Home> Karnataka
Advertisement

ಶಂಕಿತ‌ ಉಗ್ರರ ಬಂಧನದಿಂದ ದೊಡ್ಡ ಅನಾಹುತ ತಪ್ಪಿದೆ : ಎಡಿಜಿಪಿ ಅಲೋಕ್‌ ಕುಮಾರ್

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ‌ ಪ್ರಕರಣದಲ್ಲಿ ಕೆಲ ಸ್ಪೋಟಕ ಮಾಹಿತಿಗಳು ಲಭ್ಯವಾಗಿವೆ ಎಂದು ರಾಜ್ಯ ಸುವ್ಯವಸ್ಥೆ ವಿಭಾಗ ಎಡಿಜಿಪಿ ಅಲೋಕ್‌ ಕುಮಾರ್ ಮಾಹಿತಿ ನೀಡಿದ್ದಾರೆ. ಬಂಧನದಿಂದ‌ ಮುಂದಾಗುವ ಅನಾಹುತ ತಪ್ಪಿಸಲಾಗಿದೆ. ಮತ್ತೋರ್ವ ಶಂಕಿತ ನಾಪತ್ತೆಯಾಗಿದ್ದು ಆತನ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದಿದ್ದಾರೆ.

ಶಂಕಿತ‌ ಉಗ್ರರ ಬಂಧನದಿಂದ ದೊಡ್ಡ ಅನಾಹುತ ತಪ್ಪಿದೆ : ಎಡಿಜಿಪಿ ಅಲೋಕ್‌ ಕುಮಾರ್

ಬೆಂಗಳೂರು: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ‌ ಪ್ರಕರಣದಲ್ಲಿ ಕೆಲ ಸ್ಪೋಟಕ ಮಾಹಿತಿಗಳು ಲಭ್ಯವಾಗಿವೆ ಎಂದು ರಾಜ್ಯ ಸುವ್ಯವಸ್ಥೆ ವಿಭಾಗ ಎಡಿಜಿಪಿ ಅಲೋಕ್‌ ಕುಮಾರ್ ಮಾಹಿತಿ ನೀಡಿದ್ದಾರೆ. ಬಂಧನದಿಂದ‌ ಮುಂದಾಗುವ ಅನಾಹುತ ತಪ್ಪಿಸಲಾಗಿದೆ. ಮತ್ತೋರ್ವ ಶಂಕಿತ ನಾಪತ್ತೆಯಾಗಿದ್ದು ಆತನ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದಿದ್ದಾರೆ.

ಶಿವಮೊಗ್ಗ ಪೊಲೀಸರ ವಿಶೇಷ ತನಿಖಾ ತಂಡ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಾದ ಶಿವಮೊಗ್ಗದ ಸೈಯ್ಯದ್‌ ಯಾಸಿನ್‌ (21) ಹಾಗೂ ಮಂಗಳೂರಿನ ಮಾಜ್‌ ಮುನೀರ್‌ (22) ಎಂಬುವರನ್ನು ಕಳೆದ ಮಂಗಳವಾರ ಬಂಧಿಸಿತ್ತು. ವಿಚಾರಣೆ ವೇಳೆ‌ ಶಂಕಿತರು ತುಂಗಾ ನದಿ ತೀರದಲ್ಲಿ ಪ್ರಾಯೋಗಿಕವಾಗಿ ಬಾಂಬ್ ಸ್ಫೋಟಿಸಿದ್ದರು ಎಂಬ ವಿಚಾರ ಹೊರಬಂದಿತ್ತು. ಈ ಸಂಬಂಧ‌‌‌ ಅಲೋಕ್‌‌ ಕುಮಾರ್ ಮಾಹಿತಿ ನೀಡಿದ್ದು, ನದಿ ತೀರದಲ್ಲಿ ಯಾರು ಇಲ್ಲದ ಜಾಗ ಗುರುತಿಸಿ ಟ್ರಯಲ್ ಬ್ಲಾಸ್ಟ್ ಮಾಡಿದ್ದಾರೆ. ಬ್ಲಾಸ್ಟ್ ಮಾಡಿದ ನಂತರ ಗುರುತು ಉಳಿಯದಂತೆ ನದಿಯಲ್ಲಿ ಅವಶೇಷಗಳು ತೇಲಿ ಹೋಗುತ್ತವೆ. ಹೀಗಾಗಿ ನದಿತೀರವನ್ನ ಆಯ್ಕೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಭಿಲ್ವಾರ ಕಿಂಗ್ಸ್- ಇಂಡಿಯಾ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಗೆಲುವು ಈ ತಂಡಕ್ಕೆ ಪಕ್ಕಾ! 

ಶಿವಮೊಗ್ಗ ಪೊಲೀಸರ ತನಿಖೆಯಿಂದ ಸ್ಲೀಪರ್ ಸೆಲ್ ಗಳನ್ನ ರೀಚ್ ಆಗಿದ್ದೇವೆ. ನಾಪತ್ತೆಯಾಗಿರುವ ಶಂಕಿತ ಶಾರೀಕ್‌‌ ಮೊಹಮ್ಮದ್ ಟಾರ್ಗೆಟ್ ಸೆಲೆಕ್ಟ್ ಮಾಡುವ ಕೆಲಸ ಮಾಡುತ್ತಿದ್ದ. ಶಾರೀಕ್ ಸಿಕ್ಕಿದ ನಂತರ ಶಂಕಿತರ ಉದ್ದೇಶ ಗೊತ್ತಾಗಲಿದೆ. 1947 ರಲ್ಲಿ ಬ್ರಿಟಿಷ್ ರಿಂದ ಸಿಕ್ಕ ಸ್ವಾತಂತ್ರ್ಯ ನಿಜವಾದ ಸ್ವತಂತ್ರಲ್ಲ. ಪ್ರಪಂಚದಲ್ಲಿ ಷರಿಯತ್ ಕಾನೂನು ಜಾರಿಯಾಗಬೇಕು ಎಂದ ಐಸಿಸ್ ವಿಚಾರಧಾರೆಯನ್ನು ಬಂಧಿತರು ಹೊಂದಿದ್ದಾರೆ. ಬಂಧಿತರಿಗೆ ಕರ್ನಾಟಕದಲ್ಲಿ ಆಸ್ತಿ ನಾಶ ಮಾಡುವ ಉದ್ದೇಶವಿತ್ತು.

ಆರೋಪಿಗಳಿರುವ ಸ್ಥಳದಲ್ಲಿ ಬಾಂಬ್ ತಯಾರಿಕೆಯ ಕಚ್ಚಾವಸ್ತುಗಳು ಹಾಗೂ ಬಾಂಬ್ ತಯಾರಿಕೆಯ ಬಗ್ಗೆ ಮಾಹಿತಿ ಇರುವ ಪಿಡಿಎಫ್ ಸಿಕ್ಕಿದೆ. ಶಿವಮೊಗ್ಗ ಪೊಲೀಸರ ಕಾರ್ಯಾಚರಣೆಯಿಂದ ಮುಂದೆ ಆಗುವ ಭಾರೀ ಅನಾಹುತ ತಪ್ಪಿದೆ. 2020 ರಲ್ಲಿ ಕದ್ರಿ ಈಸ್ಟ್ ಪೊಲೀಸ್ ಠಾಣೆಯಲ್ಲಿ  ತಲೆಮರೆಸಿಕೊಂಡಿರುವ ಮಾಜ್ ಮುನೀರ್ ಹಾಗೂ ಶಾರೀಕ್ ಮೇಲೆ ಕೇಸ್‌ ದಾಖಲಾಗಿತ್ತು.

ಇವರು ಕಳೆದ ಎರಡು ವರ್ಷಗಳಿಂದ ಶಂಕಿತ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿ ರಾಜ್ಯದ ಶಾಂತಿ ಕೆಡಿಸುವ ಬಗ್ಗೆ ಸಂಚು ರೂಪಿಸಿದ್ದರು. ಶಾರೀಕ್ ಸಿಕ್ಕ ನಂತರ ಇವರ ಜೊತೆ ಯಾರೆಲ್ಲಾ ಇದ್ದಾರೆ ಎಂಬುವುದು ಗೊತ್ತಾಗಲಿದೆ. ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ (ಯುಎಪಿಎ) ಅಡಿ ದಾಖಲಾಗಿರುವುದರಿಂದ ಪ್ರಕರಣ ಎನ್ಐಎ ಗೆ ವರ್ಗಾವಣೆ ಆಗಲಿದೆ ಎಂದು ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More