Home> Karnataka
Advertisement

ಕರ್ನಾಟಕ ದರ್ಶನ ಅಧ್ಯಯನ ಪ್ರವಾಸ ಪುನರಾರಂಭ

ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮವು ಮರು ಆರಂಭವಾಗಿದ್ದು , ಪ್ರವಾಸೋದ್ಯಮದ ಸಹಯೋಗದೊಂದಿಗೆ ವಿನ್ಯಾಸಗೊಳಿಸಲಾಗಿದೆ .ಡಿಡಿಪಿಐ ಷಣ್ಮುಖ ಸ್ವಾಮಿ ಕಾಲಡಿಮಠ ಸೋಮವಾರ ಪ್ರವಾಸಕ್ಕೆ ಚಾಲನೆ ನೀಡಿದರು.
 

 ಕರ್ನಾಟಕ ದರ್ಶನ ಅಧ್ಯಯನ ಪ್ರವಾಸ  ಪುನರಾರಂಭ

 ಧಾರವಾಡ: ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮವು ಮರು ಆರಂಭವಾಗಿದ್ದು , ಪ್ರವಾಸೋದ್ಯಮದ ಸಹಯೋಗದೊಂದಿಗೆ ವಿನ್ಯಾಸಗೊಳಿಸಲಾಗಿದೆ  ಧಾರವಾಡ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಅಶ್ವಿನಿ ಸಿ. ಹೇಳಿದರು. ಡಿಡಿಪಿಐ ಷಣ್ಮುಖ ಸ್ವಾಮಿ ಕಾಲಡಿಮಠ ಸೋಮವಾರ ಪ್ರವಾಸಕ್ಕೆ ಚಾಲನೆ ನೀಡಿದರು.

ಈ ಪ್ರವಾಸ ಕಾರ್ಯಕ್ರಮದಲ್ಲಿ  ಧಾರವಾಡ, ಮೈಸೂರು, ಚಿಕ್ಕಮಗಳೂರು, ಮಂಡ್ಯ, ಹಾಸನ  ಹಾಗೂ ರಾಜ್ಯದ ಮುಖ್ಯವೆನಿಸುವ ಸ್ಥಳಗಳಿಗೆ ಪ್ರವಾಸಕ್ಕೆ  ಕಳುಹಿಸಲಾಗುವುದು.ಧಾರ್ಮಿಕ, ಭೌಗೋಳಿಕ, ನೈಸರ್ಗಿಕ, ಐತಿಹಾಸಿಕ ಪ್ರಾಮುಖ್ಯತೆ, ವೈಜ್ಞಾನಿಕ "ಶೈಕ್ಷಣಿಕ ಜೀವನವನ್ನು ರೂಪಿಸುವಲ್ಲಿ ಮಾರ್ಗದರ್ಶನ ಪಡೆಯಲು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಉಪ ಯೋಜನಾ ಸಂಘದಿಂದ ಯೋಜಿಸಲಾಗಿದೆ.

ಇದನ್ನೂ ಓದಿ: 59 ಯೋಜನೆಗಳ ರೂ. 3,455.39 ಕೋಟಿ ಬಂಡವಾಳ ಹೂಡಿಕೆ ಪ್ರಸ್ತಾವನೆಗಳಿಗೆ ಏಕಗವಾಕ್ಷಿ ಸಮಿತಿ ಅನುಮೋದನೆ

ನಾಲ್ಕು ದಿನಗಳ ಪ್ರವಾಸಕ್ಕೆ ಒಂದು ಬಸ್ ಒದಗಿಸಲಾಗಿದೆ ಎಂದು ಹೇಳಿದರು.ಪ್ರತಿ ತಾಲೂಕುನಿಂದ  55 ಶಿಕ್ಷಕರು ಸೇರಿ  ಒಟ್ಟಾರೆಯಾಗಿ, 728 ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಆಯ್ಕೆ ಮಾಡಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ತಿಳಿಸಿದರು 
ಈ ಪ್ರವಾಸ ಕಾರ್ಯಕ್ರಮವು .ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಓದುತ್ತಿರುವ   ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸೀಮಿತವಾಗಿದೆ. ಪ್ರತಿ ವಿದ್ಯಾರ್ಥಿಗೆ 3,500 ರೂ.ಗಳನ್ನು ಪ್ರವಾಸಕ್ಕಾಗಿ ನೀಡಲಾಗುವುದೆಂದು ತಿಳಿಸಿದರು.  

ಇದನ್ನೂ ಓದಿ: ಮತದಾನ ಅಧಿಕಾರ ಮಾತ್ರವಲ್ಲ, ಕರ್ತವ್ಯವೂ ಹೌದು,  ರಾಜ್ಯಪಾಲರು....

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More