Home> Karnataka
Advertisement

ನೆನಪಿರಲಿ ರಾಜ್ಯದಲ್ಲೂ ನಾಳೆ ಹೆದ್ದಾರಿ ಬಂದ್ ! ನಾಳೆ ಬಂದ್ ಆಗೋ ಹೆದ್ದಾರಿಗಳ ಪಟ್ಟಿ ದೊಡ್ಡದಿದೆ !

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ (Farmer Protest) ರಾಜ್ಯದಲ್ಲೂ ಬೆಂಬಲ ವ್ಯಕ್ತವಾಗಿದೆ.

 ನೆನಪಿರಲಿ ರಾಜ್ಯದಲ್ಲೂ ನಾಳೆ  ಹೆದ್ದಾರಿ ಬಂದ್ ! ನಾಳೆ ಬಂದ್ ಆಗೋ ಹೆದ್ದಾರಿಗಳ ಪಟ್ಟಿ ದೊಡ್ಡದಿದೆ !

ಬೆಂಗಳೂರು : ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ (Farmer Protest) ರಾಜ್ಯದಲ್ಲೂ ಬೆಂಬಲ ವ್ಯಕ್ತವಾಗಿದೆ. ದೆಹಲಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತ ಪಡಿಸಿ ರಾಜ್ಯದಲ್ಲೂ ಹೆದ್ದಾರಿ ಬಂದ್ ಆಗಲಿದೆ. ಫೆಬ್ರವರಿ 6 ರಂದು 12 ಗಂಟೆಯಿಂದ 3 ಗಂಟೆಯ ತನಕ ಹೆದ್ದಾರಿ ಬಂದ್  ಮಾಡಲು ನಿರ್ಧರಿಸಲಾಗಿದೆ. 

ನಾಳೆ ಯಾವ ಯಾವ ಹೆದ್ದಾರಿ ಬಂದ್ ಆಗಬಹುದು ಗೊತ್ತಾ..?

ರೈತ ನಾಯಕ ಕುರುಬೂರು ಶಾಂತಕುಮಾರ್ (Kuraburu Shanta Kumar)  ಮುಂದಾಳತ್ವದಲ್ಲಿ ರಾಜ್ಯದಲ್ಲೂ ಹೆದ್ದಾರಿ ಬಂದ್ ಆಗಲಿದೆ. ಶನಿವಾರ ಬೆಂಗಳೂರು (Bengaluru) -ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿ, ಬೆಂಗಳೂರು-ಮೈಸೂರು ಹೆದ್ದಾರಿ ಬಂದ್ ಆಗಲಿದೆ. ಬೆಂಗಳೂರು – ಮೈಸೂರು ರಸ್ತೆಯನ್ನು 2 ಕಡೆ ಬಂದ್ ಮಾಡಲು ತೀರ್ಮಾನಿಸಲಾಗಿದೆ. ರೈತ ನಾಯಕ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಬಿಡದಿ, ಮಂಡ್ಯ, ರಾಯಚೂರಿನ ಅಸ್ಕಿಹಾಲ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆಗೆ ಯೋಜಿಸಲಾಗಿದೆ. ಇನ್ನೋರ್ವ ರೈತ ನಾಯಕ  ಚಾಮರಸ ಮಾಲಿ ಪಾಟೀಲ್ ನೇತೃತ್ವದಲ್ಲಿ ಶನಿವಾರ ರಾಜ್ಯದ ಹಲವೆಡೆ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಬಂದ್ ಮಾಡಲು ತೀರ್ಮಾನಿಸಲಾಗಿದೆ. 

ಇದನ್ನೂ ಓದಿ : Farmers Bill: ರೈತರ ಕೃಷಿ ಮಸೂದೆಗೆ ಬೆಂಬಲ ಸೂಚಿಸಿದ ಅಮೇರಿಕ..!

ಇಷ್ಟೇ ಅಲ್ಲ, ಬೆಂಗಳೂರು-ಗೋವಾ, ಬೆಂಗಳೂರು-ಹೈದರಾಬಾದ್, ಬೆಂಗಳೂರು-ಪುಣೆ, ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು-ಮೈಸೂರು, ಬೆಂಗಳೂರು-ಚಾಮರಾಜನಗರ, ಬೆಂಗಳೂರು-ಮಾಗಡಿ ರೋಡ್, ಬೆಂಗಳೂರು-ಶಿವಮೊಗ್ಗ, ಬೆಂಗಳೂರು-ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿಗಳೂ ಬ್ಲಾಕ್ ಆಗುವ ಸಾಧ್ಯತೆಗಳಿವೆ. ಈ ಎಲ್ಲಾ ಹೆದ್ದಾರಿಗಳನ್ನು ಮೂರು ಗಂಟೆಗಳ ಕಾಲ ಬ್ಲಾಕ್ ಮಾಡಲು ರೈತರು (Farmers) ನಿರ್ಧರಿಸಿದ್ದಾರೆ. 

ಬೆಂಗಳೂರಿನಲ್ಲಿ ಎತ್ತಿನಗಾಡಿ ಮೆರವಣಿಗೆ : 
ರಾಜ್ಯದ ಹೆದ್ದಾರಿಗಳು ನಾಳೆ ಬಂದ್ ಆಗುವುದರ ಜೊತೆಗೆ ರಾಜಧಾನಿಯಲ್ಲಿ (Bangaluru) ಎತ್ತಿನ ಗಾಡಿ (Bullock cart) ಮೆರವಣಿಗೆ ನಡೆಸಲು ರೈತರು ನಿರ್ಧರಿಸಿದ್ದಾರೆ.ಎತ್ತಿನಗಾಡಿಯ ಮೂಲಕ ಶನಿವಾರ ಬೆಂಗಳೂರಿನಲ್ಲಿ ರೈತರ ಪ್ರತಿಭಟನೆ (Farmer Protest) ನಡೆಯಲಿದೆ.  ರಾಜ್ಯದ ವಿವಿಧೆಡೆಗಳಿಂದ ರೈತರು ಎತ್ತಿನಗಾಡಿಯಲ್ಲಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಸರ್ಕಾರಕ್ಕೆ ಬಿಸಿಮುಟ್ಟಿಸಲು ಈ ಚಳವಳಿ ನಡೆಯುತ್ತಿದೆ. ಹಾಗಾಗಿ, ಸಿಲಿಕಾನ್ ಸಿಟಿ ನಾಳೆ ಟ್ರಾಫಿಕ್ ಜಾಮ್ (Bangaluru Traffic)  ಸಂಕಟಕ್ಕೆ ಗುರಿಯಾಗಲಿದೆ. 

ಇದನ್ನೂ ಓದಿ : Farmers Protest ಬಗ್ಗೆ ಅಮೆರಿಕ ಹೇಳಿಕೆಗೆ ಭಾರತ ಪ್ರತಿಕ್ರಿಯಿಸಿದ್ದು ಹೀಗೆ

ದೆಹಲಿ ಪ್ರತಿಭಟನೆಯಲ್ಲಿ ಕರ್ನಾಟಕದ ರೈತರು ಭಾಗಿ:
ದೆಹಲಿ ಪ್ರತಿಭಟನೆಯಲ್ಲಿ ಈಗಾಗಲೇ ಕರ್ನಾಟಕದ ರೈತರು ಕೂಡಾ ಪಾಲ್ಗೊಂಡಿದ್ದಾರೆ. ಈಗಾಗಾಲೆ ಹಲವಾರು ರೈತ ನಾಯಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಫೆ.6 ರಂದು ನಡೆಯುವ ರಾಷ್ಟ್ರೀಯ ಹೆದ್ದಾರಿ ತಡೆ, ಚಕ್ಕಾ ಜಾಮ್ ಚಳವಳಿಯಲ್ಲಿ ರಾಜ್ಯದ ರೈತರು ಭಾಗಿಯಾಗಲಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ (Kodihalli Chandrashekar) ನೇತೃತ್ವದಲ್ಲಿ ಸುಮಾರು 500 ರೈತರು ದೆಹಲಿಗೆ ತೆರಳಿದ್ದು, ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Read More