ಯಾರ್ಥಿಗಳ ತಟ್ಟೆಯಲ್ಲಿರಲಿದೆ.

Mid Day Meal: 'ಅಕ್ಷರ ದಾಸೋಹ ಜೋಳಿಗೆ'... ಇಲ್ಲಿ ನಿತ್ಯವೂ ವಿದ್ಯಾರ್ಥಿಗಳಿಗೆ ಬಗೆಬಗೆ ಭೋಜನ!!

ಚಾಮರಾಜನಗರ: ವಿದ್ಯಾರ್ಥಿಗಳಿಗೆ ಕೊಡಲಾಗುವ ಮಹತ್ವಾಕಾಂಕ್ಷೆಯ ಮಧ್ಯಾಹ್ನದ ಬಿಸಿಯೂಟ (Mid day meals) ಯೋಜನೆ ಬಗ್ಗೆ ಒಬ್ಬರಲ್ಲ ಒಬ್ಬರು ಮೂಗು ಮುರಿಯುತ್ತಲೇ ಇರುತ್ತಾರೆ. ‌ಆದರೆ, ಈ ಶಾಲೆ ಹಾಗಲ್ಲ, ನಿತ್ಯವೂ ವಿದ್ಯಾರ್ಥಿಗಳು ಚಪ್ಪರಿಸಿಕೊಂಡು ಬಗೆಬಗೆ ಆಹಾರ ಸೇವಿಸುತ್ತಾರೆ.

ಹೌದು..., ಗುಂಡ್ಲುಪೇಟೆ (Gundlupet) ತಾಲೂಕಿನ ಹೊಂಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ " ಅಕ್ಷರ ದಾಸೋಹ ಜೋಳಿಗೆ" (Akshara Dasoha Jolige) ಎಂಬ ವಿಭಿನ್ನ ಪರಿಕಲ್ಪನೆ ಜಾರಿಯಿದ್ದು ಗ್ರಾಮಸ್ಥರು ತಾವು ಬೆಳೆದ ಹಣ್ಣು-ತರಕಾರಿಗಳನ್ನೂ ಹಾಗೂ ಸಮಾರಂಭಗಳಲ್ಲಿ ಮಾಡುವ ಸಿಹಿ ತಿನಿಸುಗಳನ್ನು ಶಾಲೆಗೆ ತಂದುಕೊಡುತ್ತಾರೆ. ಹೀಗಾಗಿ ಮಧ್ಯಾಹ್ನದ ಬಿಸಿಯೂಟದ ವೇಳೆ ನಿತ್ಯವೂ ಒಂದಲ್ಲ ಒಂದು ವಿಶೇಷ ತಿಂಡಿ ವಿದ್ಯಾರ್ಥಿಗಳ ತಟ್ಟೆಯಲ್ಲಿರಲಿದೆ.

ಇದನ್ನೂ ಓದಿ- Free Admission: ಉತ್ತರಹಳ್ಳಿ ಪಿಯು ಕಾಲೇಜಿನಲ್ಲಿ ತರಗತಿಗಳಿಗೆ ಉಚಿತ ಪ್ರವೇಶ

ಶಾಲೆಯಲ್ಲಿ ಕೈತೋಟ ಮಾಡಿಕೊಂಡಿದ್ದು  ಸೊಪ್ಪು, ತರಕಾರಿಗಳನ್ನು (Vegetables) ಬೆಳೆಯಲಾಗುತ್ತದೆ.‌ ಇದರೊಟ್ಟಿಗೆ, ಗ್ರಾಮಸ್ಥರು ತಾವು ಬೆಳೆದ ಹಣ್ಣು- ತರಕಾರಿಯನ್ನು ತಂದು ಕೊಡಲಿದ್ದು ಹಣ್ಣುಗಳ ಕಾಲದಲ್ಲಿ ಅಂದರೆ ಹಲಸು, ಮಾವು, ನೇರಳೆ, ಬಾಳೆ ಸೇರಿದಂತೆ ವಿವಿಧ ಬಗೆಯ ಹಣ್ಣುಗಳನ್ನು, ಹಲಸಂದೆ, ಹೆಸರು, ಅವರೆ ಸೇರಿದಂತೆ ವಿವಿಧ ಕಾಳುಗಳನ್ನು ಕೂಡ ಅಕ್ಷರ ದಾಸೋಹ ಜೋಳಿಗೆಗೆ ತಂದುಕೊಡಲಿದ್ದಾರೆ.

ಮೊದಲ ಪಂಕ್ತಿ ಊಟ- ತಿಂಗಳಿಗೆ 15 ಸಿಹಿ ತಿಂಡಿ: 
ಗ್ರಾಮದಲ್ಲಿ ಏನೇ ಸಮಾರಂಭಗಳು ನಡೆದರೂ ಶಾಲಾ ಮಕ್ಕಳು (School Children) ಮೊದಲ ಪಂಕ್ತಿ ಭೋಜನ ಸವಿಯಲಿದ್ದಾರೆ. ಇನ್ನು, ಶಾಲೆಯಲ್ಲಿ ತಿಂಗಳಿಗೆ ಕನಿಷ್ಠವೆಂದರೂ ದಿನಬಿಟ್ಟು ದಿನ  ಒಂದೊಂದು ಸಿಹಿತಿಂಡಿ ಮಾಡಲಿದ್ದಾರೆ.‌ ಇವರ ಬಿಸಿಯೂಟದ ಮೆನುವಿನಲ್ಲಿ ಪಾಯಸ, ರವೆಉಂಡೆ, ಗುಲಾಬ್ ಜಾಮುನ್, ಕೊಬ್ಬರಿ ಮಿಠಾಯಿ, ಹೋಳಿಗೆ ಕೂಡ ಸೇರಿದ್ದು ಪೋಷಕರು ಒಂದೊಂದು ದಿನದ ಸಿಹಿ ತಿಂಡಿ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಇಲ್ಲಿನ ಎಲ್ಲಾ ವಿದ್ಯಾರ್ಥಿಗಳ ಹುಟ್ಟುಹಬ್ಬವೂ ಶಾಲೆಯಲ್ಲೇ ಆಚರಿಸಲಿದ್ದು ಆ ದಿನವೂ ಮಕ್ಕಳಿಗೆ ಸಿಹಿ ಊಟ ಹಾಕಲಾಗುತ್ತದೆ. 

ಇದನ್ನೂ ಓದಿ- Fight For Egg: ಮೊಟ್ಟೆ ಹಣಕ್ಕಾಗಿ ಶಿಕ್ಷಕರಿಬ್ಬರ ಬೀದಿ ಜಗಳ!

ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂಬ ಉಕ್ತಿಗೆ ನಿದರ್ಶನವಾಗಿ ಈ ಶಾಲೆ ರೂಪುಗೊಂಡಿದ್ದು ಮನೆಊಟವನ್ನೂ ಮೀರಿಸಿದ ವಿಶೇಷ ಭೋಜನ ಸವಿಯುತ್ತಿರುವುದು ನಿಜಕ್ಕೂ ಮಾದರಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More